ಕೊಪ್ಪಳ 30: ಕೊಪ್ಪಳ ಪ್ರಾಥಮಿಕ ಶಾಲಾ ಬಾಲಕಿಯರ ವ್ಹಾಲಿಬಾಲ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕೊಪ್ಪಳ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಸಾಧನೆಯನ್ನು ಮೆರೆದಿದ್ದಾರೆ.
ಕೊಪ್ಪಳ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಶಿವಮೊಗ್ಗದಲ್ಲಿ ಜರುಗಿದ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಗಳಲ್ಲಿ ಪ್ರಾಥಮಿಕ ಶಾಲೆಯ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಾದ ಪ್ರೇಮಾ, ಅಂಜಲಿ, ನೇತ್ರಾವತಿ, ಐಶ್ವರ್ಯ, ಜ್ಯೋತಿ, ಇಂದುಮತಿ ಹಾಗೂ ಯಲ್ಲಮ್ಮ, ಈ ವಿದ್ಯಾಥರ್ಿಗಳು ಸ್ಪಧರ್ೆಯಲ್ಲಿ ಭಾಗವಹಿಸಿದ್ದು, ಪ್ರೇಮಾ., ಅಂಜಲಿ, ನೇತ್ರಾವತಿ, ಐಶ್ವರ್ಯ, ಜ್ಯೋತಿ, ಈ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಲ್ಲದೇ ಬಾಲಕರ ಪ್ರಾಥಮಿಕ/ ಪ್ರೌಢಶಾಲಾ ವಿಭಾಗದ ವ್ಹಾಲಿಬಾಲ್ ಕ್ರೀಡಾಕೂಟದಲ್ಲಿ ಕೊಪ್ಪಳ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಕೀತರ್ಿ ತಂದಿದ್ದಾರೆ. ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕರಾದ ಆರ್.ಜಿ. ನಾಡಗೀರ, ಖೋಖೋ ತರಬೇತುದಾರ ಎ.ಎನ್.ಯತಿರಾಜು, ವ್ಹಾಲಿಬಾಲ್ ತರಬೇತುದಾರ ಸುರೇಶ ಯಾದವ, ಕ್ರೀಡಾ ಇಲಾಖೆಯ ಸಿಬ್ಬಂದಿಗಳಾದ ತುಕಾರಾಮ ರಂಜಪಲ್ಲಿ, ಹನುಮೇಶ ಪೂಜಾರ ಸೇರಿದಂತೆ ಇತರೆ ಸಿಬ್ಬಂದಿ ವರ್ಗದವರು ಶುಭ ಹಾರೈಸಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಲಿ ಎಂದು ಅಭಿನಂದಿಸಿದ್ದಾರೆ.