ಶಾಲಾ ವಾರ್ಷಿಕೋತ್ಸವ ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಕಾರ್ಯಕ್ರಮ
ಧಾರವಾಡ 03 : ಮುದ್ದು ಮಕ್ಕಳು ವಿವಿಧ ರೀತಿಯ ವೇಷಭೂಷಣಗಳೊಂದಿಗೆ ಮತ್ತಷ್ಟು ಮತ್ತಷ್ಟು ಮುದ್ದಾಗಿ ಕಂಡರು. ತುಂಟತನ, ಮುಗ್ಧ್ದತೆಯಿಂದ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಮನಸ್ಸಿಗೂ ಮುದ ನೀಡಿದರು. ನಾವೂ ಕುಣಿಯಬಲ್ಲೆವು ಎನ್ನುವುದನ್ನು ರುಜುವಾತು ಮಾಡಿ ನೆರೆದವರ ಮನಗೆದ್ದರು. ಒಂದರಿಂದ ಹಿಡಿದು ಎಂಟನೇ ತರಗತಿ ವರೆಗಿನ ಮಕ್ಕಳು ವಿವಿಧ ವೇಷಭೂಷಣ ಧರಿಸಿ ಬಂದಿದ್ದರು. ಚಲನಚಿತ್ರದ ಹಾಡಿಗೆ ಹೆಜ್ಜೆ ಹಾಕಿ ಗಮನಸೆಳೆದರು. ವೇಷ ಧರಿಸಿದ್ದ ಮಕ್ಕಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಪ್ರಯತ್ನ ಮಾಡುತ್ತಿದ್ದರೆ ಇಡೀ ಪ್ಷೇಕ್ಷಕ ಗಣ, ಚಪ್ಪಾಳೆಗಳ ಮೆಚ್ಚುಗೆಯ ಮಳೆಗರೆದರು. ‘ಸೈನ್ಯದ ವಿರುದ್ಧ ಚಿತ್ರದುರ್ಗ ಕೋಟೆಯನ್ನು ರಕ್ಷಿಸುವಾಗ ಸಾಮಾನ್ಯ ಮಹಿಳೆ ಒನಕೆ ಓಬವ್ವ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದಳು.’ ಎಂಬ ಹಾಡಿಗೆ ನರ್ತಿಸಿ ಧೈರ್ಯದ ಮಾತುಗಳನ್ನು ಹೇಳಿದರು! ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ ಕನ್ನಡ ಅಭಿಮಾನ ಎತ್ತಿತೊರಿದರೆ, ನಾಗಿಣಿ ಡ್ಯಾನ್ಸ್ ಮಾಡೋಕೂ ಸೈ ಅಂದ 8ನೇ ತರಗತಿ ಮಕ್ಕಳು. ತವರು ಮನೆಯಿಂದ ತಂಗಿಯನ್ನು ಕಳಿಸಿಕೊಡುವ ಭಾವನಾತ್ಮಕ ಸನ್ನಿವೇಶ. ವರ್ಷವೀಡೀ ತುಂಟಾಟಿಕೆಯಲ್ಲೇ ಕಾಲ ಕಳೆಯುತ್ತಿದ್ದ ವಿದ್ಯಾರ್ಥಿಗಳೇಲ್ಲಾ ಆಗ ಚುನಾವಣೆ ಎದುರು ನೋಡುವ ರಾಜಕಾರಣಿಗಳಂತೆ ಬಲು ಚುರುಕಾಗಿ ಬಿಟ್ಟರು. ಕಿಡಿಗೇಡಿಗಳು ವಿದಾಯದ ದಿನಗಳು ಹತ್ತಿರವಾದಂತೆ ನಮ್ಮ ಗುರುಗಳೆಲ್ಲರ ಎಡಬಲದಲ್ಲೇ ಸುತ್ತಾಡುತ್ತ ಅತಿ ವಿನಯದ ವಿದ್ಯಾರ್ಥಿಗಳಾಗಿ ಬಿಟ್ಟರು. ಎಲ್ಲರ ತುಟಿಗಳ ಹಿಂದಿದ್ದ ಒಂದೇ ಶೋಕ ಸಂದೇಶ - ‘ವಿದಾಯ ಗೆಳೆಯನೆ, ವಿದಾಯ ಗೆಳತಿಯೆ. ಇದರ ಮಧ್ಯೆ. ಈಗೊಂದು ಎರಡು ಸನ್ನಿವೇಶ ಕಂಡುಬಂದಿದ್ದು ಬೇರೆ ಎಲ್ಲೂ ಅಲ್ಲ ಅದು ಮನಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ. ಗುರು ಹಿರಿಯರಿಗೆ ಗೌರವ ಕೊಡುವ ಮೂಲಕ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪರಮಪೂಜ್ಯ ಡಾ. ಬಸವರಾಜ ದೇವರು ಮಹಾಸ್ವಾಮಿಗಳು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಮಹಾಮಠ ಮನಸೂರ ಇವರು ಸಲಹೆ ನೀಡಿದರು. ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಾ. ವಿದ್ಯಾರ್ಥಿ ಜೀವನದಲ್ಲಿ ಸ್ವಷ್ಟ ಗುರಿಯೆಡೆಗೆ ಶಿಸ್ತಿನಿಂದ ಸಾಗಿದರೆ ಉತ್ತುಂಗಸ್ಥಾನಕ್ಕೆ ಏರಬಹುದು. ಜೊತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದರು. ಮಕ್ಕಳಲ್ಲಿ ಹುದುಗಿರುವ ಅದ್ಭುತ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವಲ್ಲಿ ಉತ್ತಮ ವೇದಿಕೆಯಾಗಿದೆ. ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ವಿಕಸನಕ್ಕೆ ಭೂಮಿಕೆಯಾಗಿ ಸರ್ವತೋಮುಖ ಅಭಿವೃದ್ಧಿಯ ಗುರಿಯನ್ನು ಸಾಕಾರಗೊಳ್ಳಲಿ ಎಂದರು.ಮಹಿಳಾ ಪಿ.ಎಸ್.ಐ ಧಾರವಾಡ ಗ್ರಾಮೀಣ ರೇಣುಕಾ ಐರಾನಿ ಮಾತನಾಡಿ ಸದಾ ಓದುವ ಪ್ರವೃತಿ ಬೆಳೆಸಿಕೊಳ್ಳಬೇಕು.ಸತತ ಪ್ರಯತ್ನ, ಸಮಯ ಪಾಲನೆ, ಪ್ರಾಮಾಣಿಕತೆ ರೂಢಿಸಿಕೊಂಡರೆ ಯಶಸ್ಸು ನಿಮ್ಮ ಪಾಲಾಗುತ್ತದೆ ಎಂದರು.ಮನಸೂರನ ಗ್ರಾಂ.ಪಂ ಸದಸ್ಯರಾದ ಬಸವರಾಜ ಅಮರಗೋಳ ಮಾತನಾಡಿ ಮಕ್ಕಳು ಓದಿನ ಜೊತೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ದಿ ಸಾಧ್ಯ ಎಂದರು. ಗ್ರಾ.ಪಂ ಅಧ್ಯಕ್ಷರಾದ ತಿಪ್ಪವ್ವ ಹಲಗಿ, ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ ಎಫ್, ಗ್ರಾಂ.ಪಂ ಸದಸ್ಯರಾದ ನಿಂಗಪ್ಪ ಯ ತೇಗೂರ, ಕರೆಪ್ಪ ಬಾ ಯತ್ತಿನಗುಡ್ಡ, ಬಸವರಾಜ ಮೂ ಅಮರಗೋಳ,ರಮೇಶ ಸೋ ಕುಂಬಾರ, ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಈರಣ್ಣ ಕಮ್ಮಾರ ಹಾಗೂ ಸರ್ವಸದಸ್ಯರು, ಗ್ರಾಮದ ಹಿರಿಯರು, ಮುಖ್ಯಾಧ್ಯಾಪಕರಾದ ರಾಧಾ ಎಲ್ ಹಳ್ಳೂರ, ಸರ್ವ ಶಿಕ್ಷಕಿಯರು, ಅಡುಗೆ ಸಹಾಯಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಒಟ್ಟೂ 48 ಡ್ಯಾನ್ಸ್‌ಗಳು, ಒಂದು ರೂಪಕ ಮತ್ತು ನಾಟಕ ಮಾಡಿದರು, ‘ಸೈನ್ಯದ ವಿರುದ್ಧ ಚಿತ್ರದುರ್ಗ ಕೋಟೆಯನ್ನು ರಕ್ಷಿಸುವಾಗ ಸಾಮಾನ್ಯ ಮಹಿಳೆ ಒನಕೆ ಓಬವ್ವ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದಳು.’ ಎಂಬ ಹಾಡಿಗೆ ನರ್ತಿಸಿ ಧೈರ್ಯದ ಮಾತುಗಳನ್ನು ಹೇಳಿದರು! ಒಂದರಿಂದ ಹಿಡಿದು ಎಂಟನೇ ತರಗತಿ ವರೆಗಿನ ಮಕ್ಕಳು ವಿವಿಧ ವೇಷಭೂಷಣ ಧರಿಸಿ ಬಂದಿದ್ದರು. ಚಲನಚಿತ್ರದ ಹಾಡಿಗೆ ಹೆಜ್ಜೆ ಹಾಕಿ ಗಮನಸೆಳೆದರು. ವೇಷ ಧರಿಸಿದ್ದ ಮಕ್ಕಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಪ್ರಯತ್ನ ಮಾಡುತ್ತಿದ್ದರೆ ಇಡೀ ಪ್ಷೇಕ್ಷಕ ಗಣ, ಚಪ್ಪಾಳೆಗಳ ಮೆಚ್ಚುಗೆಯ ಮಳೆಗರೆದರು. ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ ಕನ್ನಡ ಅಭಿಮಾನ ಎತ್ತಿತೊರಿದರೆ, ನಾಗಿಣಿ ಡ್ಯಾನ್ಸ್ ಮಾಡೋಕೂ ಸೈ ಅಂದ 8ನೇ ತರಗತಿ ಮಕ್ಕಳು . ಡ್ಯಾನ್ಸ ಮಾಡುವಾಗ ಮರಿ ನಾಗರ ಹಾವು ಹಿಂದೆ ಕುಳಿತು ಕಣ್ಣು ಪಿಳಿಕಿಸುತ್ತಾ ನೋಡುತ್ತಿರುವುದು ಎಲ್ಲರ ಗಮನ ಸೇಳೆಯಿತು. ಸಿನಿಮಾ ಹಾಡಿನೊಂದಿಗೆ ಯೋಗದ ಡ್ಯಾನ್ಸ,ಯೋಗ ಮಾಡಿ ರೋಗದಿಂದ ದೂರವಿರಿ ಎಂಬ ನಿರೂಪಕರ ಮಾತಿಗೆ ಎಲ್ಲರ ಚಪ್ಪಾಳೆ____