ಶಾಲಾ ಕಟ್ಟಡ ಉದ್ಘಾಟನೆ-

ಯಲ್ಲಾಪುರ 31; ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ವಜ್ರಳ್ಳಿ, ಹೊನಗದ್ದೆಯಲ್ಲಿ ನವೆಂಬರ 1 ರಂದು ಬೆಳಿಗ್ಗೆ  ರಾಜ್ಯೋತ್ಸವ ಮತ್ತು ಶಾರದಾ ಪೂಜೆ ನಿಮಿತ್ತ ಮಕ್ಕಳಿಂದ ಕನ್ನಡ ಗೀತಗಾಯನ ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಹಾಗೂ ಬೆಳಿಗ್ಗೆ 11 ಗಂಟೆಗೆ ನೂತನ ಸಭಾಭವನವನ್ನು, ಕೈಗಾ ಎನ್ ಪಿ ಸಿ ಎಲ್     ಸಿ ಆರ್ ಎಸ್ ಸಮಿತಿಯವರು  ನಿಮರ್ಿಸಿದ ಪ್ರಾಥಮಿಕ ಶಾಲೆಗಳ ಕಟ್ಟಡಗಳನ್ನು ನವೆಂಬರ್ 1 ರಂದು ಬೆಳಿಗ್ಗೆ ಕೈಗಾ ಯೋಜನೆಯ ಮಹಾ ನಿದರ್ೇಶಕರಾದ ಸತೀಶ ಕುಮಾರ ಶಮರ್ಾ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು  ಗ್ರಾ ಪಂ ಅಧ್ಯಕ್ಷ ಗಜಾನನ ಭಟ್ಟ ವಹಿಸಲಿದ್ದು, ಕೈಗಾ ಎನ್ ಪಿ ಸಿ ಎಲ್ ಅಧಿಕಾರಿಗಳಾದ  ಸಂಜಯ ಕುಮಾರ ,ಜಿ ಆರ್ ದೇಶಪಾಂಡೆಜಿ ಪಂ ಸದಸ್ಯೆ ಶೃತಿ ಹೆಗಡೆ, ತಾ ಪಂ ಅಧ್ಯಕ್ಷೆ ಭವ್ಯಾ  ಶೆಟ್ಟಿ , ತಾ ಪಂ ಸದಸ್ಯ ನಟರಾಜ ಗೌಡರ್, ಗ್ರಾ ಪಂ ಉಪಾಧ್ಯಕ್ಷೆ  ಪಾರ್ವತಿ ಭಟ್ಟ, ಸದಸ್ಯೆ , ಪಿ ಡಿ ಸಂತೋಷಿ ಆರ್ ಬಂಟ ಮುಂತಾದ ಗಣ್ಯರು ಉಪಸ್ಥಿತರಿರುವರು.

 

ಮಧ್ಯಾಹ್ನ 2-30 ರಿಂದ ರಾಮನಿರ್ಯಾಣ ತಾಳಮದ್ದಳೆ ಜರುಗಲಿದ್ದು  ಭಾಗವತರಾಗಿ ಪ್ರಸನ್ನ ಭಟ್ಟ ಬಾಳ್ಕಲ್, ಗಂಗಾ ಭಟ್ಟ ಗಿಡಗಾರಿ, ಮದ್ದಳೆಯಲ್ಲಿ ನರಸಿಂಹ ಹಂಡ್ರಮನೆ, ಅರ್ಥಧಾರಿಗಳಾಗಿ  ರಾಮನ ಪಾತ್ರದಲ್ಲಿ ಪ್ರೋ. ಎಮ್ ಎನ್ ಹೆಗಡೆ ಹಳವಳ್ಳಿ, ಲಕ್ಷ್ಮಣನಾಗಿ ಆರ್ ಟಿ ಭಟ್ಟ ಬ್ರಹ್ಮೂರು, ಕಾಲಪುರುಷನಾಗಿ ಡಾ. ಡಿ ಕೆ ಗಾಂವ್ಕಾರ, ದೂವರ್ಾಸನಾಗಿ ವಿದ್ವಾನ್ .ವಿನಾಯಕ ಭಟ್ಟ ಶೇಡಿಮನೆ ಪಾತ್ರ ನಿರ್ವಹಿಸುವರು. ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.