ಲೋಕದರ್ಶನ ವರದಿ
ಬೆಳಗಾವಿ 06: ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯವು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಒಂದು ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಈ ಸತ್ ಪರಂಪರೆಯ ಹಾದಿಯಲ್ಲಿ ನಮ್ಮ ಮಹಾವಿದ್ಯಾಲಯದ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.
ಮೂವತ್ತು ದಿನಗಳ ಅತ್ಯಂತ ಜಟಿಲ ಹಾಗೂ ಸ್ಪಧರ್ಾತ್ಮಕ ಆಯ್ಕೆ ಪ್ರಕ್ರಿಯೆಯ ಮೂಲಕ ಕನರ್ಾಟಕ ಮತ್ತು ಗೋವಾ ಎನ್.ಸಿ.ಸಿ. ನಿದರ್ೆಶನಾಲಯದಿಂದ 42 ಕೆಡೆಟ್ಸ್ಗಳಲ್ಲಿ ನಮ್ಮ ಮಹಾವಿದ್ಯಾಲಯದ ಕೆಡೆಟ್ ಅಕ್ಟೋಬರ್ 24 ರಿಂದ ನವೆಂಬರ್ 2ವರೆಗೆ ರಾಜಸ್ಥಾನದ ಜೋಧಪುರದಲ್ಲಿ ಜರುಗಿದ ಅತ್ಯಂತ ಪ್ರತಿಷ್ಠಿತ "ರಾಷ್ಟ್ರಮಟ್ಟದ ಅಖಿಲ ಭಾರತ ವಾಯು ಸೈನಿಕ ಶಿಬಿರ"ಕ್ಕೆ ಆಯ್ಕೆಯಾಗಿ ಪಾಲ್ಗೊಂಡಿದ್ದಾನೆ.
ದ್ವೀತಿಯ ಪಿಯುಸಿ ವಿದ್ಯಾಥರ್ಿಯಾದ ಕೆಡೆಟ್ ಅಮನಕುಮಾರ ಪರಗಿ ಈತನು ಸ್ಕೀಟ್ ಫಾಯರಿಂಗ ವಿಭಾಗದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಮಹಾವಿದ್ಯಾಲಯಕ್ಕೆ ಕೀತರ್ಿ ತಂದಿದ್ದಾನೆ.
ದ್ವೀತಿಯ ಪಿಯುಸಿ ವಿದ್ಯಾಥರ್ಿನಿಯಾದ ಕೆಡೆಟ್ ಮಾನಸಿ ಹೋನಗೆಕರ ಇವಳು ಅಕ್ಟೋಬರ್ 2018ರಲ್ಲಿ ಮೈಸೂರಿನಲ್ಲಿ ಜರುಗಿದ "ರಾಷ್ಟ್ರೀಯ ಭಾವೈಕತಾ ಶಿಬಿರ"ದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಮಹಾವಿದ್ಯಾಲಯಕ್ಕೆ ಕೀತರ್ಿತಂದಿದ್ದಾಳೆ. ಈ ಶಿಬಿರದಲ್ಲಿ ಅಖಿಲ ಭಾರತದ 500 ಕೆಡೆಟ್ಸ್ಗಳು ಭಾಗವಹಿಸಿದ್ದರು.
ವಾಯು ದಳದ ಎನ್.ಸಿ.ಸಿ. ವಿದ್ಯಾಥರ್ಿಗಳ ಈ ಸಾಧನೆಗೆ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಹಾಗೂ ಸರ್ವ ನಿದರ್ೇಶಕರು, ಸ್ಥಾನಿಕ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷರು, ಸರ್ವ ಸದಸ್ಯರು, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಸ್.ಜಿ. ನಂಜಪ್ಪನವರ ಅವರು, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ, ಉಭಯ ಮಹಾವಿದ್ಯಾಲಯಗಳ ಬೋಧಕ-ಬೋಧಕೇತರ ಸಿಬ್ಬಂದಿವರ್ಗದವರು ಹಾಗೂ ವಿದ್ಯಾಥರ್ಿ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.