ಬೆಳಗಾವಿ 11: ನಿರುದ್ಯೋಗ ಸಮಸ್ಯೆ ಸಮಾಜಕ್ಕೆ ಅಂಟಿದ ಕಳಂಕ. ಇದನ್ನು ನಿಮರ್ೂಲನೆ ಮಾಡಿ ಸಮಾಜದ ಸರ್ವತೋಮುಖ ಅಭಿವೃದ್ಧಿ ಮಾಡಬೇಕಾದದ್ದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಅದಕ್ಕಾಗಿ ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಕೋಳಿ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಂಡಿದ್ದು ಅದರ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ಎಲ್ಲರೂ ಆತ್ಮ ವಿಶ್ವಾಸದಿಂದ ಕೆಲಸ ಆರಂಭಿಸಿ ಯಶಸ್ವಿ ಉದ್ಯೋಗಿಗಳಾಗಿ ಬೆಳೆಯಿರಿ ಎಂದು ಬೆಳಗಾವಿ ಮಾರುತಿ ಗಲ್ಲಿ ಸಿಂಡಿಕೇಟ್ ಬ್ಯಾಂಕ ಶಾಖಾ ಪ್ರಬಂಧಕ ಕೆ ಆರ್ ಚಂದ್ರಶೇಖರ ತಿಳಿಹೇಳಿದರು.
ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಯುವಕ-ಯುವತಿಯರಿಗೆ ಹಮ್ಮಿಕೊಂಡಂತಹ ಕೋಳಿ ಸಾಕಾಣಿಕೆ ತರಬೇತಿಯ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಅವರು ಮಾತನಾಡಿದರು.
ಇವತ್ತಿನ ದಿನ ಆಥರ್ಿಕ ಕ್ಷೇತ್ರದಲ್ಲಿ ಸ್ವ-ಉದ್ಯೋಗ ವಲಯದ ಕೊಡುಗೆ ಮಹತ್ತರವಾಗಿದ್ದು ಇದಕ್ಕೆ ಎಲ್ಲಾ ಕಡೆಗಳಲ್ಲಿಯೂ ಮಹತ್ವ ಇದೆ. ಅದರ ಕಡೆಗೆ ಹೆಚ್ಚಿನ ಮಟ್ಟದಲ್ಲಿ ಕಾರ್ಯ ಪ್ರವೃತ್ತರಾಗಿ ದೇಶದ ಅಭಿವೃದ್ಧಿಗೆ ಕೈ-ಜೋಡಿಸಿ ಅದರ ಜೊತೆಗೆ ರೇಷ್ಮೇ ಉದ್ಯೋಗವನ್ನು ಕೈಗೂಂಡು ಆಥರ್ಿಕವಾಗಿ ಪ್ರಗತಿ ಹೊಂದಿರಿ ಎಂದು ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಕುಕ್ಕುಟ ಮಹಾ ಮಂಡಳಿ ಸಹಾಯಕ ನಿದೇಶಕ ಡಾ ಆನಂದ ಪಾಟೀಲ ಇವರು ಮಾತನಾಡಿ ಇವತ್ತಿನ ದಿನದಲ್ಲಿ ನಿರುದ್ಯೋಗ ನಿವಾರಣೆಗೆ ಸ್ವ-ಉದ್ಯೋಗವೆ ಮದ್ದು. ಅದಕ್ಕಾಗಿ ಸಕರ್ಾರ ಹಲವಾರು ಯೋಜನೆಗಳ ಮೂಲಕ ಸಾಲ-ಸೌಲಭ್ಯ ಒದಗಿಸುತ್ತಿದೆ. ಅವುಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ದೊಡ್ಡಮಟ್ಟದ ಉದ್ಯಮಿಗಳಾಗಿ ಉತ್ತಮಜೀವನ ನಡೆಸಿರಿ. ಮತ್ತು ಸಮಗ್ರ ಬೇಸಾಯದತ್ತ ಗಮನವನ್ನು ಹರಿಸಿರಿ. ತರಬೇತಿಯಲ್ಲಿ ಪಡೆದ ಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ನೀವು ಇನ್ನೊಬ್ಬರಿಗೆ ಉದ್ಯೋಗವನ್ನು ಕೊಡುವಷ್ಟರ ಮಟ್ಟಿಗೆ ಬೆಳೆಯಬೇಕು ಎಂದು ತಿಳಿಹೇಳಿ, ಶಿಭಿರಾಥರ್ಿಗಳಿಗೆ ಹಾರೈಸಿದರು.
ಸಂಸ್ಥೆಯ ನಿದರ್ೇಶಕರಾದ ಲಕ್ಷ್ಮೀಕಾಂತ ಪಾಟೀಲ ಅವರು ಮಾತನಾಡಿ ನಿಮ್ಮ ಕಲಿಕೆ ಯಾವತ್ತು ನಿತಂತರವಾಗಿರಲಿ. ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತಹ ಹೊಸ-ಹೊಸ ಮಾಹಿತಿಯನ್ನು ಕಲೆ ಹಾಕಿ ಅದರಲ್ಲಿ ಅಭಿವೃದ್ಧಿ ಹೊಂದಿ ಮಾದರಿ ಜೀವನವನ್ನು ನಡೆಸಿರಿ ಎಂದು ತಿಳಿ ಹೇಳಿದರು.
ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾಥರ್ಿಗಳು ತಮ್ಮ ತರಬೇತಿ ದಿನಗಳ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯ ಅಧ್ಯಕ್ಷರಿಂದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಂಸ್ಥೆಯ ಉಪನ್ಯಾಸಕ ಚಂದ್ರಕಾಂತ ಹಿರೇಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಬಸವರಾಜ ಕುಬಸದ ಮತ್ತು ಅಬ್ಬುಲ ರಜಾಕ್ ಉಪಸ್ಥಿತರಿದ್ದರು.