ಶಿಕ್ಷಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ಧಾರವಾಡ 03: ಕನರ್ಾಟಕ ಸಕರ್ಾರಿ ಗ್ರಾಮೀಣ ಶಾಲಾ ಶಿಕ್ಷಕರ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ  ಕನರ್ಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಬ್ಬಳ್ಳಿ ಘಟಕದವರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ಆರಂಭಿಸಿದರು.

      ಗ್ರಾಮೀಣ ಶಿಕ್ಷಕರು ಹಲವು ವರ್ಷಗಳಿಂದ ಸೌಲಭ್ಯ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ಥಗಿತಗೊಂಡಿರುವ ಶಿಕ್ಷಕರ ವಗರ್ಾವಣೆ ಪ್ರಾರಂಭಿಸಿ ಕೌನ್ಸಿಲಿಂಗ ನಡೆಸಿ ವಗರ್ಾವಣೆಗೊಂಡ ಶಿಕ್ಷಕರನ್ನು ಶೈಕ್ಷಣಿಕ ವಷಾರ್ಂತ್ಯಕ್ಕೆ ಬಿಡುಗಡೆಗೊಳಿಸಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ 2500 ರೂ.ಗ್ರಾಮೀಣ ಪರಿಹಾರ ಭತ್ಯ ನೀಡಬೇಕು, ಎನ್ ಪಿಎಸ್ ಯೋಜನೆಯನ್ನು ತಜ್ಞರ ಸಭೆ ಕರೆದು ಎನ್ ಪಿ.ಎಸ್ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.

     ಸಕರ್ಾರಿ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರನ್ನು ಪದನಾಮ ಬದಲಾಯಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಶೇ. 75 ರಷ್ಟು ಹುದ್ದೇಗಳಿಗೆ ವೇತನ ಬಡ್ತಿ ನೀಡಿ ನೀಯೋಜಿಸಬೇಕು ಹಾಗೂ ಗ್ರಾಮೀಣ ಶಿಕ್ಷಕರ ನೌಕರರ ಸಮಸ್ಯೆ ಕಳೆದ ಎರಡು ದಶಕಗಳಿಂದ ಹಾಗೇ ಉಳಿದುಕೊಂಡಿದೆ,ಗ್ರಾಮೀಣ ನೌಕರರ ಸಮಸ್ಯೆ ಪರಿಹರಿಸವಂತೆ ಧರಣಿ ಸತ್ಯಾಗ್ರಹ ನಡೆಸಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಸಂಘವು ಹೇಳಿದೆ.

    ಕನರ್ಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ, ಹುಬ್ಬಳ್ಳಿ ಘಟದ ಅಧ್ಯಕ್ಷ ಅಶೋಕ ಸಜ್ಜನ, ಸಂಘಟನಾ ಕಾರ್ಯದಶರ್ಿ ಕಲ್ಪನಾ ಚಂದನಕರ, ಪ್ರಧಾನ ಕಾರ್ಯದಶರ್ಿ ಮಲ್ಲಿಕಾಜರ್ುನ ಉಪ್ಪಿನ, ಕೋಶಾಧ್ಯಕ್ಷ ಎಸ್.ಎಫ್.ಪಾಟೀಲ, ಉಪಾಧ್ಯಕ್ಷ ಗೋವಿಂದರಾಜ ಜುಜಾರೆ ಇನ್ನಿತರರು ನೇತೃತ್ವ ವಹಿಸಿದ್ದಾರೆ.