ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ ಪ್ರಭುಸಾರಂಗದೇವ ಶಿವಾಚಾರ್ಯರು ಚಾಲನೆ
Science exhibition for primary and high school children inaugurated by Prabhusarangadeva Shivachary
ಸಿಂದಗಿ02 : ವಿಜ್ಞಾನ ಕೇವಲ ವಸ್ತು ಪ್ರದರ್ಶನವಲ್ಲ ಬದಲಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ಸೃಜನಶೀಲತೆ ಬೆಳೆಸುವ ಒಂದು ಮಾರ್ಗ. ವಿಜ್ಞಾನದ ಹೊರೆತು ಯಾವುದು ಇಲ್ಲ ಎಂದು ಸ್ಥಳಿಯ ಸಾರಂಗಮಠದ ಪೂಜ್ಯ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ನಗರದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಪದ್ಮರಾಜ ಪಬ್ಲಿಕ್ ಶಾಲೆ(ಸಿಬಿಎಸ್‌ಸಿ) ಹಮ್ಮಿಕೊಂಡ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ನಮ್ಮಜೀವನದ ಅವಿಭಾಜ್ಯ ಅಂಗವಾಗಿದ್ದು ವೈಜ್ಞಾನಿಕ ಚಿಂತನೆ ಹೊಂದುವುದರ ಮೂಲಕ ಮೂಡನಂಬಿಕೆ ಹೊಗಲಾಡಿಸಬೇಕು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿ ಹೊಸದೊಂದು ಪ್ರದರ್ಶನ ಮಾಡುತ್ತಾರೆ. ಅದು ಅವರಲ್ಲಿನ ಸೃಜನಶೀಲತೆಗೆ ಉತ್ತೇಜನ ನೀಡುತ್ತದೆ. ಹೊಸ ತಂತ್ರಜ್ಞಾನ ಅರಿವು ಹೊಸದೊಂದು ಪರಿಕಲ್ಪನೆ ಮೂಡುತ್ತದೆ. ಅದುಅವರ ಮುಂದಿನ ಶೈಕ್ಷಣಿಕ ಪಯಣಕ್ಕೆ ಸ್ಪೂರ್ತಿಯಾಗುತ್ತದೆ. ವಿಜ್ಞಾನ ಮೇಳ ಪ್ರತಿಯೊಂದು ಶಾಲೆಯಲ್ಲಿ ಆಯೋಜಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಅದರಲ್ಲಿ ಪಾಲ್ಗೋಳ್ಳುವಂತೆ ಮಾಡಿದರೆ ವಿಜ್ಞಾನದ ಅರಿವು ಮಕ್ಕಳಲ್ಲಿ ಚೆನ್ನಾಗಿ ಸಿಗುತ್ತದೆ ಅಂತಹ ಚಿಂತನೆ ಪ್ರತಿಯೊಂದು ಶಾಲೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್‌ಪಿವ್ಹಿವ್ಹಿಎಸ್ ಪ್ಯಾರಾ ಮೆಡಿಕಲ್‌ಕಾಲೇಜ ಪ್ರಾಚಾರ್ಯ ವ್ಹಿ.ಬಿ.ಜಿರ್ಲೆ ಮತ್ತು ಎಸ್‌ಪಿವ್ಹಿವ್ಹಿಎಸ್ ಪಾಲಿಟೆಕಿನಿಕ್ ಕಾಲೇಜಿನ ಪ್ರಾಚಾರ್ಯ ಆರ್.ಬಿ.ಪವಾರ ನಿರ್ಣಾಯಕರಾಗಿ ಭಾಗವಹಿಸಿ ಮಾತನಾಡಿ, ವಿಜ್ಞಾನ ನಿತ್ಯದ ಬದುಕಿನೊಂದಿಗೆ ಬೆಸೆದು ಹೋಗಿದೆ. ಎಲ್ಲರೂ ವಿಜ್ಞಾನದ ಅರಿವು ಪಡೆದುಕೊಳ್ಳಬೇಕು. ಸಂಶೋಧನೆ ಮಾಡುವವರಿಗೆ ಹೊಸ ಆಲೋಚನೆಗಳ ಮೂಲಕ ಅವಿಷ್ಕಾರಗಳು ಹೊಳೆಯುತ್ತವೆ. ಈ ಕಲ್ಪನೆ ವಿದ್ಯಾರ್ಥಿ ದೆಸೆಯಿಂದಲೇ ಬಳಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಆಲೋಚನೆಗಳ ಸಂಗಮವೇ ವಿಜ್ಞಾನವಾಗಿರುವುದರಿಂದ ಶಾಲೆಗಳಲ್ಲಿ ಹೆಚ್ಚು ಹೆಚ್ಚು ವೈಜ್ಞಾನಿಕ ಕಲ್ಪನೆ ಮಕ್ಕಳಿಗೆ ನೀಡಬೇಕು ಪ್ರತಿ ವಿಷಯದ ಜ್ಞಾನವನ್ನು ಪ್ರಾತ್ಯೇಕ್ಷಿತೆಯ ಮೂಲಕ ಮಾಡಬೇಕು ಎಂದರು.
ಈ ವೇಳೆ ವಿದ್ಯಾರ್ಥಿಗಳು ಮಳೆ ನೀರು ಸಂಗ್ರಹಣೆ, ಜ್ವಾಲಾಮುಖಿ, ಗಾಳಿಯಿಂದ ವಿದ್ಯುತ್ತಉತ್ಪಾದನೆ, ನೀರು ಶುದ್ದೀಕರಣಘಟಕ, ವಾಯುಗೊಳದ ಪದರುಗಳು, ಸೋಲಾರ ಶಕ್ತಿ, ಸೌರಮಂಡಲ, ಅಸ್ಥಿಪಂಜರ, ಹೃದಯದ ಕವಾಟುಗಳು, ಮೂತ್ರಜನಕಾಂಗ ಸೇರಿದಂತೆ 100 ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಜ್ಞಾನದ ವಸ್ತುಗಳನ್ನು ನಿರ್ಮಿಸಿ ಅದರ ವ್ಯಾಖ್ಯಾನವನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ದಾನಯ್ಯ ನಂದಿಕೋಲ, ರಾಣಿ ಜೋಗೂರ, ಅಕ್ಷತಾ ಕಿಣಗಿ, ಶಶಿಕಲಾ ಹೂಗಾರ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಪೊದ್ದಾರ, ವಿಜಯಲಕ್ಮೀಚೌಧರಿ,ಅರುಣಾ ಕವಲಗಿ, ಕೆ.ಎಸ್.ಲಾತೂರ, ಶ್ರೀಧರ ಮಲ್ಲೇದ, ಎಸ್.ಆರ್.ಹಾಲಕೇರಿ, ಕಲಾವತಿ ಹಿರೇಮಠ, ರೇಖಾ ಬಮ್ಮಣ್ಣಿ, ಭಾರತಿ ಹಿರೇಮಠ, ಸಂತೃಪ್ತಿ ಕಲಬುರ್ಗಿ, ಸುರೇಶ ಸುಣಗಾರ, ಅಭಿಷೇಕ ಬಿರಾದಾರ, ಶಿವಪುತ್ರ ಭಾಸಗಿ, ಆಶೀಫ್ ಕೊಂಕಣಿ ಸೇರಿದಂತೆಇತರರುಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 