ಲೋಕದರ್ಶನ ವರದಿ
ಕೊಪ್ಪಳ 05: ಮಾನವಕುಲಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ. ವಿಜ್ಞಾನವಿಲ್ಲದೆ ಮಾನವ ಬದುಕಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯರು ಮತ್ತು ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷರಾದ ಎಸ್ ವಿ ಸಂಕನೂರುರವರು ನುಡಿದರು. ಅವರು ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ವಿಜ್ಞಾನ ಪದವಿ ವಿದ್ಯಾಥರ್ಿಗಳಿಗಾಗಿ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪಧರ್ೆಯ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದುವರಿದು ವಿದ್ಯಾಥರ್ಿಗಳು ವೈಜ್ಞಾನಿಕ ಚಿಂತನೆ, ವೈಜ್ಞಾನಿಕ ಕೆಲಸ, ವೈಜ್ಞಾನಿಕ ಬದುಕು ನಡೆಸಿದಾಗ ಮೂಢನಂಬಿಕೆಗಳು ತನ್ನಷ್ಟಕ್ಕೆ ತಾನೆ ದೂರ ಸರಿಯುತ್ತವೆ ಎಂದರು. ಈ ಕಾರ್ಯಕ್ರಮದಲ್ಲಿ ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ ಗೌರವ ಕಾರ್ಯದಶರ್ಿಗಳಾದ ಗಿರೀಶ ಕಡ್ಲೆವಾಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಗನ್ನಾಥ ಹಲ್ಮಡಗಿ, ವಿಜ್ಞಾನಿಗಳಾದ ಡಿ.ಎಸ್.ಶಂಕರ್ರಾವ್, ಕೊಪ್ಪಳ ಕೃಷಿ ವಿಸ್ತರಣಾಧಿಕಾರಿ ಡಾ. ಎಮ್. ಬಿ. ಪಾಟೀಲ, ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಮನೊಹರ ದಾದ್ಮಿ, ಕಾರ್ಯಕ್ರಮದ ಸಂಯೋಜಕರಾದ ಡಾ.ಕುಂಟೆಪ್ಪ ಗೌರಿಪುರ, ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ರಾಜ್ಯದ ಆರು ವಿಭಾಗಗಳಿಂದ ಮನುಕುಲಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಅವಿಷ್ಕಾರಗಳು ಎಂಬ ವಿಷಯದ ಮೇಲೆ ಇಪ್ಪತ್ತೆಂಟು ವಿಜ್ಞಾನ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.
ಈ ಸ್ಪಧರ್ೆಯಲ್ಲಿ ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಕಾವ್ಯ ಕೆ. ಮತ್ತು ಚೈತ್ರ ಟಿ ಪ್ರಥಮ ಬಹುಮಾನ ಮತ್ತು ಹತ್ತು ಸಾವಿರ ರೂಗಳ ನಗದು ಪಡೆದರು. ಸಿಂಧನೂರು ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಮಂಜುನಾಥ ಬಿ. ಮತ್ತು ಮಂಜುನಾಥ ದ್ವಿತೀಯ ಬಹುಮಾನ ಮತ್ತು ಏಳು ಸಾವಿರ ರೂಗಳ ನಗದು ಪಡೆದರು. ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ಶಿಲ್ಪ ಜೆ. ಮತ್ತು ಸೌಜನ್ಯ ತೃತೀಯ ಬಹುಮಾನ ಮತ್ತು ಐದು ಸಾವಿರ ರೂಗಳ ನಗದು ಪಡೆದರು ಹಾಗೂ ಹೊಸಬಾವಿಯ ಎಮ್.ಎ.ಎಸ್.ಇ ಕಾಲೇಜಿನ ಕಾವ್ಯ ಮರಿಗೌಡರ್ ಮತ್ತು ಸಂಗೀತ ಯು.ಎ ಹಾಗೂ ಮಂಡ್ಯದ ಪಿ.ಇ.ಎಸ್ ಕಾಲೇಜಿನ ಜ್ಯೋತಿ ಮತ್ತು ಪಯೋನಿಧಿ ಅವರು ಸಮಾಧಾನಕರ ಬಹುಮಾನದ ಜೊತೆಗೆ ತಲಾ ಮೂರು ಸಾವಿರ ರೂಗಳ ನಗದು ಪಡೆದರು.
ಈ ಸ್ಪಧರ್ೆಯಲ್ಲಿ ಸಮಾರು 90 ವಿದ್ಯಾಥರ್ಿಗಳು ಭಾಗವಹಿಸದ್ದರು. ಈ ಕಾರ್ಯಕ್ರಮಕ್ಕೆ ಪ್ರತಿಭಾರಾಣಿ ಪ್ರಾಥರ್ಿಸಿದರೆ, ಅಧ್ಯಾಪಕರಾದ ಡಾ.ನಾಗರಾಜ ದಂಡೋತಿಯವರು ಕಾರ್ಯಕ್ರಮ ನಿರೂಪಿಸಿದರು.