ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗುರುಸ್ಪಂದನ ಕಾರ್ಯಕ್ರಮ
ಯರಗಟ್ಟಿ 01 : ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗುರುಸ್ಪಂದನ ಕಾರ್ಯಕ್ರಮ ಏರಿ್ಡಸಲಾಗಿತ್ತು.ಕಾರ್ಯಕ್ರಮವನ್ನು ಬಿಇಒ ಮೋಹನ ದಂಡಿನ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಿಂದ ಜಾರಿ ಮಾಡಿರುವ ಗುರುಸ್ಪಂದನ ಕಾರ್ಯಕ್ರಮ ಶಿಕ್ಷಕರಿಗೆ ಅತ್ಯಂತ ಸಹಕಾರಿಯಾಗಿದೆ. ಅಗತ್ಯ ಇರುವ ಎಲ್ಲಾ ಶಿಕ್ಷಕರು ಈ ಯೋಜನೆ ಲಾಭ ಪಡೆದುಕೊಳ್ಳಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮ ಅಧ್ಯಕ್ಷತೆಯನ್ನು ಎ. ಎ. ಮಕ್ತುಮನವರ, ಮುಖ್ಯ ಅತಿಥಿಗಳಾಗಿ ಕೆ.ಎಸ್.ಪಿ.ಎಸ್.ಟಿ. ಅಧ್ಯಕ್ಷ ಕಿರಣ ಕುರಿ, ಕೆ.ಎಸ್.ಪಿ.ಎಸ್.ಟಿ. ಉಪಾಧ್ಯಕ್ಷ ಎಂ. ಎಫ್. ಸಿದ್ದನಗೌಡರ, ಎಂ. ಎಸ್. ಕೋಳಿ, ಎಂ. ಎಂ. ಚೀಲದ, ವಿಜಯ ಮೆಳವಂಕಿ, ಮಹಾಂತೇಶ ಬ್ಯಾಹಟ್ಟಿ, ಎಂ. ಬಿ. ಕಡಕೋಳ, ವ್ಹಿ. ಎಸ್. ರಾವಳ, ಎಸ್. ಎಸ್. ಬೆಟಗೇರಿ, ಎಸ್.ಡಿ.ಖನ್ನಿನಾಯ್ಕರ, ಸಿ.ಆರ್.ಪಿಗಳಾದ ವಸಂತ ಬಡಿಗೇರ, ಬಿ. ಎಸ್. ಸಿದ್ದಬಸನ್ನವರ, ಎಂ. ಎಂ. ಮಲಕನ್ನವರ, ಶ್ರೀಮತಿ ಜಿ. ಎಸ್. ಮಲಕನ್ನವರ, ಎಚ್. ಹಾಯ್. ಗೌಡರ, ವಾಯ್. ಬಿ. ನಂದಿ, ಮಲ್ಲಪ್ಪ ಯರಝರ್ವಿ, ಶಿವಾನಂದ ಮಿಕಲಿ, ಎ. ಬಿ. ಪಾಟೀಲ ಸೇರಿದಂತೆ ಐದು ವಲಯದ ಶಿಕ್ಷಕರು ಇದ್ದರು.