ಲೋಕದರ್ಶನ ವರದಿ
ಶಿರಹಟ್ಟಿ 28: ಪಟ್ಟಣದ ಸರಕಾರಿ ತಾಲೂಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಆಸ್ಪತ್ರೆಯ ವೈದ್ಯರಾದ ಚಂದ್ರು ಲಮಾಣಿ ರಕ್ತ ದಾನ ಮಾಡುವದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ರಕ್ತವನ್ನು ಬೇರೆ ವಸ್ತುಗಳಿಂದ ತಯಾರಿಸಲು ಸಾಧ್ಯವಿಲ್ಲ. ದಾನಿಗಳು ನೀಡಿರುವ ರಕ್ತವನ್ನು ಶೆಖರಿಸಿ ಅವಶ್ಯವಿರುವ ಜೀವಿಗಳಿಗೆ ಹಾಕಬಹುದು. ರಕ್ತ ದಾನ ಒಂದು ಶ್ರೇಷ್ಠದಾನ, ನಿಮ್ಮ ಅಮೂಲ್ಯವಾದ ರಕ್ತದಾನದಿಂದ ಬೆರೊಬ್ಬರ ಜೀವವನ್ನು ಉಳಿಸಬಹುದು. ಕಾರಣ ಪಟ್ಟಣದ ಎಲ್ಲ ಇಲಾಖೆಗಳಿಗೆ, ಶಾಲೆಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಶಿಬಿರಕ್ಕೆ ಬಂದು ರಕ್ತದಾನ ಮಾಡುವಂತೆ ಕೊರಲಾಗಿದೆ ಅದರಂತೆ ಅವರು ರಕ್ತದಾನ ಶಿಬಿರಕ್ಕೆ ಬಂದುರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸುವರೆಂಬ ನಂಬಿಕೆಯಿದೆ ಎಂದು ಹೇಳಿದರು.
ರಕ್ತದಾನ ಮಾಡಲು ಬಂದ ದಾನಿಗಳನ್ನು ಮೊದಲು ಅವರ ರಕ್ತ ತಪಾಸಣೆ ಮಾಡಿ ಅವರಿಗೆ ಹಣ್ಣಿನ ರಸ ಹಾಗೂ ಬಿಸ್ಕಿಟ್ ನೀಡಲಾಯಿತು. ಬೆಳಿಗ್ಗೆ 7 ಘಂಟೆಗೆ ಆರಂಭವಾಗ ಬೇಕಿದ್ದ ಶಿಬಿರ 10.30 ಗಂಟೆಗೆ ಪ್ರಾರಂಭವಾಯಿತು. ಆದರೆ ಶಿಬಿರ ಅಂದುಕೊಂಡಂತೆ ಯಶಸ್ವಿಯಾಗಲಿಲ್ಲ. ಕೇವಲ 35 ಜನ ಮಾತ್ರ ರಕ್ತದಾನ ಮಾಡಿದರು. ಇನ್ನೂ ಸರಕಾರಿ ಹಾಗೂ ಅರೆ ಸರಕಾರಿ ಸಿಬ್ಬಂದಿ ರಕ್ತದಾನ ಮಾಡುವಂತೆ ಕೊರಿದ್ದರು ಬೆರಳಣಕೆಯಲ್ಲಿ ಅವರು ಭಾಗವಹಿಸಿದ್ದರು.
ಸಿಪಿಐ ಬಾಲಚಂದ್ರ ಲಕ್ಕಂ, ಅಕ್ಬರ ಯಾದಗಿರಿ, ಮುತ್ತುರಾಜ ಭಾವಿಮನಿ, ಸಂತೋಷ ಕುಬೇರ, ಅಶೋಕ ಕೆ.ಪಿ, ಎಸ್.ಬಿ.ಪಾಟೀಲ, ಚನ್ನಪ್ಪಾ ಹೊಸಮನಿ, ವಿರುಪಾಕ್ಷಯ್ಯಾ ಹಿರೇಮಠ, ಲಾವಣ್ಯಾ ಎಲ್, ಮಂಜುನಾಥ ಕರಿಯನಗೌಡರ, ಕಿರಣ ಕರಡ್ಡಿ ಮುಂತಾದವರು ಇದ್ದರು.