ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಸಿಬ್ಬಂದಿಗಳ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಧಾರವಾಡ 04: ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾಗಿ ದಿನಾಂಕ: 01/02/2025 ರಿಂದ 02/02/2025 ರಂದು ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು, ಸದರಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳು ವಿಭಾಗಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸದರಿ ದಿನಗಳಂದು ನಡೆದ ರಾಜ್ಯ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ರೀಡಾಕೂಟಗಳಲ್ಲಿ ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಸಿಬ್ಬಂದಿಗಳಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣದ ಮಹತ್ವ ಹಾಗೂ ಅದಕ್ಕೆ ಸಂವಿಧಾನದಡಿಯಲ್ಲಿರುವ ಸೌಲಭ್ಯಗಳ ಕುರಿತಂತೆ ಪ್ರದರ್ಶಿಸಿದ ಕಿರುನಾಟಕಕಕ್ಕೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ದೊರಕ್ಕಿದ್ದು, ಇದಕ್ಕೆ ಜಿಲ್ಲೆಯ ಮಾನ್ಯ ಜಂಟಿ ನಿರ್ದೇಶಕರು ಹಾಗೂ ಎಲ್ಲ ಅಧಿಕಾರಿ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.
ಈ ಕ್ರೀಡಾಕೂಟದಿಂದ ಇಲಾಖೆಯ ನೌಕರರ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವುದರೊಂದಿಗೆ ಆಡಳಿತ ಸಮರ್ಕ ನಿರ್ವಹಣೆ ಮತ್ತು ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಧೃಡರನ್ನಾಗಿಸುವ ಅತ್ಯತ್ತಮ ಕಾರ್ಯ ಕೈಗೊಂಡು, ನೌಕರರಲ್ಲಿ ಇನ್ನೂ ಉತ್ಸಾಹಿ ಗುಣ ಬೆಳೆಸಿ, ಅದರಲ್ಲಿ ಹಲವು ಪ್ರತಿಭೆಗಳನ್ನು ಮತ್ತು ಸಾಮರ್ಥ್ಯವನ್ನು ಬೆಳಕಿಗೆ ತರುವಲ್ಲಿ ಕಾರಣಿಭೂತರಾದ ಸಮಾಜ ಕಲ್ಯಾಣ ಇಲಾಖೆಯ ಗೌರವಾನ್ವಿತ ಸಚಿವರಾದ ಡಾ. ಎಚ್ ಸಿ ಮಹದೇವಪ್ಪ, ಮೇಜರ್ ಮಣಿವಣ್ಣನ್ ಪಿ, ಭಾ.ಆ.ಸೇ ಮತ್ತು ಮಾನ್ಯ ಡಾ. ರಾಕೇಶ ಕುಮಾರ್ ಕೆ. ಭಾ.ಆ.ಸೇ ರವರಿಗೆ ಧಾರವಾಡ ಜಿಲ್ಲೆಯ ಜಂಟಿ ನಿರ್ದೇಶಕರಾದ. ಪಿ. ಶುಭಾ ಮತ್ತು ಜಿಲ್ಲೆಯ ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು, ಎಲ್ಲ ವೃಂದದ ನೌಕರರು ಹಾಗೂ ಡಾ. ಪ್ರಲ್ಹಾದ ಕ. ಗೆಜ್ಜಿ, ಅಧ್ಯಕ್ಷರು, ರಾಜ್ಯ ವಾರ್ಡನ್ ಸಂಘ ಹಾಗೂ ಕರ್ನಾಟಕ ಸರ್ಕಾರಿ ನೌಕರರ ಸಂಘ, ಹುಬ್ಬಳ್ಳಿ ಶಹರ ಘಟಕ ವತಿಯಿಂದ ಗೌರವಪೂರ್ವಕ ಅಭಿನಂದನೆಗಳು ಸಲ್ಲಿಸಲಾಗಿರುತ್ತದೆ ಎಂದು ಮೀನಾಕ್ಷಿ ಗುದಗಿಯವರ, ಪ್ರಭಾರ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಹುಬ್ಬಳ್ಳಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.