ಬ್ಯಾಂಕರ್ಸ್ ಪಾಲಿಸಿಯಿಂದ ಸದಸ್ಯರಿಗೆ ಭದ್ರತೆ: ಹಂದಿಗುಂದ

ಮೂಡಲಗಿ 25: ಪ್ರತಿಯೊಂದು ಸೊಸಾಯಿಟಿ ಅಥವಾ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು ಬ್ಯಾಂಕರ್ಸ್ ಪಾಲಿಸಿ ಮಾಡುವದರಿಂದ ಆಡಳಿತ ಮಂಡಳಿಯ ಸದಸ್ಯರಿಗೆ ಒಂದು ಭದ್ರತೆ ಇರುತ್ತದೆ, ಅಪಘಾತದಂತಹ ಘಟನೆಗಳಲ್ಲಿ ಆಸ್ಪತ್ರೆಯ ಬಿಲ್ ಪಾವತಿಸುವಲ್ಲಿ ವಿಮೆ ಸಹಕಾರಿಯಾಗುತ್ತದೆ ಎಂದು ನಾಗಲಿಂಗೇಶ್ವರ ಸೋಸಾಯಿಟಿಯ ಅಧ್ಯಕ್ಷ ಶಿವಬಸು ಹಂದಿಗುಂದ ಹೇಳಿದರು

ಅವರು ಸಂಘದ ಆಡಳಿತ ಮಂಡಳಿಯ ಸದಸ್ಯ ಸಂಜು ಕದಮ ಅವರಿಗೆ ಸೋಸಾಯಿಟಿಯ ಪಾಲಿಸಿ ಅಡಿಯಲ್ಲಿ ಇಪ್ಕೋ ಟೋಕಿಯೋ ಜೀವ ವಿಮಾ ಕಂಪನಿಯಿಂದ ಅಪಘಾತದಲ್ಲಿ ಮಂಜೂರಾದ 41.140 ರೂಗಳ ಚೆಕ್ ವಿತರಿಸಿ ಮಾತನಾಡಿದರು. 

ಇಪ್ಕೋ ಟೋಕಿಯೋ ಕಂಪನಿಯ ಬೆಳಗಾವಿ ವಿಭಾಗದ ಪ್ರಧಾನ ವವ್ಯಸ್ಥಾಪಕ ರಾಘವೇಂದ್ರ ಖೋತ ಮಾತನಾಡಿ, ಈ ಜೀವ ವಿಮಾ ಕಂಪನಿಯ ಪಾಲಿಸಿಗಳಲ್ಲಿ ಜನಪ್ರೀಯ ಹಲವಾರು ಯೋಜನೆಗಳಿಂದು ಅವುಗಳ ಲಾಭ ಪಡೆಯಬೇಕು, ಸಂಘದ ಸದಸ್ಯರಿಗೆ ಇದು ಹೆಚ್ಚು ಅನುಕೂಲ ಎಂದರು ಗೋಕಾಕ ಶಾಖೆಯ ದೀಪಕ ಜಿರಾಳೆ, ಬ್ಯಾಂಕಿನ ಪ್ರದಾನ ವವ್ಯಸ್ಥಾಪಕ ಮಹಾದೇವ ಮಲಗೌಡ್ರ ಉಪಸ್ಥಿತರಿದ್ದರು