ಾಂತಿ ಸದನ ಪ್ರೌಢಶಾಲೆಯಲ್ಲಿ ವಿಜ್ಞಾನ, ಗಣಿತ ವಸ್ತು ಪ್ರದರ್ಶನ

ಧಾರವಾಡ 26: ವಿಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದ್ದು ಮಕ್ಕಳು ವಿಜ್ಞಾನ ಮತ್ತು ಗಣಿತದಲ್ಲಿ ಆಸಕ್ತಿ ವಹಿಸಿದರೆ ಜೀವನದಲ್ಲಿ ಒಳ್ಳೆಯ ಶ್ರೇಷ್ಠ ವ್ಯಕ್ತಿಗಳಾಗಬಹುದು ಎಂದು ಧಾರವಾಡ ಶಹರ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಅಕ್ವರ್ ಅಲಿ ಖಾಜಿ ಹೇಳಿದರು.

ನಿರ್ಮಲನಗರದಲ್ಲಿ ಇರುವ ಶಾಂತಿ ಸದನ ಪ್ರೌಢಶಾಲೆಯಲ್ಲಿ ಇಂದು ವಿಜ್ಞಾನ ಹಾಗೂ ಗಣಿತ ವಸ್ತು ಪ್ರದರ್ಶನವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಅಲ್ಲದೆ ಶಾಲಾ ಹಂತದಲ್ಲಿ ಮಕ್ಕಳಿಗೆ ವಿಜ್ಞಾನದ ಬಗ್ಗೆ ತಿಳಿಸಿದರೆ ಮಕ್ಕಳಲ್ಲಿ ಇರುವ ಸುಪ್ತ ಪ್ರತಿಭೆಯನ್ನು ನಾವು ಹೊರ ಜಗತ್ತಿಗೆ ಮಕ್ಕಳನ್ನು ಪರಿಚಯಿಸಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. 

 ಸಿಸ್ಟರ್ಸ್ ಆಫ್ ಚ್ಯಾರಿಟಿಯ ಮುಖ್ಯಸ್ಥೆ ಸಿಸ್ಟರ್ ರೋಜಿ ಕುಟಿನ್ಹೊ ಮಾತನಾಡಿ ಇಂದಿನ ಮಕ್ಕಳು ನಾಳಿನ ವಿಜ್ಞಾನಿಗಳು. ಆದ್ದರಿಂದ ಮಕ್ಕಳಲ್ಲಿ ಬಾಲ್ಯದಿಂದಲೇ ಕುತೂಹಲ ಆಸಕ್ತಿ ಬೆಳೆಸಿಕೊಂಡು ಸಂಶೋಧನೆಯ ಮಾರ್ಗದತ್ತ ಸಾಗಬೇಕು ಎಂದರು. ಮಕ್ಕಳು ಹಾಗೂ ಪಾಲಕರು ಇಂದು ಅಂಕಗಳ ಬೆನ್ನು ಬೀಳದೆ ಮಕ್ಕಳಲ್ಲಿ ಹೊಸ ಹೊಸ ಆವಿಷ್ಕಾರಕ ಗುಣಗಳನ್ನು ಬೆಳೆಸಲು ಸಹಕಾರಿಯಾಗಬೇಕು ಎಂದರು. ವಿಜ್ಞಾನ ದೇಶದ ಆಥರ್ಿಕ ಪ್ರಗತಿಯನ್ನು ಸಾಥಿಸಲು ಸಹಾಯಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಂತಿ ಸದನ ಶಾಲೆಯ ಮ್ಯಾನೇಜರರಾದ ಸಿಸ್ಟರ್ಸ್ ಐರಿಸ್ ರೊಡ್ರಿಗಸ್ರವರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಫಾತಿಮಾ ಫನರ್ಾಂಡಿಸ್, ಫಾದರ್ ರಿಚರ್ಡ, ಸಿಸ್ಟರ್ ರೋಜ್ ಆ್ಯನ ಹಾಗೂ ಸಿಸ್ಟರ್ ಫಾತಿಮಾ ಮತಾಯಿಸ್ ಭಾಗವಹಿಸಿದ್ದರು.