ಸ್ಕೌಟ್ಸ್‌ ಗೈಡ್ಸ್‌ ಶಾಲೆಗಳಲ್ಲಿ ಆರಂಭಿಸಿರಿ

Scouts Guides start in schools

ಸ್ಕೌಟ್ಸ್‌ ಗೈಡ್ಸ್‌ ಶಾಲೆಗಳಲ್ಲಿ ಆರಂಭಿಸಿರಿ  

ಹೂವಿನ ಹಡಗಲಿ 01 :ತಾಲೂಕಿನ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಸ್ಕೌಟ್ ಮತ್ತು ಗೈಡ್ಸ್‌ ದಳಗಳನ್ನು ಪ್ರಾರಂಭಿಸಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ದಿನದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಕ್ಕಳಲ್ಲಿ ಶಿಸ್ತು ಪಾಲನೆ ಮತ್ತು ಸೇವಾ ಮನೋಭಾವನೆ ಬೆಳೆಯುತ್ತದೆ ಎಂದರು. ಸಾಮಾಜಿಕ ಮೌಲ್ಯಗಳು ಸಹಕಾರ ಸಹಬಾಳ್ವೆ ಸಮಾನತೆ ಮೊದಲಾದ ಒಳ್ಳೆಯ ವಿಚಾರಗಳನ್ನು ಅರಿಯಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ಉತ್ತಮ ವೇದಿಕೆಯಾಗಿದೆ ಎಂದರು.ಶೈಕ್ಷಣಿಕ ವರ್ಷದ ಪ್ರತಿ ಮಾಹೆಯಲ್ಲಿ ನಿರಂತರವಾಗಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಿರಿ ಎಂದು ತಿಳಿಸಿದರು.ತಾಲೂಕು ದೈಹಿಕ ಅಧೀಕ್ಷಕರಾದ ರಫಿ ಅಹಮದ್ ಖವಾಸ್ ಮಾತನಾಡಿ ಮಕ್ಕಳು ಸ್ವಂತವಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಸಹಕಾರಿ ಆಗುತ್ತದೆ.ಆತ್ಮ ರಕ್ಷಣೆ ಮತ್ತು ಪ್ರಥಮ ಚಿಕಿತ್ಸೆ ಮಾಡಿಕೊಳ್ಳುವ ಬಗ್ಗೆ ಇನ್ನಿತರೆ ನಿತ್ಯ ಜೀವನಕ್ಕೆ ಅವಶ್ಯವಾಗಿರುವ ಹಲವು 10 ಅಂಶಗಳನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌ ಒಳಗೊಂಡಿದೆ.ಮುಂದಿನ ಭವಿಷ್ಯ ತಾವೇ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.ಮುಂದಿನ ಶೈಕ್ಷಣಿಕ ವರ್ಷದಲ್ಲಿ ದಳಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭಿಸಿ ಮಕ್ಕಳಲ್ಲಿ ಇದರ ಬಗ್ಗೆ ಸವಿಸ್ತಾರವಾದ ಜ್ಞಾನವನ್ನು ನೀಡಬೇಕು ಎಂದರು.ಮಕ್ಕಳನ್ನು ಜಿಲ್ಲೆ ರಾಜ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಳ್ಳಲು ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು.ಜಿಲ್ಲಾ ತರಬೇತುದಾರರಾದರೇಣುಕಾ ಜಿ, ಕೊಟ್ರಗೌಡ ಜಿ ಆರ್, ಗೌರವಾಧ್ಯಕ್ಷ ಶಿವಾನಂದಪ್ಪ ಬಿ ಶಾಖಾ ಗ್ರಂಥಾಲಯಾಧಿಕಾರಿ ಮಂಜುನಾಥ ಬೋವಿ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಾದೇಶ್ವರ ಕೆ ಎಸ್ ಗುರುಬಸವರಾಜ ಇತರರು ಉಪಸ್ಥಿತರಿದ್ದರು.ಜಿ ಬಿ ಆರ್ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರೋವರ್ಸ್‌ ಮತ್ತು ರೇಂಜರ್ಸ್‌  ಇದ್ದರು.ತಾಲೂಕಿನ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರು ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು.