ಸಂಸ್ಕಾರ ಭಾರತಿ, ಧಾರವಾಡ ಮಹಾನಗರ “ನೃತ್ಯೋತ್ಸವ” ಕಾರ್ಯಕ್ರಮದ ವರದಿ

Sanskara Bharati, Dharwad Mahanagara “Dance Festival” program report

ಸಂಸ್ಕಾರ ಭಾರತಿ, ಧಾರವಾಡ ಮಹಾನಗರ  “ನೃತ್ಯೋತ್ಸವ” ಕಾರ್ಯಕ್ರಮದ ವರದಿ 

ಧಾರವಾಡ 20 : ಸಮಾಜದಲ್ಲಿ ಒಳ್ಳೋಳ್ಳೆಯ ಮಹಾನ್ ಸಾಧಕರನ್ನು ನಾವು ಗಮನಿಸಿದಾಗ, ಅವರು ತಮ್ಮ ಜೀವನದಲ್ಲಿ ಶಿಸ್ತು, ಕಠೀಣ ಪರಿಶ್ರಮ ಗುಣ ಹಾಗೂ ಉತ್ತಮ ಸಂಸ್ಕಾರವನ್ನು ಬಾಲ್ಯದಿಂದಲೇ ಅಳವಡಿಸಿಕೊಂಡಿದ್ದರು.  ಸಂಸ್ಕಾರ ಭಾರತೀಯ ಮುಖ್ಯ ಉದ್ದೇಶವೂ ಕೂಡ ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಉತ್ತಮ ಸಂಸ್ಕಾರದ ಅರಿವನ್ನು ಮೂಡಿಸುವುದರ ಜೊತೆಗೆ ಅವರಲ್ಲಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವುದಾಗಿದೆ ಎಂದು ಸಂಸ್ಕಾರ ಭಾರತೀಯ ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಹೇಳಿದರು.   

ದಿನಾಂಕ: 18.12.2024 ರಂದು ನಗರದ ರಂಗಾಯಣದ ಸಾಂಸ್ಕೃತಿಕ ಸಮುಚ್ಛಯದಲ್ಲಿ ಸಂಸ್ಕಾರ ಭಾರತಿ ಧಾರವಾಡ ಏರಿ​‍್ಡಸಿದ್ದ “ನೃತ್ಯೋತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಮುಂದುವರೆದು ಮಾತನಾಡಿದ ಡಾ.ಶಶಿಧರ ನರೇಂದ್ರ ಅವರು ರಾಷ್ಟ್ರವು ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಬೇಕು.  ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರದ ಅಗತ್ಯತೆ ಇದೆ ಎಂದರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಂತ ವೈದ್ಯ ಡಾ.ವಿಶ್ವನಾಥ ಹಿರೆಮಠ ಮಾತನಾಡಿ ಇಂದು ನಮ್ಮ ಮಕ್ಕಳು ಕಲೆ, ಸಂಗೀತ, ನೃತ್ಯ ಸಾಹಿತ್ಯದಲ್ಲಿ ಅಪ್ರತೀಮ ಸಾಧನೆ ಮಾಡುತ್ತಿದ್ದಾರೆ.  ಅದಕ್ಕೆ ಗುರುಗಳು ಮತ್ತು ಅವರ ಮನೆಯ ಒಳ್ಳೆಯ ಸಂಸ್ಕಾರದ ಫಲವಾಗಿದೆ.  ಇದರಿಂದ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಆಗಲು ಸಾಧ್ಯವಾಗಿದೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಕಾರ ಭಾರತಿ ಅಧ್ಯಕ್ಷೆ ಡಾ.ಸೌಭಾಗ್ಯ ಕುಲಕರ್ಣಿ ಮಾತನಾಡಿ ಸಂಸ್ಕಾರವಿಲ್ಲದೆ ಜೀವನವಿಲ್ಲ, ಇಂದು ಪಾಲಕರಿಗೆ, ಗುರುಗಳಿಗೆ ಹೆಚ್ಚಿನ ಜವಾಬ್ದಾರಿಯಿದ್ದು, ಅವರ ಒಳ್ಳೆಯ ಮಾಗದರ್ಶನ, ಮಕ್ಕಳನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡುತ್ತವೆ.  

ಈ ಕಾರ್ಯಮದಲ್ಲಿ ಧಾರವಾಡದ ಕಥಕ್ ನೃತ್ಯಗಾರ್ತಿ ವಿದೂಷಿ ವಿಜೇತಾ ವೆರ್ಣೇಕರ್, ಜಾನಪದ ವಿ.ವಿ.ಯಿಂದ ಸ್ನಾತಕೋತ್ತರ ಪ್ರದರ್ಶನ ಕಲೆಯಲ್ಲಿ ಬಂಗಾರ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದ ಶಿಲ್ಪಾ ಮೊಕಾಶಿ ಪಾಂಡೆ, 2024ರ ರಾಜ್ಯ ಮಟ್ಟದ ಪುಟ್ಟಶ್ರೀ ಸನ್ಮಾನ ಪುರಸ್ಕೃತರಾದ ಕು. ಅಥರ್ವ ರಾ. ಘಂಟೆಣ್ಣವರ ಇವರನ್ನು ಸನ್ಮಾನಿಸಿಲಾಯಿತು.  

ಕು. ಸಿರಿಗೌರಿ ಎಸ್‌. ಭಲೇರಾವ್, ಕು. ನಿಹಾರಿಕಾ ಬಿ. ನಿಡಗುಂದಿ,  ಕು. ನಿಧಿ ಅ. ಕೋರಿ ಹಾಗೂ ಕು. ಸಾನ್ವಿ ಶ್ರೀಶ ಕುಲಕರ್ಣಿ ಇವರು ಭರತ ನಾಟ್ಯ ಹಾಗೂ ಕಥಕ್ ನೃತ್ಯ ಪ್ರದರ್ಶನ ನೀಡಿದರು.   

ಇತ್ತೀಚೆಗೆ ನಿಧನರಾದ ವೃಕ್ಷ ಮಾತೆ ಪದ್ಮಶ್ರೀ ತುಳಸಿಗೌಡ ಹಾಗೂ ಖ್ಯಾತ ತಬಲಾವಾದಕ ಉಸ್ತಾದ್ ಜಾಕಿರ್ ಹುಸೇನ್ ಇವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.  ಇವರ ಸಾಧನೆಗಳ ಕುರಿತು ಡಾ.ಶಶಿಧರ ನರೇಂದ್ರ ಅವರು ಸಭೆಗೆೆ ತಿಳಿಸಿದರು.  ಪ್ರಧಾನ ಕಾರ್ಯದರ್ಶಿ ಪ್ರಸಾದ ಮಡಿವಾಳರ ವೇದಿಕೆಯಲ್ಲಿ ಉಪಸ್ಥಿತಿರಿದ್ದರು.  

ಸುನಿಲ ಕುಲಕರ್ಣಿ ನಿರೂಪಿಸಿದರು,  ವೈಶಾಲಿ ರಸಾಳ್ಕರ್ ಮತ್ತು ತಂಡ ಧ್ಯೇಯ ಗೀತೆ ಪ್ರಸ್ತುತ ಪಡಿಸಿದರು.  ಡಾ.ಶ್ರೀಧರ ಕುಲಕರ್ಣಿ ಸ್ವಾಗತಿಸಿದರು. ಅಶೋಕ ಕೋರಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಡಾ.ವಿಜಯ ತ್ರಾಸದ, ಅಶೋಕ ಮೊಕಾಸಿ, ಬಿ.ಎಂ.ಶರಭೇಂದ್ರ ಸ್ವಾಮೀಜಿ, ವಿಷಯಾ ಬೇವೂರು, ಸುರೇಶ ಗುದಗನವರ, ಅನಿಲ ಮೊಕಾಶಿ, ಸಂಜಯ ಪಾಂಡೆ, ಡಾ.ಎ.ಎಲ್‌.ದೇಸಾಯಿ, ಆರತಿ ದೇವಶಿಖಾಮಣಿ, ಶಶಿಧರ ಲೋಹಾರ್, ಸದಾಶಿವ ಐಹೊಳೆ, ಡಾ.ರಶ್ಮೀ ಹಿರೇಮಠ, ಡಾ.ಮೋಹನಕುಮಾರ ಥಂಬದ, ಬಸವರಾಜ ನಿಡಗುಂದಿ, ಮಲ್ಲಿಕಾ ಬಿ.ಎನ್‌. ಮುಂತಾದವರು ಉಪಸ್ಥಿತರಿದ್ದರು.