ದತ್ತಿ ಪುರಸ್ಕಾರಕ್ಕೆ ಕೃತಿ ಆಯ್ಕೆ
ಬೆಳಗಾವಿ 03: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಶಾಂತಾದೇವಿ ಮಹಾಲಿಂಗಪ್ಪ ಬಣಕಾರ ಪುಸ್ತಕ ದತ್ತಿ ಪುರಸ್ಕಾರಕ್ಕೆ ಸಾಹಿತಿ ಸಿ.ವೈ.ಮೆಣಸಿನಕಾಯಿ ಅವರು ರಚಿಸಿದ ಭೋಜರಾಜನ ಪುನರ್ ಜನ್ಮ ಮತ್ತಿತರ ಕಥೆಗಳು ಕೃತಿ ಆಯ್ಕೆಯಾಗಿದೆ.
ದಿ.4ರಂದು ಮದ್ಯಾಹ್ನ 3ಕ್ಕೆ ಬೆಳಗಾವಿಯ ರಾಮತೀರ್ಥ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುಸ್ತಕ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಡಾ.ರಾಜಶೇಖರ ಚಳಗೇರಿ, ವೈದ್ಯ ಸಂಗಮೇಶ ಕತ್ತಿ, ಡಾ.ವನೀತಾ ಮೆಟಗುಡ್ಡ, ಡಾ.ಭಾರತಿ ಮಠದ, ವಿ.ಎಂ.ಅಂಗಡಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.