ಗೋಕಾಕ 06: ವಿಜ್ಞಾನ-ತಂತ್ರಜ್ಞಾನ ಹಾಗೂ ಆಧ್ಯಾತ್ಮದಿಂದ ದೇಶದ ಅಭಿವೃದ್ಧಿ ಸಾಧ್ಯವೆಂದು ಇಲ್ಲಿಯ ಎಸ್ಎಲ್ಜೆ ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ. ಎಸ್ ಎಮ್ ನದಾಫ್ ಹೇಳಿದರು.
ಅವರು, ಬುಧವಾರದಂದು ನಗರದ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಧ್ಯಾತ್ಮಿಕ ತಳಹದಿಯಲ್ಲಿ ವಿಜ್ಞಾನ ಹುಟ್ಟಿದ್ದು ಅದನ್ನು ಧನಾತ್ಮಕವಾಗಿ ಮನುಕುಲದ ವಳಿತಿಗಾಗಿ ಬಳಸಬೇಕು. ನಮ್ಮ ಪೂರ್ವಜರು ನೀಡಿದ ಆಚರಣೆಗಳು ವೈಜ್ಞಾನಿಕವಾಗಿ ರೂಪಿತವಾಗಿವೆ. ಅವುಗಳು ನಮಗೆ ಉಪಯುಕ್ತವಾಗಿವೆ. ಅವುಗಳ ಸ್ಪೂತರ್ಿಯಿಂದ ಸಂಶೋಧನಾ ಮನೋಭಾವ ಹಾಗೂ ನಿರಂತರ ಪ್ರಯತ್ನಶೀಲರಾಗಿ ದೇಶಕ್ಕೆ ಏನಾದರೂ ಕೊಡುಗೆ ನೀಡುವಂತೆ ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ವೇದಿಕೆಯ ಮೇಲೆ ಪ್ರಾಚಾರ್ಯ ಎನ್ ಎಮ್ ತೋಟಗಿ, ಉಪನ್ಯಾಸಕರಾದ ಐ ಎಸ್ ಪವಾರ, ಡಿ ಬಿ ತಳವಾರ, ಎಸ್ ಬಿ ಒಂಕಾರ, ಎಮ್ ಬಿಇ ಹೂಗಾರ, ಆರತಿ ಹಣಗಂಡಿ ಇದ್ದರು.
ಸ್ಪೂತರ್ಿ ದೇವಲಾಪೂರ ಸ್ವಾಗತಿಸಿದರು. ಲಕ್ಷ್ಮೀ ನಾಯ್ಕರ ನಿರೂಪಿಸಿದರು, ಮೀನಾಕ್ಷಿ ಬುಲರ್ಿ ವಂದಿಸಿದರು.