ಸಕರ್ಾರವು ಸಕ್ಕರೆ ಕಾಖರ್ಾನೆ ಮಾಲೀಕರು ಕೈಗೊಂಬೆಯಾಗಿದೆ: ಅಂಗಡಿ

ಲೋಕದರ್ಶನ ವರದಿ

ಗುಲರ್ಾಪೂರ 17: ಸಕರ್ಾರವು ನಿಗದಿಪಡಿಸಿದ ಎಫ್.ಆರ್.ಪಿ.ಯಲ್ಲಿ ರೈತರಿಗೆ ಮೋಸವಾಗಿದ್ದು ರೈತರು ಕಬ್ಬು ಕಟಾವು ಟ್ರ್ಯಾಕ್ಟರ ಬಾಡಿಗೆ ರೈತರಿಗೆ ಹೊರಿಸುವ ಮೂಲಕ ಸಕರ್ಾರವು ರೈತ ವಿರೋಧಿ ದೋರಣೆ ಅನುಸರಿಸುತ್ತಿದ್ದು, ರೈತರ ಜಮೀನಿನಿಂದಲೇ ಎಫ್.ಆರ್.ಪಿ. ದರ ನಿಗದಿಯಾಗಬೇಕು ಎಂದು ರೈತ ಸಂಘದ ಜಿಲ್ಲಾ ಕಾರ್ಯದಶರ್ಿ ಶ್ರೀಶೈಲ ಅಂಗಡಿ ಹೇಳಿದರು. 

ಅವರು ದಿ.16ರಂದು ಗುಲರ್ಾಪೂರ ಕ್ರಾಸದಲ್ಲಿ ರೈತ ಸಂಘ ಹಮ್ಮಿಕೊಂಡ ರಸ್ತೆ ಬಂದ್ ಪ್ರತಿಭಟಣೆಯಲ್ಲಿ ಮಾತನಾಡುತ್ತಾ ಈ ಮೊದಲು 9.5 ರಿಕವರಿಯನ್ನು ಕೇಂದ್ರ ಸಕರ್ಾರವು 10 ರಿಕವರಿ ಏರಿಸುವುದರಿಂದ ರೈತರಿಗೆ ಪ್ರತಿ ಟನ್ಗೆ 137 ರೂಪಾಯಿ ಮೋಸವಾಗುತ್ತಿದೆ. ಜಿಲ್ಲಾ ಆಡಳಿತವು ರೈತರ ಪಾಲಿಗೆ ನಿಜರ್ಿವವಾಗಿದೆ. ಕಬ್ಬು ಎಂದರೇನು? ರಿಕವರಿ ಎಂದರೇನು? ಯಾವುದು ಗೋತ್ತಿಲ್ಲದ ಜಿಲ್ಲಾಧಿಕಾರಿಯನ್ನು ಕೂಡಲೇ ವಗರ್ಾವಣೆ ಮಾಡಬೇಕು. 

ಎಲ್ಲ ಸಕ್ಕರೆ ಕಾಖರ್ಾನೆ ಮಾಲೀಕರು ರಾಜಕಾರಣಿಯಾಗಿರುವುದರಿಂದ ಸಕರ್ಾರವು ಅವರ ಕೈಗೊಂಬೆಯಾಗಿದೆ. ಇನ್ನು ಅನೇಕ ರೀತಿಯಿಂದ ರೈತರಿಗೆ ಮೋಸವಾಗುತ್ತಿದ್ದು, ಈ ಲೋಪವನ್ನು ಸರಿಪಡಿಸಲು ಮುಖ್ಯಮಂತ್ರಿಯವರು ಮದ್ಯಪ್ರವೇಶಿಸಿ ರೈತರ ಕಷ್ಟವನ್ನು ಮನಗಂಡು ಎಪ್.ಆರ್.ಪಿ. ದರ ಪುನರ ಪರಿಶೀಲಿಸಬೇಕು. ರೈತರ ಕಷ್ಟಗಳಿಗೆ ಸಂಧಿಸದೇ ಇದ್ದರೇ, ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನವನ್ನು,  ಬಹಿಷ್ಕರಿಸಿ ಉಗ್ರ ಹೋರಾಟ ಮಾಡಲಾಗುವುದು. ಮುಖ್ಯಮಂತ್ರಿಗಳೇ ಬೆಂಗಳೂರು, ಮೈಸೂರ, ಮಂಡ್ಯ, ರಾಮನಗರಕ್ಕೆ ಮಾತ್ರ ನೀವು ಮುಖ್ಯಮಂತ್ರಿಗಳಲ್ಲ ಇಡೀ ರಾಜ್ಯಕ್ಕೆ ನೀವು ಮುಖ್ಯಮಂತ್ರಿಗಳು ಉತ್ತರ ಕನರ್ಾಟಕಕ್ಕೂ ಗಮನಹರಿಸಿರಿ ಎಂದು ಹೇಳಿದರು. 

ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸಕರ್ಾರ ವಿರುದ್ಧ ಘೋಷಣೆ ಕೂಗಿ ಟೈರಿಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು. ಸುಮಾರು 10 ಗಂಟೆಯಿಂದ 2 ಗಂಟೆಯವರೆಗೆ ರಸ್ತೆ ತಡೆ ನಡೆಸಲಾಯಿತು. ಪ್ರಯಾಣಿಕರು ಪರದಾಡುವಂತ್ತಾಗಿತ್ತು. 

ಎ.ಎಸ್.ಆಯ್. ಆಯ್.ಬಿ. ಮುಚಕಂಡಿ ಹಿರೇಮಠ ನೇತೃತ್ವದಲ್ಲಿ ಮೂಡಲಗಿ ಪೋಲಿಸರು ಬಂದೂಬಸ್ತ ವ್ಯವಸ್ಥೆ ಕಲ್ಪಿಸಿದರು. 

ಈ ಸಂದರ್ಭದಲ್ಲಿ ಮೂಡಲಗಿ ತಾಲೂಕಾ ಅಧ್ಯಕ್ಷ ಈರಣ್ಣಾ  ಸಸಾಲಟ್ಟಿ, ಕಲ್ಲನಗೌಡ ಪಾಟೀಲ, ಗಿರಿಮಲ್ಲ ಕಲಾರ, ಪ್ರವೀಣ ಮುಚಕಂಡಿ, ಪದ್ಮಣ್ಣ ಉಂದ್ರಿ ತಮ್ಮಣ್ಣಾ ನಾಯ್ಕ, ಪ್ರಕಾಶ ಮೂಡಲಗಿ, ಬಾಬು ಅಂಗಡಿ, ವಿವೇಕ ಸನದಿ, ಅಶೋಕ ಶೇಗುಣಶಿ, ಈರಣ್ಣ ಕೊಣ್ಣೂರ, ಲಕ್ಕಪ್ಪ ಧರ್ಮಟ್ಟಿ, ಲಕ್ಕಪ್ಪ ಕಣದಾಳೆ, ರಾಮಣ್ಣಾ ನೇಮಗೌಡ್ರ, ಮುದಕ ಹಳ್ಳೂರ, ರೇವಪ್ಪಾ ಗಾಣಿಗೇರ ಉಪಸ್ಥಿತರಿದ್ದರು.