ಕಲ್ಯಾಣಿ ಮಹಿಳಾ ಮಂಡಳಿ ವತಿಯಿಂದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ
ಹುಬ್ಬಳಿ 19:ಸಂಕ್ರಾಂತಿ ಸಂಭ್ರಮ ಕಲ್ಯಾಣಿ ಮಹಿಳಾ ಮಂಡಳಿ, ಹುಬ್ಬಳ್ಳಿ ವತಿಯಿಂದ ಮಹಿಳಾ ಮಂಡಳಿ ಸದಸ್ಯರೆಲ್ಲ ಕಲ್ಯಾಣ ನಗರ ರಂಗಮಂದಿರದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹಬ್ಬದ ವಿಶೇಷ ತಿನಿಸುಗಳು, ಅಲಂಕಾರ, ರಂಗೋಲಿ ಬಿಡಿಸಿ, ಎಲ್ಲ ಸದಸ್ಯರು ಇಳಕಲ್ ಸೀರೆ ಉಟ್ಟುಕೊಂಡು ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಹಬ್ಬದ ಮಹತ್ವವನ್ನು ಅರಿತು ಆಚರಿಸಿದಾಗಲೇ ಹಬ್ಬದ ಸೊಬಗು ಇನ್ನೂ ಹೆಚ್ಚುತ್ತದೆ ಜೊತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಇದಾಗಿದೆ ಹಾಗೂ ಮಹಿಳಾ ಮಂಡಳಿ ಎಲ್ಲ ಹಬ್ಬಗಳನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಮಂಡಳಿ ಅಧ್ಯಕ್ಷೆ ಸುಪ್ರೀತಾ ಛಬ್ಬಿ ಹೇಳಿದರು.
ಈ ಸಂದರ್ಭದಲ್ಲಿ ದಾಕ್ಷಾಯಿಣಿ ಕೋಳಿವಾಡ, ದೀಪಾ ಭಾವಿಕಟ್ಟಿ, ಲಕ್ಷ್ಮೀ ಬೂದಿಹಾಳ, ಸುಮಾ ಜೋಶಿ, ಜಯಶ್ರೀ ಉಮರಾಣಿ, ಸುನೀತಾ ಬಾಗೇವಾಡಿ, ಪ್ರತಿಮಾ ಕುಲಕರ್ಣಿ, ಜೈ ರಾಮಕೃಷ್ಣ.