ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸಲು ಸಂತೆ ಮೇಳ ಕಾರ್ಯಕ್ರಮ ಸಹಕಾರಿ: ಕಂದಾರಿ

ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸಲು ಸಂತೆ ಮೇಳ ಕಾರ್ಯಕ್ರಮ ಸಹಕಾರಿ: ಕಂದಾರಿ Santa Mela program helps in developing business knowledge in children: Kandari

 ಕೊಪ್ಪಳ 28: ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆಗಳು ಅವರ ಭವಿಷ್ಯ ಉಜ್ವಲಗೊಳ್ಳಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಸಾಮಾಜಿಕ ಜ್ಞಾನ ವ್ಯವಹಾರಿಕ ಜ್ಞಾನ ಅತ್ಯವಶ್ಯಕವಾಗಿದೆ ಈ ದಿಶೆಯಲ್ಲಿ ಶಾಲೆಯಲ್ಲಿ ಏರಿ​‍್ಡಸಿರುವ ಸಂತೆ ಮೇಳ ಕಾರ್ಯಕ್ರಮ ಅತ್ಯಂತ ಸಹಕಾರಿ ಯಾಗಿದೆ ಎಂದು ಸೇವಾ ಭಾರತಿ ವಿದ್ಯಾ ವಿಕಾಸ ಪ್ರಕಲ್ಪ ಸದಸ್ಯರಾದ ಮಹಾಲಕ್ಷ್ಮಿ ಕಂದಾರಿ ಹೇಳಿದರು, ಅವರು ನಗರದ ನಂದೀಶ್ವರ ಶಾಲೆ ಯಲ್ಲಿ ಶನಿವಾರ ಬೆಳಗ್ಗೆ ಶಾಲಾ  ಮಕ್ಕಳಿಂದ ಏರಿ​‍್ಡಸಿದ್ದ ಸಂತೆ ಮೇಳ ಹಾಗೂ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು,

ಮುಂದುವರೆದು ಮಾತನಾಡಿ ಮಕ್ಕಳಿಗೆ ಸಾಮಾಜಿಕ ವ್ಯವಹಾರಿಕ ಬೌದ್ಧಿಕ ವಿಚಾರ, ಜ್ಞಾನ ಬೆಳೆಸಬೇಕಾಗಿದೆ ಅವರು ಉತ್ತಮ ಪ್ರಜೆಗಳಾಗಿ ತಮ್ಮ ತಮ್ಮ ಬದುಕು ಕಟ್ಟಿಕೊಳ್ಳಬೇಕಾಗಿದೆ. ಅದಕ್ಕೆ ಶಿಕ್ಷಕ ರಷ್ಟೇ ಪಾಲಕರ ಜವಾಬ್ದಾರಿ ಕೂಡ ಮಕ್ಕಳ ಮೇಲೆ ಹೆಚ್ಚಾಗಿದೆ, ಮಕ್ಕಳಿಗೆ ಮೊಬೈಲಿಂದ ದೂರ ಉಳಿಸಿ ಅವರಿಗೆ ಇಂತಹ ಉತ್ತಮ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಿದೆ ಎಂದು ಸೇವಾ ಭಾರತಿ ವಿದ್ಯಾ ವಿಕಾಸ ಪ್ರಕಲ್ಪ ಸದಸ್ಯರಾದ ಮಹಾಲಕ್ಷ್ಮಿ ಕಂದಾರಿ ಅಭಿಪ್ರಾಯ ಪಟ್ಟರು.  

ಸಮಾರಂಭದ ಅಧ್ಯಕ್ಷತೆಯನ್ನು ನಂದೀಶ್ವರ ಶಾಲೆಯ ಮುಖ್ಯೋಪಾಧ್ಯರಾದ ಸುರೇಶ್ ಕುಂಬಾರ್ ವಹಿಸಿ ಮಾತನಾಡಿ ನಮ್ಮ ಶಾಲೆಯಲ್ಲಿ ಇಂತಹ ಕಾರ್ಯಕ್ರಮ ಜರುಗಲು ಶಾಲೆಯ ಶಿಕ್ಷಕರ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಪಾಲಕರ ಸಹಕಾರ ದಿಂದ ಇದು ಯಶಸ್ವಿ ಯಾಗಿದೆ ಎಂದರು, ಮುಖ್ಯ ಅತಿಥಿಗಳಾಗಿ ಸಾಹಿತಿ ಪತ್ರಕರ್ತ ಜಿ.ಎಸ್‌. ಗೋನಾಳ ಮಾತನಾಡಿ ಪಾಲಕರು ತಮ್ಮ ಮಕ್ಕಳಿ ಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು,  ಸಾಹಿತಿ ಶ್ರೀನಿವಾಸ್ ಬಡಿಗೇರ್ ಅವರು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು,

ಹಿರಿಯ ಪತ್ರಕರ್ತ ಎಂ ಸಾಧಿಕ ಅಲಿ, ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಶಾಹಿದ್ ಹುಸೇನ್ ತಹಸೀಲ್ದಾರ್ ಮತ್ತು ಕಲಂ ಪಬ್ಲಿಕ್ ಶಾಲೆಯ ಅಧ್ಯಕ್ಷ ಅಲಿಮುದ್ದೀನ್,  ಪತ್ರಕರ್ತರ ಸಂಘದ ಜಿಲ್ಲಾ ಖಜಾಂಚಿ ಫಕೀರ​‍್ಪ ಗೋಟೂರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಸಹ ಶಿಕ್ಷಕಿ ಲಕ್ಷ್ಮಿ ಅವರು ಕಾರ್ಯಕ್ರಮ ನಿರೂಪಿಸಿದರೆ ,ಸಹ ಶಿಕ್ಷಕಿ ಮಹಾದೇವಿ ಯವರು ಆರಂಭದಲ್ಲಿ ಸ್ವಾಗತಿಸಿದರು ಶಾಲಾ ಮಕ್ಕಳಿಂದ ಆರಂಭದಲ್ಲಿ ಪ್ರಾರ್ಥನೆ ಗೀತೆ ಜರುಗಿತು, ಮಕ್ಕಳಿಂದ ಏರಿ​‍್ಡಸಿದ ಸಂತೆ ಮೇಳ ವಿಜ್ಞಾನ ವಸ್ತು ಪ್ರದರ್ಶನ ಸಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿ ಜನಮನ ರಂಜಿಸಿತು.