ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಿ: ಸಿದ್ಧರಾಮಶ್ರೀ

ನಾಗನೂರ ಗ್ರಾಮದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ,ಧಾಮರ್ಿಕ ಸಭೆಯಲ್ಲಿ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಆಶೀರ್ವಚನ

ಬೈಲಹೊಂಗಲ 22: ಬದುಕಿನಲ್ಲಿ ಸ್ವಾರ್ಥ ಬಯಸದೇ ನಿಸ್ವಾರ್ಥತೆಯಿಂದ ಸಮಾಜ ಸೇವೆ ಮಾಡಿ ಭಗವಂತನಿಗೆ ಋಣಮುಕ್ತರಾಗಬೇಕೆಂದು ಗದಗ-ಡಂಬಳದ ಜಗದ್ಘುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

ಅವರು ತಾಲೂಕಿನ ನಾಗನೂರ ಗ್ರಾಮದ ಶಿವಬಸವ ಸಭಾಭವನದಲ್ಲಿ ಬೈಲಹೊಂಗಲದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಾಗನೂರ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮೀತಿ ಸಂಪಗಾಂವ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ ನಡೆದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾಮರ್ಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

    ಧರ್ಮಸ್ಥಳದ ಧಮರ್ಾಧಿಕಾರಿ ಡಾ.ವಿರೇಂದ್ರ ಹೆಗಡೆ ಅವರು ಸಮಾಜದಲ್ಲಿ ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಆ ಮೂಲಕ ಜನರನ್ನು ಸ್ವಾವಲಂಬಿಯನ್ನಾಗಿ ರೂಪಿಸಿ ಸದೃಢ ದೇಶ ನಿಮರ್ಾಣಕ್ಕೆ ಪ್ರಯತ್ನಿಸುತ್ತಿರುವದು ಹೆಮ್ಮೆಯಾಗಿದೆ. ಯೋಜನೆಗಳ ಜೊತೆಗೆ ಜನರಲ್ಲಿ ಭಕ್ತಿ-ಧಾಮರ್ಿಕ ಭಾವನೆಗಳನ್ನು ತುಂಬುತ್ತಿರುವ ಅವರ ಕಾರ್ಯಗಳಿಗೆ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಕೇವಲ ಡಾಂಭಿಕ ಭಕ್ತಿ ಮಾಡದೇ ಕಾಯಕದಲ್ಲಿ ಕೈಲಾಸ ಕಾಣಬೇಕೆಂದರು.

      ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ನಿದೆರ್ೇಶಕ ಸುರೇಶ ಮೊಯಿಲಿ ಮಾತನಾಡಿ, ರಾಜ್ಯಾದ್ಯಂತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಡವ ಬಲ್ಲಿದ ಎನ್ನದೇ ಸಕರ್ಾರದ ಯೋಜನೆಗಳನ್ನು ಸಂಸ್ಥೆಯ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ನಿರ್ವಹಿಸಿಕೊಂಡು ಸಾಗುತ್ತಿದ್ದು ಗ್ರಾಮಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸ್ವ ಉದ್ಯೋಗಕ್ಕೆ ಪೂರಕ ತರಬೇತಿ, ಸ್ವ ಸಹಾಯ ಸಂಘಗಳಿಗೆ ಜ್ಞಾನ ವಿಕಾಸ ಕಾರ್ಯಕ್ರಮ, ರೈತರಿಗೆ ಉತ್ತೇಜನ ನೀಡಲು ಕೃಷಿ ಮೇಳ, ಮದ್ಯವ್ಯಸನ ಎಂಬ ದುಶ್ಚಟ ಬಿಡಿಸಲು ಮದ್ಯವರ್ಜನ ಶಿಬಿರ, ಸಾಧಕರಿಗೆ ಸಾಧನಾ ಸಮಾವೇಶ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಜಂಜಡದಿಂದ ಮುಕ್ತರಾಗಲು ಕಾರ್ಯಕರ್ತರ ಸ್ನೇಹಕೂಟ ಇನ್ನೂ ಮುಂತಾದ ಪ್ರಗತಿಪರ ಕಾರ್ಯಗಳನ್ನು ಕೈಗೆತ್ತಿಕೊಂಡು ಜನಮುಖಿಯಾಗಿದೆ ಎಂದರು.

    ತಾ.ಪಂ.ಸದಸ್ಯ ರವಿ ಗದಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೇಗುಣಿಸಿಯ ವಿರಕ್ತಮಠದ ಮಹಾಂತದೇವರು, ಜಿ.ಪಂ.ಸದಸ್ಯೆ ಲಾವಣ್ಯ ಶಿಲ್ಲೇದಾರ, ನೇಸರಗಿಯ ಪಿಎಸ್ಆಯ್ ರಾಯಗೊಂಡ ಜಾನರ, ಗ್ರಾ.ಪಂ.ಉಪಾಧ್ಯಕ್ಷ ಬಸವರಾಜ ತಲ್ಲೂರ, ಮಾಜಿ ಸೈನಿಕ ವಿನೋದ ಶಿವನಾಯ್ಕರ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ಗ್ರಾಮದ ಒಕ್ಕೂಟದ ಅಧ್ಯಕ್ಷ್ಯೆ ಸುನಂದಾ ಜಾಡರ ಪ್ರಾಥರ್ಿಸಿದರು. ತಾಲೂಕಾ ಯೋಜನಾಧಿಕಾರಿ ಕೆ.ಪುರಷೋತ್ತಮ ಸ್ವಾಗತಿಸಿದರು. ಶಿಕ್ಷಕ ಪ್ರಕಾಶ ನಾಯ್ಕರ ನಿರೂಪಿಸಿದರು. ವಲಯ ಮೇಲ್ವಚಾರಕಿ ಸಿ. ವಂದನಾ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

    ಇದಕ್ಕೂ ಮುಂಚೆ ಗದಗಯ್ಯ ಹಿರೇಮಠ ಅವರ ನೇತೃತ್ವದಲ್ಲಿ 101 ದಂಪತಿಗಳಿಂದ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು. ಸುಮಂಗಲಿಯರಿಂದ ಕುಂಭಮೇಳ ವಿವಿಧ ಬೀದಿಗಳಲ್ಲಿ ಜರುಗಿತು. ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.