ಲೋಕದರ್ಶನವರದಿ
ಹಗರಿಬೊಮ್ಮನಹಳ್ಳಿ 25:ಕನ್ನಡ ಭಾಷೆಯು ತಾಯಿ ಬೇರು ಎಂದು ಪ್ರಖ್ಯಾತಿ ಪಡೆದಿದೆ ಇಂದಿನ ಪರಭಾಷಾ ವ್ಯಾಮೋಹಕ್ಕೆ ಮಾರು ಹೋಗಿ ಹಲವಾರು ಕನ್ನಡ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದ್ದು ಶಾಲೆಗಳ ಮುಚ್ಚುವ ಪರಿಸ್ಥಿತಿ ಏರ್ಪಟ್ಟಿರುವುದು ಶೋಚನೀಯ ಸಂಗತಿಯಾಗಿದ್ದು ಸರಕಾರ ಕನ್ನಡ ಶಾಲೆಗಳ ಸ್ಥಿರತೆಗಾಗಿ ಶ್ರಮಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವಾ ಹೇಳಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಆವರಣದಲ್ಲಿ ಇಲ್ಲಿಯ ಗ್ರೀನ್ ಹೆಚ್.ಬಿ.ಹೆಚ್ ಗ್ರೂಫ್ನವರು ಆಯೋಜಿಸಿದ್ದ, ಆಳ್ವಾಸ್ ನುಡಿಸಿರಿ 2019ರ ಸಾಂಸ್ಕೃತಿಕ ವೈಭವ ಉತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿ, ನಾವು ಇಲ್ಲಿಗೆ ಬಂದಿರುವುದು, ಯಾವುದೋ ರಾಜಕೀಯ ಪಕ್ಷದ ಪ್ರಚಾರಕ್ಕಲ್ಲ ಅಥವಾ ಇಲ್ಲೊಂದು ವ್ಯಾಪಾರಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ತೆರೆಯುವ ಉದ್ದೇಶವು ನಮಗಿಲ್ಲ. ಬದಲಾಗಿ ಪಠ್ಯಕ್ರಮಕ್ಕೆ ಕೊಟ್ಟಷ್ಟು ಮಹತ್ವವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನೀಡುತ್ತಿದ್ದೇವೆ. ಅದನ್ನು ನಿಮ್ಮೆದುರು ಪ್ರಸ್ತುತಪಡಿಸಲು ಬಂದಿದ್ದೇವೆ ಎಂದರು.
ಸಾಂಸ್ಕೃತಿ ಕಾರ್ಯಕ್ರಮಗಳು ಗ್ರಾಮೀಣ ಭಾಗಗಳಿಗೂ ತಲುಪಬೇಕೆಂಬ ಸದುದ್ದೇಶದಿಂದ ಆಳ್ವಾಸ್ ನುಡಿಸಿರಿ ಆರಂಭವಾಯಿತು. ಸಾಂಸ್ಕೃತಿಕ ಬದುಕನ್ನು ಒಂದು ಆಯಾಮದಲ್ಲಿ ವಿಶ್ಲೇಷಿಸಬೇಕು, ಹಾಗಾಗಿ 15ವರ್ಷಗಳಿಂದ ಆಳ್ವಾಸ್ ನುಡಿಸಿರಿ ಉತ್ಸವವನ್ನು ಮಾಡುತ್ತಿದ್ದೇವೆ. ಇದರಲ್ಲಿ 8ವಿಧದ ಶಾಸ್ತ್ರೀಯ ನೃತ್ಯಗಳಿವೆ, ನಮ್ಮ ಸಂಸ್ಥೆಯ ವಿದ್ಯಾಥರ್ಿಗಳೇ ಇಲ್ಲಿ ಕಲಾವಿದರಾಗಿರುತ್ತಾರೆ. ಶಾಸ್ತ್ರೀಯವಾದಂತ ಬದುಕು ನಮ್ಮ ದೇಶದ ಸಂಪತ್ತು, ಹಿಂದಿನ ಕಾಲದಲ್ಲಿ ಋಷಿಗಳು, ಗುರುಗಳು ಹಾಗೂ ಶಿಷ್ಯರು ಸೇರಿ ಇಂತಹ ಕಲೆಗಳನ್ನು ನಮಗಾಗಿ ಕಟ್ಟಿಕೊಟ್ಟಿದ್ದಾರೆ. ವಿದ್ಯಾಬುದ್ದಿ ಜೊತೆ ವೃತ್ತಿಪರ ಹಾಗೂ ಸಾಂಸ್ಕೃತಿಕ ಕಲೆಗಳಿಗೂ ಪ್ರಾಸಶ್ತ್ಯ ನೀಡಬೇಕು, ಆಗಲೇ ಅದು ನಿಜವಾದ ಕಲಿಕೆಯಾವುದು. 2000ವರ್ಷಗಳ ಇತಿಹಾಸವಿರುವ ಕನ್ನಡಭಾಷೆ ಸೋಲಬಾರದು, ಕನ್ನಡ ಮಾಧ್ಯಮ ಶಾಲೆಗಳು ಉಳಿಯಲೇ ಬೇಕಾದ ಅನಿವಾರ್ಯತೆ ಇದೆ. ಈ ಕಾಲಕ್ಕೆ ಕನ್ನಡಮಾಧ್ಯಮ ಶಾಲೆಗಳು ಇನ್ನಷ್ಟು ಗಟ್ಟಿಯಾಗಬೇಕು, ಸಕರ್ಾರ ಈ ನಿಟ್ಟಿನತ್ತ ಚಿಂತನೆ ನಡೆಸಬೆಕಾಗಿದೆ ಎಂದರು.
ಜಿಂದಾಲ್ ಸ್ಟೀಲ್ವಕ್ಸರ್್ನ ಅಧ್ಯಕ್ಷ ರಾಜಶೇಖರ್ ಪಟ್ಟಣ ಶೆಟ್ಟಿ ಮಾತನಾಡಿ, 1992ರಲ್ಲಿ ಮೂಡುಬಿದಿರೆಯಲ್ಲಿ ಆರಂಭವಾದ ಆಳ್ವಾಸ್ ವಿದ್ಯಾಸಂಸ್ಥೆ ಇಂದು ರಾಜ್ಯಾಧ್ಯಂತ ನಂ.1ಸ್ಥಾನದಲ್ಲಿದೆ. ಮೋಹನ್ ಆಳ್ವಾ ಅವರು ಓದಲು ಅಸಕ್ತರಿರುವ ಬಡಮಕ್ಕಳಿಗಾಗಿ ಉಚಿತ ವಿದ್ಯಾಭ್ಯಾಸ ನೀಡಲು 40ಕೋಟಿ ಹಣವನ್ನು ಮೀಸಲಿರಿಸಿದ್ದಾರೆ. ಶಾಲಾ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ಆಳ್ವಾಸ್ ನುಡಿಸಿರಿಯಂತಹ ಒಳ್ಳೆಯ ಗುಣ ಮಟ್ಟದ ಕಾರ್ಯಕ್ರಮವನ್ನು ಕೊಡುತ್ತಾ ಬಂದಿರುವ ಇವರಿಗೆ ಹೆಚ್ಚಿನ ಪ್ರೋತ್ಸಹ ನೀಡಿ ಅವರನ್ನು ಇನ್ನಷ್ಟು ಬೆಳೆಸಬೇಕಾಗಿದೆ ಎಂದರು.
ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಕಾರ್ಯಧ್ಯಕ್ಷ ಡಾ||ಹೆಚ್.ಎನ್.ಪಿ.ವಿಠಲ್ ಮಾತನಾಡಿ, ರಾಜ್ಯದಲ್ಲಿನ ವಿದ್ಯಾಸಂಸ್ಥೆಗಳು ಮೋಹನ್ ಆಳ್ವಾರವರನ್ನು ನೋಡಿ ಕಲಿಯಬೇಕಾಗಿರುವುದು ಬಹಳಷ್ಟಿದೆ. ಸಮಾಜ ಮತ್ತು ರಾಷ್ಟ್ರ ನಿಮರ್ಾಣಕ್ಕಾಗಿ ಅನುಕೂಲವಾಗುವಂತಹ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ. ತಮ್ಮ ಸಂಸ್ಕೃತಿ ಕಲೆಯನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಿರುವುದು ಶ್ಲಾಘನೀಯ. ಆದರೆ, ಅವರು ಸಹ ಬಯಲಾಟ, ತೊಗಲು ಬೊಂಬೆಯಾಟ, ದೊಡ್ಡಾಟದಂತಹ ಈ ಭಾಗದ ಸಾಂಸ್ಕೃತಿಕ ಕಲೆಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಲಿ ಎಂದರು.
ಈ ವೇಳೆ ಹಂಪಿ ವಿಶ್ವವಿದ್ಯಾನಿಲಯದ ಕುಲಪತಿಯಾದ ಮಲ್ಲಿಕಾಘಂಟಿಯವರನ್ನು ಸನ್ಮಾನಿಸಲಾಯಿತು. ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಈ ಸಂದರ್ಭಲ್ಲಿ ಗ್ರೀನ್ ಹೆಚ್.ಬಿ.ಹೆಚ್.ನ ಸದಸ್ಯರಾದ ಕೋರ್ಗಲ್ ಗಿರಿರಾಜ, ಆನಂದಬಾಬು, ಇಟ್ಟಿಗಿ ವಿಜಯಕುಮಾರ್, ಜೆಸಿ ಅಧ್ಯಕ್ಷ ಅಶೋಕ ಉಪ್ಪಾರ್, ಕುಮಾರ್ ಪಾಲ್, ಕೇಶವರೆಡ್ಡಿ, ಡಾ||ಬಂಡ್ರಿ ವಿಶ್ವನಾಥ, ಹಾಲ್ದಾಳ್ ವಿಜಯಕುಮಾರ್, ಭದ್ರವಾಡಿ ಚಂದ್ರಶೇಖರ್, ನರಪತ್, ವಾಹಿದ್, ಬಿ.ಎಸ್.ಸುಭಾಷ್, ಬಾವಿ ಶಶಿಧರ, ಸಂಚಿ ಶಿವಕುಮಾರ್ ಮತ್ತಿತರರು ಇದ್ದರು.