ವಿಜ್ಞಾನದ ಸಂಶೋಧನೆಗಳು ಸಮಾಜಕ್ಕೆ ತಲುಪುವುದು ಅವಶ್ಯಕ

ಕನರ್ಾಟಕ ವಿಜ್ಞಾನ ಕಾಲೇಜಿನಲ್ಲಿ ಸಂಶೋಧನಾ ವಿದ್ಯಾಥರ್ಿಗಳ ತರಬೇತಿ ಕಾರ್ಯಕ್ರಮವನ್ನು ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಆ

ಧಾರವಾಡ 21: ವಿಜ್ಞಾನದಲ್ಲಿ ಆಗುವ ಸಂಶೋಧನೆಗಳನ್ನು ಸಮಾಜಕ್ಕೆ ತಲುಪಿಸುವ ಅವಶ್ಯಕತೆ ಇದೆ ಎಂದು ಕರ್ನಾ ಟಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಆರ್.ಎಫ್. ಭಜಂತ್ರಿ ಅಭಿಪ್ರಾಯಪಟ್ಟರು. 

ಅವರು ಕರ್ನಾ ಟಕ ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು ಕಾಲೇಜಿನ ಸಭಾಂಗಣದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ 'ಒಂದು ದಿನದ ಸಂಶೋಧನಾ ತರಬೇತಿ ಕಾರ್ಯಕ್ರಮ' ವನ್ನು ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನವು ನಾಗರಿಕತೆಯ ಒಂದು ಭಾಗವಾಗಿದ್ದು, ವಿಜ್ಞಾನದಂತಹ ಸಂಶೋಧನೆಗಳಲ್ಲಿ ವೈಜ್ಞಾನಿಕ ಉಪಕರಣಗಳ ಬಳಕೆ ಬಹಳ ಪ್ರಮುಖ ಪಾತ್ರವನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ವಹಿಸುತ್ತದೆ ಎಂದರು. ಸಂಶೋಧನೆ ಅಭಿವೃದ್ಧಿಯಲ್ಲಿ ವಿಜ್ಞಾನಿಗಳಿಗೆ ಸಾಮಥ್ರ್ಯ, ತರಬೇತಿ ಗುಣಮಟ್ಟದ ಶೈಕ್ಷಣಿಕ ವಾತಾವರಣ, ಸೌಲಭ್ಯಗಳ ಲಭ್ಯತೆ ಮತ್ತು ನೆಟ್ವರ್ಕ ಬಹಳ ಅವಶ್ಯವಾಗಿದೆ ಎಂದ ಅವರು ಪ್ರಸ್ತುತ ವಿಜ್ಞಾನಿಗಳು ಸಮಾಜಿಕ ಹೋಣೆಗಾರಿಕೆಯ ಮೂಲಕ ಸಮಾಜಕ್ಕೆ ಉಪಯೋಗವಾಗುಂತಹ ಸಂಶೋಧನೆಗಳು ಅಗತ್ಯವಾಗಿದ್ದು, ಪ್ರಸ್ತುತ ವೈಜ್ಞಾನಿಕ ಪರಂಪರೆಯನ್ನು ಇಂದಿನ ವಿದ್ಯಾಥರ್ಿಗಳಿಗೆ ತಿಳಿಸುವ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಫ್. ಮೂಲಿಮನಿ ಮಾತನಾಡಿ ಪ್ರಸ್ತುತ ಸಮಾಜದ ಅಭಿವೃದ್ಧಿಗಾಗಿ ವೈಜ್ಞಾನಿಕ ಸಂಶೋಧನೆಗಳು ಆಗಬೇಕು ಮತ್ತು ಪರಿಸರಕ್ಕೆ ಹಾನಿಯಾಗದಂತಹ ಮಾನವ ಕುಲ ಅಭಿವೃದ್ಧಿಗಾಗಿ ಇಂದಿನ ಸಂಶೋಧನೆಗಳು ಹೆಚ್ಚು ಪ್ರಾಮುಖ್ಯತೆಯನ್ನು ಇಂದಿನ ವಿಜ್ಞಾನಿಗಳು ಗಮನ ಹರಿಸಬೇಕಾಗಿದೆ ಎಂದ ಅವರು ಕನರ್ಾಟಕ ವಿಜ್ಞಾನ ಕಾಲೇಜಿನಲ್ಲಿ ವಿವಿಧ ವಿಷಯಗಳ ಬಗ್ಗೆ ಸಂಶೋಧನೆಗಾಗಿ 1.5 ಕೋಟಿ ರೂಪಾಯಿಗಳು ವೈಜ್ಞಾನಿಕ ಸಂಸ್ಥೆಗಳು ನೀಡಿದ್ದು ಹೆಮ್ಮಯ ವಿಷಯ ಎಂದರು. ಪಾಲಿಮರ್ ಪ್ಲಾಸ್ಟಿಕ್ನ ಸಂಶೋಧನೆಯಿಂದ ಅತಿ ಹೆಚ್ಚು ಮಾನವ ಕುಲಕ್ಕೆ ಮಾರಕವಾಗಿದೆ ಎಂದರು.

ತರಬೇತಿ ಕಾರ್ಯಕ್ರಮದಲ್ಲಿ ಹುಬ್ಬಳಿ-ಧಾರವಾಡದ ಅವಳಿನಗರದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಪಾಲಿಮರ್ ಸೈನ್ಸ್ನ ವಿವಿಧ ಕಾಲೇಜುಗಳ 50ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಗಾರದ ಸಂಯೋಜಕ ಕೆಸಿಡಿ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರದ ಪ್ರಾಧ್ಯಾಪಕಿ ಡಾ. ಸರಸ್ವತಿ ಮಾಸ್ತಿ, ಡಾ. ಓ. ಕೋಟ್ರೇಶ್, ಡಾ.ಎ.ಎಸ್.ಕಟಗಿ, ಪ್ರೊ. ಎಸ್.ಡಿ.ದುಮ್ಮವಾಡ, ಪ್ರೊ. ವಿ.ಎ.ಅಮ್ಮಿನಬಾವಿ ಪ್ರೊ. ವೀಣಾ ಭಟ್, ಶಿವಯೋಗಿ ಇದ್ದರು.