ಎಸ್ಸಿ-ಎಸ್ಟಿ ನೌಕರರಿಂದ ಸ್ವಾಭಿಮಾನ ಹೋರಾಟ ದಿನಾಚರಣೆ

ಲೋಕದರ್ಶನ ವರದಿ

ವಿಜಯಪುರ 06: ಬಡ್ತಿ ಮೀಸಲಾತಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕನರ್ಾಟಕ ರಾಜ್ಯ ಎಸ್.ಸಿ. -ಎಸ್.ಟಿ. ನೌಕರರ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಲಾಯಿತು. 

ಡಾ.ಅಂಬೇಡ್ಕರ ಅವರ ಮಹಾಪರಿನಿವರ್ಾಣ ದಿನವನ್ನೇ ನೌಕರರು ಸ್ವಾಭಿಮಾನ ಹೋರಾಟ ದಿನವನ್ನಾಗಿ ಆಚರಿಸುವ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿದರು.

ನಿಯೋಗದ ನೇತೃತ್ವ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಬಿ.ಎಚ್. ನಾಡಗೇರಿ ಮಾತನಾಡಿ, ಕಳೆದ  21 ತಿಂಗಳುಗಳಿಂದ  ಹೋರಾಟ  ನಡೆಸುತ್ತಿದ್ದರೂ ಮೀಸಲಾತಿ ಆಧಾರದಲ್ಲಿ ಬಡ್ತಿ ಪಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸರಕಾರಿ ನೌಕರರಿಗೆ ತತ್ಪರಿಣಾಮ  ಜೇಷ್ಟತೆ ವಿಸ್ತರಿಸುವ ಕಾಯ್ದೆ  -2017 ಗೆ ಇದುವರೆಗೂ ಅನುಷ್ಠಾನಗೊಳಿಸದಿರುವುದು ಖಂಡನಾರ್ಹ. ಸಕರ್ಾರಗಳ ಈ ವಿಳಂಬ ನಡೆ ಸಾವಿರಾರು ನೌಕರರಲ್ಲಿ  ಅನುಮಾನ ಮತ್ತು ಆತಂಕವನ್ನು ತಂದಿದೆ. ಈ ಪ್ರಕರಣದಿಂದಾಗಿ ಈಗಾಗಲೇ  3799 ನೌಕರರು ಹಿಂಬಡ್ತಿ ಹೊಂದಿದ್ದು ಸುಮಾರು  60,000ಕ್ಕೂ ಹೆಚ್ಚು ನೌಕರರು ನೋವನ್ನು ಅನುಭವಿಸುತ್ತಿದ್ದಾರೆ ಪ್ರತಿದಿನ ಆತಂಕದಲ್ಲಿ ಜೀವಿಸುತ್ತಿದ್ದಾರೆ ಎಂದರು. ಕೂಡಲೇ ಸಕರ್ಾರ ತ್ವರಿತಗತಿಯಲ್ಲಿ ಈ ಕಾಯ್ದೆ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಸಲಹಾ ಸಮಿತಿ ಸದಸ್ಯ ಅಡಿವೆಪ್ಪ ಸಾಲಗಲ್ಲ ಮಾತನಾಡಿ, ಸಾಮಾಜಿಕವಾಗಿ ಅಸ್ಪೃಶ್ಯರಾಗಿ ಜನ್ಮತಾಳಿದ ಮನುಷ್ಯ ಅಸ್ಪೃಶ್ಯನಾಗಿಯೇ  ಸಾಯುತ್ತಾನೆ. ವಿದ್ಯಾವಂತರಾಗಿ, ಬುದ್ದಿವಂತರಾಗಿ, ಎಷ್ಟೇ ಬೆಳೆದರೂ ಈ ಸಮಾಜ ಆತನನ್ನು ಆಸ್ಪೃಶ್ಯನನ್ನಾಗಿಯೆ  ಕಾಣುತ್ತದೆ. ಇದರಿಂದಾಗಿಯೇ ಕನರ್ಾಟಕ ರಾಜ್ಯ ಸರಕಾರಿ ಸೇವೆಯಲ್ಲಿ ಮೀಸಲಾತಿಯಿಂದ ನೌಕರಿ ಪಡೆದ ಆಸ್ಪೃಶ್ಯ ಬಡ್ತಿಯಿಂದ ವಂಚಿತನಾಗಿ ನಿವೃತ್ತಿ ಹೊಂದುತ್ತಿದ್ದಾರೆ ಎಂದು ನೋವಿನಿಂದ ನುಡಿದರು. ಕಾಯ್ದೆ ಅನುಷ್ಠಾನಕ್ಕೆ ಯಾವುದೇ ಬಾಧಕ ಇಲ್ಲದಿದ್ದರೂ ರಾಜ್ಯ ಸರಕಾರ ನ್ಯಾಯಾಲಯದ ನೆಪವೊಡ್ಡಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿದರು. 

ಸಂಘಟನೆ ಗೌರವಾಧ್ಯಕ್ಷ ಬಸವಂತ ಗುಣದಾಳ,  ಅಮರಪ್ಪ ಚಲವಾದಿ,  ಪ್ರಕಾಶ ಕಟ್ಟಿಮನಿ,  ಎಸ್.ಬಿ. ನಿಂಬರಗಿ,  ಬಿ.ಟಿ. ವಾಘಮೋರೆ, ಅನೀಲ ಉಕ್ಕಲಿ, ಆರ್.ಸಿ. ತಳವಾರ, ಆರ್.ಬಿ. ಬಡಿಗೇರ, ರವಿ ಯಲ್ಲಡಗಿ, ಆರ್.ಆರ್. ಕಾಂಬಳೆ, ರವಿ ಜಾಧವ, ಎಸ್.ಎಚ್. ಹಡಲಗೇರಿ, ಎಂ.ಎಂ. ಮುಂಡೇವಾಡಿ, ಭಗವಂತ ಜಿಗಜಿಣಗಿ, ವಿನಾಯಕ ಅವದಿ ಉಪಸ್ಥಿತರಿದ್ದರು.