ಸರೋಜವ್ವ ಜಂಬಗಿ ನಿಧನ
ರಾಣೇಬೆನ್ನೂರುಜ 27 ಇಲ್ಲಿನ ರಾಜ ರಾಜೇಶ್ವರಿ ನಗರದ ನಿವಾಸಿ ಶ್ರೀಮತಿ ಸರೋಜವ್ವ ಜಂಬಗಿ (86) ಅವರು ಶನಿವಾರ ನಿಧನರಾದರು.ಮೃತರು ದೇವರಗುಡ್ಡ ಗ್ರಾಮದ ಶ್ರೀ ಮಾಲತೇಶ್ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವೀರೇಶ್ ಜಂಬಗಿ ಅವರು ಪುತ್ರರಾಗಿದ್ದಾರೆ.
ಇಲ್ಲಿನ ದೇವರಗುಡ್ಡ ರಸ್ತೆಯ ವೀರಶೈವ ರುದ್ರ ಭೂಮಿಯಲ್ಲಿ ಸಂಜೆ ಅಪಾರ ಜನೋತ್ಸಮದ ಮಧ್ಯೆ ನೆರವೇರಿಸಲಾಯಿತು. ಸಂತಾಪ :- ಮೃತ ಸರೋಜವ್ವ ಜಂಬಗಿ ಅವರ ನಿಧನಕ್ಕೆ, ಜಿಲ್ಲಾ ಕಸಾಪ ಅಧ್ಯಕ್ಷ ಹೆಚ್. ಬಿ.ಲಿಂಗಯ್ಯ, ಮಾಜಿ ಅಧ್ಯಕ್ಷ ಜಿ.ಬಿ. ಮಾಣಸಗಿ, ಡಾ: ಕೆ.ಎಚ್. ಮುಕ್ಕಣ್ಣನವರ, ತಾಲೂಕ ಅಧ್ಯಕ್ಷ ಪ್ರಭಾಕರ್ ಶಿಗ್ಲಿ ವಾಸಣ್ಣ ಕುಸುಗೊರ, ಎ.ಬಿ.ರತ್ನಮ್ಮ, ಜಿ. ಸುಂದ್ರಾ ರಾಮಚಂದ್ರ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ಶಿಕ್ಷಕ ವೃಂದದವರು ತಮ್ಮ ತೀರ್ವ ಸಂತಾಪ ಸೂಚಿಸಿದ್ದಾರೆ.