ಕನ್ನಡ ಉಳಿಸಿ, ಕನ್ನಡ ಬೆಳೆಸಲು ಪಣ ತೊಡಿ: ಸತೀಸ ತುರಮರಿ

Save Kannada, work to grow Kannada: Satisa Turamari

ಕನ್ನಡ ಉಳಿಸಿ, ಕನ್ನಡ ಬೆಳೆಸಲು ಪಣ ತೊಡಿ: ಸತೀಸ ತುರಮರಿ 

ಹುಬ್ಬಳ್ಳಿ 02:  ಕನ್ನಡದ ಪ್ರತಿಯೊಂದು ಪದಗಳ ಉಚ್ಛಾರದೊಂದಿಗೆ,   ತೊಟ್ಟಿಕ್ಕುವ ಜೇನಿನ ಹನಿಗಳ ಸ್ವಾದ  ಸವಿಯುವ ಭಾಗ್ಯ  ಕನ್ನಡಿಗರಾದ ನಾವುಗಳೆಲ್ಲಾ  ದಿನದಿಂದ ದಿನಕ್ಕೆ  ಕಳೆದು ಕೊಳ್ಳುತ್ತಿರುವೆವೋ ಎಂಬ ಭಯದಲ್ಲಿರುವಾಗ “ ಕನ್ನಡ ಸಾಹಿತ್ಯವರ್ಧಕ ಹಾಗೂ ಸಂಸ್ಕೃತಿಕ ಸಂಸ್ಥೆ” ಸಾಹಿತಿ ಗೂಡುಭಾಯಿ ಹುಟ್ಟು ಹಾಕಿದ್ದು ತುಂಬ ಸಂತಸ ತಂದಿದೆ ಎಂದು ಸಮಾಜ ಸೇವಕ ಪ್ರಸಿದ್ಧ ಹೋರಾಟಗಾರ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಸ ತುರಮರಿ ಅವರು ನುಡಿದರು.  

           ಜನೇವರಿ 31 ರಂದು ಧಾರವಾಡದ ರಾ.ಹ. ದೇಶಪಾಂಡೆ ಸಭಾಬವನದಲ್ಲಿ ಕನ್ನಡ ಉಳಿಸಲು ಬೆಳೆಸಲು ಪಣ ತೊಡಿರಿ ಎಂಬ ಘೋಷ ವಾಕ್ಯದೊಂದಿಗೆ ಕನ್ನಡಸಾಹಿತ್ಯ ವರ್ಧಕ ಮತ್ತು ಸಂಸ್ಕೃತಿಕ ಸಂಸ್ಥೆಯ  ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 

ಕನ್ನಡ ಮಾತನಾಡುವುದು, ಮತ್ತು ಮಾತನಾಡಿಸುವುದು ಪ್ರತಿ ಮನೆಗಳ ತಾಯಂದಿರೇ   ಪ್ರಾರಂಭಿಸಬೇಕು.   ಮಗು ಜನ್ಮಿಸಿದ ಕ್ಷಣದಿಂದ ಮಾತು ಕಲಿಯುವವರೆಗೆ,ಮತ್ತು  ಜ್ಞಾನ ಪಡೆಯುವವರೆಗೆ, ಮಕ್ಕಳಿಗೆ ತಾಯಿಯೇ ಗುರುವಾಗಿದ್ದರಿಂದ ಕನ್ನಡ ಉಳಿಸಿ ಬೆಳೆಸಲು ತಾಯಿ ಪಣ ತೊಟ್ಟಲ್ಲಿ ಕನ್ನಡಿಗರಿಗೆ, ಕನ್ನಡವೇ ಉಸಿರಾಗಿ ಮಾರ​‍್ಾಡವಾಗುತ್ತದೆ. ಎಂದು ಸತೀಶ ತುರಮರಿ ನುಡಿದರು.  

      ಉದ್ಘಾಟಕರಾಗಿ ಆಗಮಿಸಿದ  ಕೃಷ್ಟಾ ಕೊಳಾನಟ್ಟಿ ಮಾತನಾಡುತ್ತ  ಪ್ರತಿಯೊಬ್ಬ ತಾಯಿ,  ತಮ್ಮ  ಮಕ್ಕಳು ಚಿಕ್ಕವರಿರುವಾಗಲೇ  ಭಾಷಾಭಿಮಾನ, ಭಾಷಾಪ್ರೇಮ, ಹಾಗೂ ಸಾಹಿತ್ಯಾಭಿರುಚಿ, ದೇಶ ಪ್ರೇಮ, ಸೌಹಾರ್ಧತಾಭಾವ ಹುಟ್ಟಿಸಲು ಆಸಕ್ತಿ ಹೊಂದಿದರೆ ಮಕ್ಕಳ ರಕ್ತದ ಕಣ ಕಣದಲ್ಲಿ ಕನ್ನಡ ಭಾಷೆಯ ಪ್ರೇಮ  ಉಕ್ಕಿ  ಹರಿಯುವುದರಲ್ಲಿ ಸಂದೇಹವೆ ಇಲ್ಲ  ಎಂದು ಎ.ಪಿ.ಎಂ.ಸಿಯ ಮಾಜಿ ಅಧ್ಯಕ್ಷ ಕ್ರಷ್ಟಾ ಕೊಳಾನಟ್ಟಿ ಅವರು ಹೇಳಿದರು.  

  

ಗಂಜರ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ ರಾಮೂ ಮೂಲಗಿ ಅವರು ಮಾತನಾಡುತ್ತ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ಯುವಜನರನ್ನು ಕರೆತರುವ ಕೆಲಸವಾಗಲಿ.  ಕವಿಗಳು ಸಂಗಿತಗಾರರು  ತಮ್ಮ ಮಕ್ಕಳಿಗೆ ಸಂಗೀತ ಕವಿತೆ ಕಲಿಸುವಂತಾಗಲಿ ಎಂದು ಹೇಳಿದರು.ಕನ್ನಡವು ನಮ್ಮೆಲ್ಲರ ತಾಯಿ ಭಾಷೆಯಾಗಿದೆ. ಇತ್ತೀಚಿಗೆ ಕುಟುಂಬಗಳಲ್ಲಿ ಕನ್ನಡ ಪರ ಕಾಳಜಿ ಕಡಿಮೆಯಾಗುತ್ತಿದೆ. (ಡಿಜೆ) ಮೂಲ ಜನಪದವಲ್ಲ. ಅವುಗಳಿಂದ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ. ಜನಪದ ಸಾಹಿತ್ಯವು ತಾಯಿ ಬೇರಾಗಿದ್ದು, ಆ ಸಾಹಿತ್ಯಕ್ಕೆ ನಾವೆಲ್ಲರೂ ಮಾಲೀಕರಾಗಿದ್ದೇವೆ. ಎಂದರು.  

    ಸಂಸ್ಥೆಯ ಅಧ್ಯಕ್ಷ ಮಹಮ್ಮದಲಿ ಗುಡುಭಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ  ಉದ್ದೇಶಗಳನ್ನು ತಿಳಿಸುತ್ತ,  ಮೊಬೈಲ್ ದಿಂದ ಜಗತ್ತಿನಲ್ಲಿ ಸಾಹಿತ್ಯದ ಒಲವು ಕಡಿಮೆಯಾಗುತ್ತಿದೆ ಎಂದು ಬೇಸರಪಡುತ್ತ,  ಇಂದಿನ ಮಕ್ಕಳು ಸಾಕಷ್ಟು ಕನ್ನಡ ಪುಸ್ತಕ ಓದುವ ರೂಢಿ ಬೆಳೆಸಿಕೊಳ್ಳಬೇಕೆಂದರು.  

    28 ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು. ನಂತರ ಪದ ಗ್ರಹಣ  ನಡೆಯಿತು. ಸಂಸ್ಥೆಯ ಗೌರವ ಅಧ್ಯಕ್ಷ ಖ್ಯಾತ ಸಾಹಿತಿ ರಂಜಾನ ದರ್ಗಾ, ಕಾಯಾಧ್ಯಕ್ಷ ಶಿವಾನಂದ ಬಿದರಕಟ್ಟಿ.  ಅದ್ಯಕ್ಷರಾಗಿ ಮಹಮ್ಮದಲಿ ಗೂಡುಭಾಯಿ ಉಪಾಧ್ಯಕ್ಷರಾಗಿ ಜಿ.ವಿ ಹಿರೇಮಠ, ಕಾರ್ಯದರ್ಶಿ ಬಿ.ಕೆ. ಸೋದರ. ಸಹ ಕಾರ್ಯದರ್ಶಿ ಪುಷ್ಷಾ ಹಿರೇಮಠ. ಖಜಾಂಚಿ,  ರಮೆಶ ಗಾಯಕವಾಡ ಕಾರ್ಯಕಾರಿ ಸದಸ್ಯರುಗಳಾದ ಉರ್ವಿಳಾ ಜಕ್ಕಣ್ಣವರ, ಸುಧಾ ಕಬ್ಬೂರ, ವೀಣಾ ಆಯ್ಕೆಯಾದರು.  

ಸುಧಾ ಕಬ್ಬೂರ ಮತ್ತು ಪುಪ್ಪಾ ಹಿರೇಮಠ ನಿರೂಪಿಸಿದರು. ಬಿ.ಕೆ ಸೋದರ ವಂದಿಸಿದರು.