ಶುವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Selection of new office bearers for District Unit of Medical Examiners Association

ಶುವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಧಾರವಾಡ 22: ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘ ಜಿಲ್ಲಾ ಘಟಕ ಧಾರವಾಡ ಇದಕ್ಕೆ ನಡೆದ 2024- 29 ಅವಧಿಯ ಚುನಾವಣೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಕಲಘಟಗಿಯ ಎಂ.ಎಸ್‌.ಘಂಟೆ, ಉಪಾಧ್ಯಕ್ಷರಾಗಿ ಹುಬ್ಬಳ್ಳಿಯ ನಾಗೇಶ ಜಮ್ಮಿಹಾಳ, ಪ್ರಧಾನ ಕಾರ್ಯದರ್ಶಿಯಾಗಿ ಧಾರವಾಡದ ಮಾರ್ತಾಂಡಪ್ಪ ಕತ್ತಿ, ಜಂಟಿ ಕಾರ್ಯದರ್ಶಿಯಾಗಿ ನವಲಗುಂದದ ಪ್ರಕಾಶ ಬಡಿಗೇರ, ಖಜಾಂಚಿಯಾಗಿ ಧಾರವಾಡದ ಶ್ರೀಶೈಲ ಚಿಕನಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಿ ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಮಹಾಗಾಂವ ತಿಳಿಸಿದ್ದಾರೆ. 

ಗೌರವಾಧ್ಯಕ್ಷರಾಗಿ ಹುಬ್ಬಳ್ಳಿಯ ಎಸ್‌.ವ್ಹಿ.ಪಾಟೀಲ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಧಾರವಾಡದ ಎಂ.ಕೆ.ಚವ್ಹಾಣ ಅವರನ್ನು  ನಾಮನಿರ್ದೇಶನ ಮಾಡಿ ಆಯ್ಕೆಮಾಡಲಾಯಿತು.2024- 29 ಅವಧಿಯ  ಚುನಾವಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿ ಗೊಳಿಸಿದ  ಹಿಂದಿನ ಅಧ್ಯಕ್ಷರಾದ  ಪಾರ್ಶ್ವನಾಥ ಹೊಸಮನಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಂಘದ ಜಂಟಿ ಕಾರ್ಯದರ್ಶಿಯಾದ ಎಸ್‌.ಎಂ.ಕರಬಣ್ಣವರ್, ಬೆಳಗಾವಿ ವಿಭಾಗೀಯ ಉಪಾಧ್ಯಕ್ಷರಾದ ಗೀರೀಶ ಕುಲಕರ್ಣಿ ಹಾಗೂ ಬೆಳಗಾವಿ ವಿಭಾಗೀಯ ಜಂಟಿ ಕಾರ್ಯದರ್ಶಿಯಾದ ವಾಯ್‌.ಸಿ.ಮೇಲಿನಮನಿ, ಹಾಗೂ ಧಾರವಾಡ, ಕಲಘಟಗಿ, ನವಲಗುಂದ, ಹುಬ್ಬಳ್ಳಿ, ಕುದಗೋಳ, ಅಳ್ನಾವರ ತಾಲೂಕಿನ ಪದಾಧಿಕಾರಿಗಳು ಇದ್ದು ಯಶಸ್ವಿಯಾಗಿ ನಡೆಯಲು ಸಹಕರಿಸಿದರು.