ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯ ಕಾರ್ಯಾಗಾರ
ಇಂಡಿ 16: ಸಿ ವ್ಹಿ ರಾಮನ್ ಪಿಯು ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಇಂಗ್ಲೀಷ್ ಎಂದರೆ ಒಂದು ಭಾಷೆ ಅಂತ ತಿಳಿದು ಪರೀಕ್ಷೆಯನ್ನು ಎದುರಿಸಬೇಕು ಪರೀಕ್ಷೆಗೆ ಹೇಗೆಲ್ಲ ತಯಾರಿಗಳನ್ನು ಮಾಡಬೇಕು ಎಂಬುವುದರ ಕುರಿತು ಇಂಗ್ಲೀಷ್ ಉಪನ್ಯಾಸಕರಾದ ಡಾಕ್ಟರ್ ಕಿರಣ್ ನಡಕಟ್ಟಿ ಉಪನ್ಯಾಸ ಮಾಡಿದರು. ಮಕ್ಕಳಿಗೆ ಇಂಗ್ಲೀಷ್ ಭಾಷೆಯನ್ನು ಹೇಗೆ ನಾವು ಬಳಕೆ ಮಾಡಬೇಕು ಅದನ್ನು ಅರಿತು ಹೇಗೆ ನಾವು ಪರೀಕ್ಷೆಯಲ್ಲಿ ಬರೆಯಬೇಕು. ವ್ಯಾಕರಣವನ್ನು ಹೇಗೆ ನಾವು ಅರ್ಥೈಸಿಕೊಳ್ಳಬೇಕು ಎನ್ನುವುದರ ಕುರಿತು ಅಚ್ಚು ಕಟ್ಟಾಗಿ ತಿಳಿಸಿಕೊಟ್ಟರು.
ಸಂಸ್ಥೆಯ ಸಂಸ್ಥಾಪಕ ಶಿವಾನಂದ ಕಾಮಗೊಂಡ ಮಾತನಾಡಿ ಈ ತರದ ಉಪನ್ಯಾಸ ಮಾನಸಿಕವಾಗಿ ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ ಮಕ್ಕಳಿಗೆ ಪರೀಕ್ಷೆ ಬರೆಯಲು ಸಹಕಾರಿ ಆಗುತ್ತದೆ ಎಂದು ಹೇಳಿದರು.
ಕಾರ್ಯಗಾರಗಳಿಂದ ವಿದ್ಯಾರ್ಥಿಗಳಲ್ಲಿ ಮನೋಬಲ ಹೆಚ್ಚುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಸನ್ಮತಿ ಹಳ್ಳಿ ತಿಳಿಸಿದರು.
ಕಾರ್ಯಾಗಾರದ ನಂತರ ವಿದ್ಯಾರ್ಥಿನಿಯರಾದ ಸುಶೀಲಾ ದೇಸಾಯಿ, ಸೃಷ್ಟಿ ಪಾದಗಟ್ಟಿ, ಶಿವರಾಜ್ ಬಡಿಗೇರ್, ಶಿವರಾಜ್ ಕೊರಬು, ಮಮ್ಮದ್ ಅಯಾಜ್ ಸೌದಿ ಸರಳ ಮತ್ತು ಸ್ಪಷ್ಟ ರೀತಿಯಲ್ಲಿ ನಮ್ಮಲ್ಲಿರುವ ಇಂಗ್ಲೀಷನ ಭಯವನ್ನು ದೂರ ಗೊಳಿಸಿದ್ದಕ್ಕಾಗಿ ಧನ್ಯವಾದಗಳು ಅರ್ಿಸಿದರು ಹಾಗೂ ಕಾರ್ಯಗಾರಗಳಿಂದ ನಮ್ಮಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ವರ್ಧಮಾನ ಮಹಾವೀರ್, ಉಪಾಧ್ಯಕ್ಷ ಶೈಲೇಶ್ ಬೀಳಗಿ, ಸನ್ನತಿ ಹಳ್ಳಿ, ಪ್ರಸನ್ನಕುಮಾರ್ ನಾಡಗೌಡ, ಡಾಕ್ಟರ್ ಸೋಮಶೇಖರ್ ಹುದ್ದಾರ, ಶೋಭಾ ನಾರಾಯಣಕರ್, ಶೈಲಜಾ ಜಹಾಗಿರದರ್, ವೆಂಕಟೇಶ್ ಬಾಬು ಖೇಡಗಿ ಮತ್ತು ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ ಹಾಜರಿದ್ದರು.