ಲೋಕದರ್ಶನ ವರದಿ
ಶಿಗ್ಗಾವಿ21 : ಭಾರತ ದೇಶದಲ್ಲಿ ಜಾನಪದ ಸಂಗೀತ ಕಲೆ ಅದರದೆಯಾದ ಸ್ಥಾನಮಾನವನ್ನು ಹೊಂದಿದ್ದು ಅಂತಹ ಕಲೆ, ಕಲಾವಿದರನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಅವಶ್ಯಕತೆಯಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಹೇಳಿದರು.
ತಾಲೂಕಿನ ಬಂಕಾಪೂರ ದುಗರ್ಾದೇವಿ ದೇವಸ್ಥಾನದ ಆವರಣದಲ್ಲಿ ಜಾತ್ರೆಯ ನಿಮಿತ್ಯ ಕನ್ನಡ ಮತ್ತು ಸಂಸ್ಕೃತ ಇಲಾಖೆ ಆಶ್ರಯದಲ್ಲಿ ಡಾ.ರಾಜ್ ಗಾನಕಲಾ ರತ್ನ ಪ್ರಶಸ್ತಿ ಪುರಸ್ಕೃತ ಗುರು ಛಲವಾದಿ ರಾಜ್ ಗುರು ಜಾನಪದ ಕಲಾ ತಂಡದವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾನಪದ ಸಂಗೀತ ಕಲೆ ಗ್ರಾಮಿಣ ಬಾಗದ ಸೊಗಡನ್ನು ಬಿಂಬಿಸುವ ಕುಟ್ಟುವಾಗಿನ, ಬೀಸುವಾಗಿನ, ರೈತರು ಪೈರು ಬಿತ್ತಿ ಬೆಳೆಯುವಾಗಿನ, ಮದುವೆ, ಶೀಮಂತ, ತೊಟ್ಟಿಲು ಹಾಕುವಾಗಿನ, ಮಜ್ಜಿಗೆ ಕಡೆಯುವಾಗಿನ ಜೋಗುಳ ಜಾನಪದ ಗೀತೆಗಳು ಸೂರ್ಯ ಚಂದ್ರಾದಿಗಳು ಇರುವ ತನಕ ಜನರ ಮನದಲ್ಲಿ ಶಾಸ್ವತವಾಗಿ ಇರಲಿವೆ.
ಅಂತಹ ಜಾನಪದ ಕಲೆ ಅತ್ಯಾದುನಿಕ ತಂತ್ರಜ್ಞಾನದ ಚಲನ ಚಿತ್ರದ ಅಬ್ಬರದ ಸಂಗೀತದ ಮದ್ಯ ನಲುಗಿ ಹೊಗುತ್ತಿದೆ. ಇಂತಹ ಸಂದರ್ಬದಲ್ಲಿ ಜಾತ್ರೋತ್ಸವ ಸಮಿತಿಯವರು ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಟ್ಟು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಅಹೋರಾತ್ರಿ ನಡೆದ ಜಾನಪದ ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದ ಗುರು ಛಲವಾದಿ ಹಾಡಿದ ಮುಂಜಾನೆದ್ದು ಕುಂಬಾರಣ್ಣ ಹಾಲು,ಭಾನು ಉಂಡಾನೊ ಹಾರ್ಯಾರಿ ಮಣ್ಣ ತುಳಿದಾನೊ, ಮಲ್ಲು ಬೆಳಗಲಿ ಹಾಡಿದ ಕುರುಬರೋ ನಾವು ಕುರುಬರೋ ಹಾಗು ವಳಿತು ಮಾಡೋ ಮನುಜಾ ನೀ ಇರೊದು ಮೂರು ದಿವಸ ಹಾಡಿಗೆ ಮಂತ್ರ ಮುಗ್ದರಾದ ಪ್ರೇಕ್ಷಕರು ವೇದಿಕೆ ಎದರು ಕುಣಿದು ಕುಪ್ಪಳಿಸಿದರು.
ಲಿಂಗರಾಜ ಹಳವಳ್ಳಿ, ನಿಂಗಪ್ಪ ಮಾಯಣ್ಣವರ, ಜಗದೀಶ ಛಲವಾದಿ, ಇಂದ್ರಯ್ಯ ಹಿರೇಮಠ, ಈಶ್ವರ ಅಗಡಿ, ಸಿದ್ದಯ್ಯ ಗೌರಿಮಠ, ನಾಗಪ್ಪ ಹಳವಳ್ಳಿ, ಜಗದೀಶ ಹುರಳಿ, ಹನಮಂತಪ್ಪ ತಳ್ಳಳ್ಳಿ, ಪ್ರತಾಪಸಿಂಗ್ ಶಿವಪ್ಪನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಎಫ್.ಸಿ.ಕಾಡಪ್ಪಗೌಡ್ರ ನಿರೂಪಿಸಿದರು.