ಅಮರ ದುರ್ಗಣ್ಣವರ ಅಧ್ಯಕ್ಷತೆಯ ಹೊಸ ಮಹಿಷವಾಡಗಿ ಪಿಕೆಪಿಎಸ್ ಸಂಘವು ಎಲ್ಲರಿಗೂ ಮಾದರಿಯಾಗಲಿ: ಶಾಸಕ ಲಕ್ಷ್ಮಣ ಸವದಿ

May the PKPS Sangh be a role model for all as the new Mahishawad under the chairmanship of Amara Du

ಅಮರ ದುರ್ಗಣ್ಣವರ ಅಧ್ಯಕ್ಷತೆಯ ಹೊಸ ಮಹಿಷವಾಡಗಿ ಪಿಕೆಪಿಎಸ್ ಸಂಘವು ಎಲ್ಲರಿಗೂ ಮಾದರಿಯಾಗಲಿ: ಶಾಸಕ ಲಕ್ಷ್ಮಣ ಸವದಿ. 

ಅಥಣಿ 19: ಸಹಕಾರಿ  ಸಂಘದ ಸದಸ್ಯರು ಸ್ವಾರ್ಥ ಮನೋಭಾವನೆ ಬಿಟ್ಟು ಸಂಘದ ಏಳಿಗೆಗಾಗಿ ಶ್ರಮಿಸಿದಾಗ ಮಾತ್ರ ಸಂಘ  ಅಭಿವೃದ್ಧಿಯಾಗಲು  ಸಾಧ್ಯ  ಎಂದು ಮಾಜಿ ಡಿಸಿಎಂ, ಶಾಸಕ  ಲಕ್ಷ್ಮಣ ಸವದಿ ಹೇಳಿದರು.   ಅವರು ತಾಲೂಕಿನ ಹೊಸ ಮಹಿಷವಾಡಗಿ ವಿವಿಧೊದ್ದೇಶಗಳ  ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಅಧ್ಯಕ್ಷ ಅಮರ ದುರ್ಗಣ್ಣವರನ್ನು ಒಳಗೊಂಡು ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಸಂಘದ ಪ್ರತಿ ವರ್ಷದ ಲಾಭದ 65 ಲಕ್ಷ ರೂಪಾಯಿ ಹಣವನ್ನು ಮೀಸಲಿಡುವುದರ ಜೊತೆಗೆ ಅನಾವಶ್ಯಕವಾಗಿ ಖರ್ಚು ವೆಚ್ಚ ಮಾಡದೆ ಒಳ್ಳೆಯ ಸುಸಜ್ಜಿತವಾದ ಕಟ್ಟಡ ನಿರ್ಮಿಸಿದ್ದು ಅವರ ಪ್ರಾಮಾಣಿಕತೆ ಎಲ್ಲರಿಗೂ ಮಾದರಿಯಾಗಿದೆ ಎಂದರು.   

ಅತಿ ಕಡಿಮೆ ಅವಧಿಯಲ್ಲಿ ಸಂಘದ ಎಲ್ಲಾ ಆಡಳಿತ ಮಂಡಳಿಯ ಹಾಗೂ ಸದಸ್ಯರ ಪರಿಶ್ರಮದಿಂದ ಈ ಭವ್ಯ ಕಟ್ಟಡ ನಿರ್ಮಾಣವಾಗಲು ಸಾಧ್ಯವಾಗಿದೆ ಎಲ್ಲರೂ ಸಂಘದ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.ಹೊಸ ಮಹಿಷವಾಡಗಿ ವಿವಿದೋಷಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾದ ಅಮರ ದುರ್ಗಣ್ಣವರ ಮಾತನಾಡಿ, ನಾವು ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ತಮ್ಮ ಸ್ವಾರ್ಥ ಮನೋಭಾವನೆಯನ್ನು ಬಿಟ್ಟು ಸಂಘದಿಂದ ಒಂದು ರೂಪಾಯನ್ನು ಹಣವನ್ನು ಅಪೇಕ್ಷೆ ಮಾಡದೆ. ಪ್ರತಿ ವರ್ಷ ಸಂಘಕ್ಕೆ ಆದ ಲಾಭದ ಹಣವನ್ನು ಕ್ರೂಡೀಕರಿಸಿ ಆ ಹಣದಿಂದ ಕಟ್ಟಡ ನಿರ್ಮಿಸಲಾಗಿದೆ.  

ಶಾಸಕ ಲಕ್ಷ್ಮಣ ಸವದಿಯವರ ಮಾರ್ಗದರ್ಶನದಲ್ಲಿ ಸಂಘಕ್ಕೆ ಇನ್ನಷ್ಟು ಹೆಚ್ಚಿನ ಹಣ ತಂದು ಸಂಘದ ಅಭಿವೃದ್ಧಿ ಜೊತೆಗೆ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.ಸಂಕ್ರಟ್ಟಿ ಪಿಕೆಪಿಎಸ್ ಅಧ್ಯಕ್ಷರಾದ ರಾಜುಗೌಡ ನಾಡಗೌಡ ಮಾತನಾಡಿ,2008ರಲ್ಲಿ ಪ್ರಾರಂಭವಾದ ಹೋಸಮಹಿಷವಾಡಗಿ ಸಂಘವು ಎಲ್ಲ ಹಿರಿಯರ ಮಾರ್ಗದರ್ಶನದಿಂದ ಅಮರ ದುರ್ಗಣ್ಣವರ್  ಅಧ್ಯಕ್ಷತೆಯ ಈ ಸಂಘವು ಪ್ರತಿ ವರ್ಷದ ಲಾಭದ ಹಣವನ್ನು ಕ್ರೂಡೀಕರಿಸಿ ಎಲ್ಲಾ ಸದಸ್ಯರ ಡಿವ್ಡೆಂಡ್ ತ್ಯಾಗದಿಂದ ಈ ಭವ್ಯವಾದ ಕಟ್ಟಡ ನಿರ್ಮಿಸಲು ಸಾಧ್ಯವಾಗಿದೆ ಈ ಸೊಸೈಟಿ ಇಡಿ ತಾಲೂಕಿಗೆ ಮಾದರಿಯಾಗಿದೆ ಎಂದರು. 

ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಶ್ರೀಪಾಲ ಹಾರೂಗೇರಿ ಮಾತನಾಡಿ, ಪ್ರವಾಹ ಹಾಗೂ ಕೋರಣ ವರ್ಷದ ಹಾನಿಯನ್ನು ಸರಿದೂಗಿಸಿ ಅಮರ್ ದುರ್ಗಣ್ಣವರ ಅಧ್ಯಕ್ಷತೆಯಲ್ಲಿ ಸಂಘದ ಪ್ರತಿ ವರ್ಷದ ಲಾಭಾಂಶದಲ್ಲಿ 65 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಘದ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಸಂಘದ ಸದುಪಯೋಗ ಎಲ್ಲರೂ ಪಡೆದುಕೊಳ್ಳಿ ಎಂದು ಕರೆ ನೀಡಿದರು.ಇದೇ  ಸಮಯದಲ್ಲಿ ಕಲ್ಲಪ್ಪ ಸಸಾಲಟ್ಟಿ,ಮನೋಹರ ದುರ್ಗಣ್ಣವರ,ಮಹಾವೀರ ದುರ್ಗಣ್ಣವರ ,ಡಾಕ್ಟರ ಸುದರ್ಶನ ದುರ್ಗಣ್ಣವರ, ಲಕ್ಕಪ್ಪ ಶಿರಹಟ್ಟಿ, ಬಾಬಾಸಾಹೇಬ ಪಾಟೀಲ, ,ದುಂಡಪ್ಪ ಆಸ್ಕಿ,ರಂಗ ಜ್ಯೋಶಿ,ರಾಜು ಚೌಗಲಾ,ರಾಜು ಸಿದ್ದಾಂತಿ,ಜಡೇಪ್ಪ ಕುಂಬಾರ,ಡಿ.ಸಿ.ಸಿ ಬ್ಯಾಂಕ ಅಧಿಕಾರಿಗಳು ಶಂಕರ ನಂದೇಶ್ವರ ,ಬಸವರಾಜ ಕಮತಗಿ,ಸುರೇಶ ಬಕಾರಿ,ಹಾಗೂ ಸಂಘದ ಅಧ್ಯಕ್ಷರಾದ ಅಮರ ದುರ್ಗಣ್ಣವರ,ಮಹಾವೀರ ಶಿರಹಟ್ಟಿ,ಬಸಪ್ಪ ಗಾಣೀಗೇರ,ಬಸಪ್ಪ ಸಸಾಲಟ್ಟಿ,ಪ್ರವೀಣ ಮುಗ್ಗನವರ,ಮೌಲಾ ಗಡ್ಡೇಕರ,ಸಂದೇಶ ಮುಗ್ಗನವರ,ಶ್ರೀಮತಿ ನಾಗವೇಣಿ ತೇಲಿ,ಭಾರತಿ ಮುಗ್ಗನವರ,ಸುರೇಖಾ ದಾನೋಳಿ,ಮಹಾದೇವ ತಳವಾರ,ಪಾರೀಸ ಸತ್ಪಾಳೆ ಹಾಗೂ ಸಂಘದ ಸಿಬ್ಬಂದಿಗಳಾದ ಮುತ್ತಪ್ಪ ತೇಲಿ,ರಿಯಾಜ ತಮದಡ್ಡಿ, ಹಾಗೂ ರೈತರು ಮುಖಂಡರು ಅನೇಕರು ಉಪಸ್ಥಿತರಿದ್ದರು.