ಬಂಜಾರ (ಲಂಬಾಣಿ) ಸೇವಾ ಸಂಘಕ್ಕೆ ಆಯ್ಕೆ
ವಿಜಯನಗರ 14: ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಬೆಂಗಳೂರು, ಜಿಲ್ಲಾ ಘಟಕ ವಿಜಯನಗರ ಜಿಲ್ಲೆ ವತಿಯಿಂದ ಜಿಲ್ಲಾಧ್ಯಕ್ಷ ಡಿ.ಲಾಲ್ಯಾನಾಯ್ಕ್ ಇವರ ನೇತೃತ್ವದಲ್ಲಿ ಬಿ.ಎಮ್.ಬಾಬುನಾಯ್ಕ್ ಅವರನ್ನು ಹೊಸಪೇಟೆ ತಾಲೂಕು ಅಧ್ಯಕ್ಷರನ್ನಾಗಿ ಹಾಗೂ ಚಂದ್ಯಾನಾಯ್ಕ್ ಇವರನ್ನು ಉಪಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ ನೇಮಕಾತಿ ಆದೇಶ ಪತ್ರವನ್ನು ನೀಡಿದರು.
ಜಿಲ್ಲಾ ಉಪಾಧ್ಯಕ್ಷ ರಾಮಾನಾಯ್ಕ್, ಗೌರವಾಧ್ಯಕ್ಷ ಗೋವಿಂದ ನಾಯ್ಕ್, ಕಾರ್ಯಾಧ್ಯಕ್ಷ ಹೀರಾ್ಯನಾಯ್ಕ್, ಜೆ.ಸ್ವಾಮಿನಾಯ್ಕ್, ಹೊನ್ನಾನಾಯ್ಕ್ ಹಾಗೂ ಇತರರು ಉಪಸ್ಥಿತರಿದ್ದರು.