ಸಂಸ್ಕಾರ ಭಾರತಿ, ಧಾರವಾಡ ಭಾರತ ಮಾತಾ ಪೂಜಾ, ಭರತ ಮುನಿ ಜಯಂತಿ ಹಾಗೂ ಡಾ.ದ.ರಾ.ಬೇಂದ್ರೆಯವರ 130ನೇ ಜನ್ಮದಿನಾಚರಣೆ ಕಾರ್ಯಕ್ರಮ
Sanskara Bharati, Dharwad Bharat Mata Puja, Bharat Muni Jayanti and 130th Birthday Celebrations of
ಧಾರವಾಡ 29: ದಿನಾಂಕ: 31.01.2026ರಂದು ಮುಂಜಾನೆ 7.00 ಗಂಟೆಗೆ ಧಾರವಾಡದ ಹೊಸ ಯಲ್ಲಾಪೂರದ ಪೋತ್ನಿಸ್ ಓಣಿಯ ಗುಣಾರಿಯವರ ಮನೆ ವರಕವಿ ಬೇಂದ್ರೆಯವರ ಹುಟ್ಟಿದ ಮನೆಯ ಮುಂಭಾಗದಲ್ಲಿ ಭಾರತ ಮಾತಾ ಪೂಜಾ, ಭರತ ಮುನಿ ಜಯಂತಿ ಹಾಗೂ ಡಾ.ದ.ರಾ.ಬೇಂದ್ರೆಯವರ 130ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಏರಿ್ಡಸಲಾಗಿದೆ.
ಪೂಜ್ಯ ಮಹಾಪೌರರಾದ ಜ್ಯೋತಿ ಪಾಟೀಲ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿ ಚಾಲನೆ ನೀಡುವರು. ಹು-ಧಾ ಮಹಾನಗರ ಪಾಲಿಕೆ ಸಭಾನಾಯಕರಾದ ಈರೇಶ ಅಂಚಟಗೇರಿ, ಮಹಾನಗರ ಪಾಲಿಕೆ ಸದಸ್ಯರಾದ ದೀಪಾ ನೀರಲಕಟ್ಟಿ, ಶಂಕರ ಶೆಳಕೆ, ಮಾಜಿ ಸದಸ್ಯರಾದ ನಿರ್ಮಲಾ ಜವಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಸಂಸ್ಕಾರ ಭಾರತಿ, ಕರ್ನಾಟಕ ಉತ್ತರ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಶಿಧರ ನರೇಂದ್ರ ಆಗಮಿಸುವರು. ಅಧ್ಯಕ್ಷತೆಯನ್ನು ಸಂಸ್ಕಾರ ಭಾರತಿ ಧಾರವಾಡ ಅಧ್ಯಕ್ಷೆ ಡಾ.ಸೌಭಾಗ್ಯ ಕುಲಕರ್ಣಿ ವಹಿಸುವರು.
ರವೀಂದ್ರ ಆಕಳವಾಡಿ, ಡಾ.ಡಿ.ಎಂ.ಹಿರೇಮಠ, ಡಾ.ಕೃಷ್ಣ ಕಟ್ಟಿ, ರವಿ ಯಲಿಗಾರ, ವಿಜಯಾ ಲಿಂಬಣ್ಣ ದೇವರಮಠ, ಉದಯ ಯಂಡಿಗೇರಿ, ರಮೇಶ ನಾಡಗೀರ, ಡಾ.ದೀಪಕ ಆಲೂರ, ಅನಂತ ದೇಶಪಾಂಡೆ, ಜಗದೀಶ ಘಾಣೇಕರ, ಪದ್ಮಾವತಿ ಹುಬ್ಬಳ್ಳಿ, ವಿದುಷಿ ರೋಹಿಣಿ ಇಮಾರತಿ, ಡಾ. ಬಿ.ಎಂ.ಶರಭೇಂದ್ರಸ್ವಾಮಿ, ಪ್ರಕಾಶ ಬಾಳಿಕಾಯಿ, ಡಾ. ಶ್ರೀಧರ ಕುಲಕರ್ಣಿ, ಸಮೀರ ಜೋಶಿ ಮುಂತಾದವರು ಪಾಲ್ಗೊಳ್ಳುವರು ಎಂದು ಸಂಸ್ಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಪ್ರಸಾದ ಮಡಿವಾಳರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 