ಕೊಪ್ಪಳ ಪಿಕಾರ್ಡ್ ಬ್ಯಾಂಕಿಗೆ ನೂತನ ನಿರ್ದೇಶಕರ ಆಯ್ಕೆ
ಕೊಪ್ಪಳ 22: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. ಕೊಪ್ಪಳ ಇದರ ಸನ್ 2024-25 ರಿಂದ 2029-30ನೇ ಸಾಲಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯಲ್ಲಿ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹುಲಗಿ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಲಕ್ಷ್ಮೀದೇವಿ ನಿಂಗಜ್ಜ ಶಹಪುರ (ಚೌದ್ರಿ) ಹಾಗೂ ಇರಕಲ್ಲಗಡಾ ಸಾಮಾನ್ಯ ಕ್ಷೇತ್ರದಿಂದ ಸಂಗನಗೌಡ ಬಿ.ಟಿ. ಪಾಟೀಲ ಹಾಗೂ ಕೊಪ್ಪಳ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ರಾಮಣ್ಣ ಕಲ್ಲನ್ನವರ ಈ ಮೂರು ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆಗೆ ಕಾರಣಿಕರ್ತರಾದ ಮಾಜಿ ಶಾಸಕರು ಹಾಗೂ ಹಿರಿಯರಾದ ಕೆ ಬಸವರಾಜ್ ಹಿಟ್ನಾಳ್ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹಾಗೂ ಸಂಸದರಾದ ಕೆ.ರಾಜಶೇಖರ್ ಹಿಟ್ನಾಳ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರುಗಳಿಗೆ ಅಭಿನಂದಿಸಿದ್ದಾರೆ.