ಪೋಲಿಸ್ ವಾಷರ್ಿಕ ಕ್ರೀಡಾಕೂಟ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪತ್ರಕರ್ತರಿಗೆ ಎರಡನೆ ಬಹುಮಾನ

ಲೋಕದರ್ಶನ ವರದಿ

ಕೊಪ್ಪಳ 01: ಜಿಲ್ಲಾ ಪೋಲಿಸ್ ಇಲಾಖೆಯ ವತಿಯಿಂದ ಪ್ರತಿವರ್ಷದಂತೆ ಜರಗುವ ಪೋಲಿಸ್ ವಾಷರ್ಿಕ ಕ್ರೀಡಾ ಕೂಟದಲ್ಲಿ ಪೋಲಿಸ್ ಹಾಗೂ ಪತ್ರಕರ್ತರ ನಡುವೆ ಜರುಗಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೋಲಿಸ್ ತಂಡ ಪತ್ರಕರ್ತರ ತಂಡವನ್ನು ಸೋಲಿಸಿ ಜಯ ಸಾಧಿಸಿ ಪ್ರಥಮವನ್ನು ಪಡೆದುಕೊಂಡಿತು. ಈ ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡ ಎರಡನೆ ಬಹುಮಾನ ಪಡೆದುಕೊಂಡಿತು. 

ಶುಕ್ರವಾರ ಸಂಜೆ ಜಿಲ್ಲಾ ಪೋಲಿಸ್ ಕವಾಯತ್ ಮೈದಾನದಲ್ಲಿ ಜರುಗಿದ ಪೋಲಿಸ್ ವಾಷರ್ಿಕ ಕ್ರೀಡಾಕೂಟ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ವಿಜೇತ ಕ್ರೀಡಾ ಪಟುಗಳಿಗೆ ಬಹುಮಾನ ವಿತರಣೆ ಮಾಡಿದ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎರಡನೆ ಬಹುಮಾನ ಪಡೆದ ಕೊಪ್ಪಳ ಜಿಲ್ಲೆಯ ಪತ್ರಕರ್ತರ ತಂಡಕ್ಕೆ ಕಪ್ ವಿತರಣೆ ಮಾಡಿದರು. 

ವೇದಿಕೆ ಮೇಲೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ ಪ್ರೊಬೇಷನರಿ ಐಎಎಸ್ ಅಧಿಕಾರಿ ಅಕ್ಷಯ ಶ್ರೀಧರ ಉಪಸ್ಥಿತಿರಿದ್ದು ಎರಡನೆ ಬಹುಮಾನದ ಕ್ರಿಕೆಟ್ ಕಪ್ ಮತ್ತು ಪಾರಿತೋಷಕ ಪಡೆಯುವ ಸಂದರ್ಭದಲ್ಲಿ ಪತ್ರಕರ್ತರ ತಂಡದ ಪರವಾಗಿ ಎಂ. ಸಾದಿಕ್ ಅಲಿ, ಎನ್.ಎಂ.ದೊಡ್ಡಮನಿ, ಹರೀಶ್ ಹೆಚ್.ಎಸ್. ಜಿ.ಎಸ್.ಗೋನಾಳ, ಸಿದ್ದಪ್ಪ ಹಂಚಿನಾಳ ಮತ್ತು ಖಲೀಲ್ ಉಡೇವು ಮತ್ತಿತರರು ಪಾಲ್ಗೊಂಡಿದರು. ಡಿಎಸ್ಪಿ ಸಂದಿಗವಾಡ್, ಉಜ್ಜನಕೊಪ್ಪ  ಅಲ್ಲದೇ ಶಿವಾನಂದ ವಾಲೀಕಾರ ರವಿ ಉಕ್ಕುಂದ್ ಆರ್.ಪಿ.ಐ ನಿಂಗಪ್ಪ ಮತ್ತು ಜಿಲ್ಲೆಯ ವಿವಿಧ ಪೋಲಿಸ್ ಠಾಣೆಯ ಠಾಣಾಧಿಕಾರಿಗಳು ಪೋಲಿಸ್ರು ಪಾಲ್ಗೊಂಡಿದ್ದರು.