ಕ್ರೀಡಾ ಶಾಲೆ, ಕ್ರೀಡಾ ವಸತಿ ನಿಲಯಗಳಿಗೆ ಅಭ್ಯರ್ಥಿಗಳ ಆಯ್ಕೆ

Selection of candidates for Sports School, Sports Hostels

ಕ್ರೀಡಾ ಶಾಲೆ, ಕ್ರೀಡಾ ವಸತಿ ನಿಲಯಗಳಿಗೆ ಅಭ್ಯರ್ಥಿಗಳ ಆಯ್ಕೆ  

ತಾಳಿಕೋಟಿ 18: ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪೂರ ಇವರ ವತಿಯಿಂದ 2025 ನೇ ಸಾಲಿನ ಕ್ರೀಡಾ ಶಾಲೆ, ಕ್ರೀಡಾ ವಸತಿ ನಿಲಯಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಶುಕ್ರವಾರದಂದು ತಾಳಿಕೋಟಿ ಪಟ್ಟಣದ ಖಾಸ್ಗತೇಶ್ವರ ಮಹಾವಿದ್ಯಾಲಯದಲ್ಲಿ ನಡೆಯಿತು. 

ಇದರಲ್ಲಿ ತಾಳಿಕೋಟಿ ತಾಲೂಕಿನಿಂದ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆಯ್ಕೆಗಾರರಾಗಿ ಮಲ್ಲನಗೌಡ ಪಾಟೀಲ್ ಹಾಗೂ ಮಹಮ್ಮದ ರಫೀಕ್ ನಧಾಫ ಅವರು ಪಾಲ್ಗೊಂಡಿದ್ದರು. ಮಹಮ್ಮದ್ ರಫೀಕ್ ಮಾತನಾಡಿ ವಿಜಯಪುರದಲ್ಲಿ ಇರುವ ಕ್ರೀಡಾ ವಸತಿ ಶಾಲೆಯಲ್ಲಿ ವ್ಹಾಲಿಬಾಲ್, ಬಾಸ್ಗೆಟ್ಬಾಲ್, ಸೈಕ್ಲಿನಿಂಗ್ ತರಬೇತಿ ಇದ್ದು ಇಲ್ಲಿ ಎತ್ತರವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ  ಎಂದರು.  

ಹಿರಿಯ ವ್ಹಾಲಿಬಾಲ್ ಕ್ರೀಡಾಪಟುಗಳಾದ ರಾಗು ಮಾನೆ, ರವಿ ಕಟ್ಟಿಮನಿ, ದೈಹಿಕ ಶಿಕ್ಷಕರಾದ ಮಾಳು ಪೂಜಾರಿ, ರಮೇಶ ಕಾಂಬ್ಳೆ, ಹಾಗೂ ಇತರರು ಹಾಜರಿದ್ದರು.