ದೇಶಕ್ಕೆ ಸಮರ್ಥ ನಾಯಕರನ್ನು ಆಯ್ಕೆ ಮಾಡಿ : ಡಾ. ಪ್ರಭಾಕರ ಭಟ್

ಲೋಕದರ್ಶನ ವರದಿ

ಯಮಕನಮರಡಿ09: ದೇಶವು ಇಂದು ಕವಲದಾರಿಯಲ್ಲಿದ್ದು, ಒಂದಡೆ ಭ್ರಷ್ಟಾಚಾರದ ವಿರುದ್ದ ಗೊಂಡಾಗಿರಿ ದೇಶದ್ರೋಹಿ ಚಟುವಟಿಕೆಗಳು ಮತಾಂತರಕ್ಕೆ ಪ್ರಚೋದನೆ ನೀಡುವುದು ನಡೆಯುತ್ತಿರುವುದು ಒಂದು ದಾರಿಯಾದರೆ ಭ್ರಷ್ಟಾಚಾರ ರಹಿತ ದೇಶಪ್ರೇಮ ಸಭ್ಯತೆಯ ದಾರಿ ಒಂದು ಕಡೆಯಾಗಿದೆ ಜಾಗೃತ ಮತದಾರರು ಯೋಗ್ಯವಾದ ದಾರಿಯನ್ನು ಆಯ್ದುಕೊಂಡು ಬರುವ ಲೋಕಸಭೆಯಲ್ಲಿ ದೇಶಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಡಾ. ಪ್ರಬಾಕರ ಭಟರು ಹೇಳಿದರು. 

ಅವರು ದಿ. 10 ರಂದು ಯಮಕನಮರಡಿಯಲ್ಲಿ ಚಿಕ್ಕೋಡಿ ಲೋಕಸಬಾ ಚುನಾವಣೆಯ ಪ್ರಯುಕ್ತ ಆಯೋಜಿಸಲಾದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 60 ವರ್ಷಗಳಿಂದ ಗಾಂದೀಜಿಯವರ ಹೆಸರಿನಲ್ಲಿ ಕಾಂಗ್ರಸ ರಾಜಕಾರಣ ಮಾಡಿ ದೇಶವನ್ನು ಅದೋಗತಿಗೆ ಒಯ್ಯುತ್ತಿದೆ. ಅದು ಜಾತೀಯ ಪಕ್ಷವಾಗಿದ್ದು ಒಂದೇ ಸಮುದಾಯಕ್ಕೆ ಸೀಮಿತವಾಗಿ ಕಾರ್ಯ ಮಾಡುತ್ತಿದೆ. ಅಲ್ಪಸಂಖ್ಯಾತರು ಬಹುಸಂಖ್ಯಾತರು ಎಂಬ ಬೇದಬಾವ ಏಕೆ ಇಂದು ಜಗತ್ತವು ನರೇಂದ್ರ ಮೋದಿಯವರ ಆಡಳಿತದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದೆ. ಹಿಂದೂ ಎನ್ನುವದು ಒಂದು ರಾಷ್ಟ್ರೀಯ ಶಬ್ದವಾಗಿದ್ದು, ಇಡೀ ಜಗತ್ತು ಈ ಶಬ್ದಕ್ಕೆ ಗೌರವ ನೀಡುತ್ತಿದೆ. ಹಿಂದೂ ಧರ್ಮವು ಕೋಮುವಾದಿ ಪಕ್ಷವೆಂದು ಕೆಲವರು ಆರೋಪ ಮಾಡುತ್ತಿರುವುದು ಹುರಳಿಲ್ಲ. ಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಏಕತೆಗಾಗಿ ಉಳಿವಿಗಾಗಿ ಸುಭದ್ರ ಸಕರ್ಾರ ತರಲು ಮತವನ್ನು ನೀಡಬೇಕೆಂದು ಡಾ. ಪ್ರಭಾಕರ ಹೇಳಿದರು. 

ಇನ್ನೋರ್ವ ರಾಷ್ಟ್ರೀಯ ಸ್ವಯಂ ಸೇವಕ ಸಂಜಯ ಅಡಕೆ ಮಾತನಾಡಿ ಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಮತಚಲಾಯಿಸಬೆಕೆಂಬ ನಿಟ್ಟಿನಲ್ಲಿ ಪ್ರತಿ ಮನೆ ಮನೆಗೂ ಮತದಾನ ಜಾಗೃತಿ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಕ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದ್ದೆ. ದೇಶದ ಬಗ್ಗೆ ಸಮಾಜದ ಬಗ್ಗೆ ಚಿಂತನೆವುಳ್ಳರನ್ನು ಬರುವ ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಮಾಡಬೇಕೆಂದು ಹೇಳಿದರು. 

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಪವನ ಕತ್ತಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಬಿ.ಬಿ. ಹಂಜಿ, ಈರಣ್ಣಾ ಹಾಲದೇವರಮಠ, ಮಾರುತಿ ಅಷ್ಟಗಿ, ರವಿ ಹಿರೇಮಠ, ಮಹಾವೀರ ನಾಶಿಪುಡಿ, ಶಶಿಕಾಂತ ಮಠಪತಿ, ಈರಣ್ಣಾ ಗುರವ, ಶ್ರೀಶೈಲ ಯಮಕನಮರಡಿ, ಗುರುಸಿದ್ದ ಪಾಯನ್ನವರ, ಬಸವರಾಜ ಉದೋಶಿ,  ಮೊದಲಾದವರು ಉಪಸ್ಥಿತರಿದ್ದರು. ಜೆ.ಎನ್. ಅವಾಡರ್ೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.