ನೈರ್ಮಲ್ಯ, ಶೌಚಾಲಯ ಬಳಕೆಗೆ ಸಂಕಲ್ಪ ಮಾಡಿ: ಶಾಸಕ ಅಮೃತ ದೇಸಾಯಿ


ಧಾರವಾಡ 20: ಪ್ರತಿ ಮನೆಗೆ ಶೌಚಾಲಯಗಳನ್ನು ನಿಮರ್ಿಸಲು ಮತ್ತು ಗ್ರಾಮಗಳನ್ನು ಬಯಲು ಬಹಿದರ್ೆಸೆ ಮುಕ್ತಗೊಳಿಸಲು ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಧನ ಸಹಾಯ, ಪ್ರೋತ್ಸಾಹ, ಪ್ರಶಸ್ತಿ ಗೌರವಗಳನ್ನು ನೀಡುವ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಇವು ಪರಿಪೂರ್ಣವಾಗಬೇಕಾದರೆ ಪ್ರತಿಯೊಬ್ಬರು ತಮ್ಮ ಸುತ್ತಲಿನ ಪರಿಸರದಲ್ಲಿ ನೈರ್ಮಲ್ಯ ಕಾಪಾಡುವ ಹಾಗೂ ಶೌಚಾಲಯಗಳನ್ನು ಬಳಕೆ ಮಾಡುವ ಸಂಕಲ್ಪ ಮಾಡಬೇಕೆಂದು ಶಾಸಕ ಅಮೃತ ದೇಸಾಯಿ ಹೇಳಿದರು.

ಅವರು ಇಂದು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ನಿಮಿತ್ಯ ಜಿಲ್ಲಾ ಪಾಂಚಾಯತ ಆಯೋಜಿಸಿದ್ದ ಶ್ರಮದಾನ ಹಾಗೂ ಸಮುದಾಯ ಶೌಚಾಲಯದ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಶೌಚಾಲಯಗಳ ನಿಮರ್ಾಣ ಕಾರ್ಯ ಎಲ್ಲ ಕಡೆ ಭರದಿಂದ ನಡೆದಿದೆ. ಆದರೆ ಕಟ್ಟಿದ ಶೌಚಾಲಯಗಳನ್ನು ಸಮರ್ಪಕವಾಗಿ ಬಳಸದೆ ಎಲ್ಲ ಗ್ರಾಮಗಳಲ್ಲಿ ಅನೈರ್ಮಲ್ಯದ ವಾತಾವರಣವನ್ನು ಉಂಟುಮಾಡುತ್ತಿದ್ದಾರೆ. ಸಾರ್ವಜನಿಕರಲ್ಲಿ ಶೌಚಾಲಯ ಬಳಕೆಯ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಿದೆ. ಕಟ್ಟಿದ ಶೌಚಾಲಯಗಳನ್ನು ಬಳಸುವಂತೆ ವಿದ್ಯಾಥರ್ಿಗಳು ಸಹ ಪಾಲಕರ ಮನ ಪರಿವರ್ತನೆ ಮಾಡಬೇಕೆಂದು ಶಾಸಕರು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಶೌಚಾಲಯ ಬಳಕೆ ಇಂದ  ಉತ್ತಮ ಪರಿಸರ ಮತ್ತು ಆರೋಗ್ಯವನ್ನು ಕಾಪಾಡಬಹುದು. ಯುವಸಮೂಹ ಮತ್ತು ವಿದ್ಯಾಥರ್ಿಗಳು ತಮ್ಮ ಕುಟುಂಬದ ಪ್ರತಿಯೊಬ್ಬರು ಕಡ್ಡಾಯವಾಗಿ ಶೌಚಕ್ಕೆ ಶೌಚಾಲಯಗಳನ್ನೇ ಬಳಸುವಂತೆ ಜಾಗೃತಿ ವಹಿಸಬೇಕು ಎಂದು ಹೇಳಿ, ಗ್ರಾಮಸ್ಥರಿಗೆ ವಿಶ್ವ ಶೌಚಾಲಯ ದಿನದ ಪ್ರತಿಜ್ಞಾ ವಿಧಿ ಭೋದಿಸಿದರು.

ಕಾರ್ಯಕ್ರಮದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ವಿದ್ಯಾಥರ್ಿಗಳಿಗೆ ಆಯೋಜಿಸಿದ್ದ ಪ್ರಬಂಧ, ರಂಗೋಲಿ ಮತ್ತು ಭಾಷಣ ಸ್ಪಧರ್ೆಗಳಲ್ಲಿ ವಿಜೆತರಾದ ವಿದ್ಯಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಶಾಸಕ ಅಮೃತ ದೇಸಾಯಿ ಅವರು ಗುರು ಮಡಿವಾಳೇಶ್ವರ ಮಠದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮತ್ತು ಸಮೂದಾಯ ಶೌಚಾಲಯ ನಿಮರ್ಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷ ಯಲ್ಲಪ್ಪ ಬೋರಿಮನಿ ಅವರು ವೈಯಕ್ತಿಕ ಯೋಜನೆಯಡಿ ಫಲಾನುಭವಿ ಶ್ರೀಮತಿ ನೀಲವ್ವಾ  ಕುಂಬಾರ ಅವರು ನಿಮರ್ಿಸಿಕೊಂಡಿರುವ ಶೌಚಾಲಯವನ್ನು ಉದ್ಘಾಟಿಸಿದರು. ಮತ್ತು ಶೌಚಾಲಯ ಬಳಕೆಯ ಜಾಗೃತಿ ಕುರಿತು ಮಾಹಿತಿಯುಳ್ಳ ಸ್ಟಿಕರ್ಗಳನ್ನು ಮನೆ ಮನೆಗೆ ಅಂಟಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಡಿವಾಳೇಶ್ವರ ಮಠದ ವಿರೇಶ ಪೂಜ್ಯರು ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯತ ಅಧ್ಯಕ್ಷ ಯಲ್ಲಪ್ಪ ಬೋರಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ ಸದಸ್ಯ ರತ್ನಾ ಪಾಟೀಲ, ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಬಸವರಾಜ ವರವಟ್ಟಿ, ಗ್ರಾಮ ಪಂಚಾಯತ ಸದಸ್ಯ ಪಾರ್ವತಿ ಉಳವನ್ನವರ, ಜಿಲ್ಲಾ ಪಂಚಾಯತ ಡಿ.ಆರ್.ಡಿ.ಎ ಯೋಜನಾ ನಿದರ್ೇಶಕ ಗೀರಿಶ ಕೋರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ತಾಲ್ಲೂಕಾ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಎಸ್.ಎಸ್.ಕಾದರೊಳ್ಳಿ ಸ್ವಾಗತಿಸಿ, ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿದರ್ೇಶಕ ಪ್ರಶಾಂತ ತುರಕಾಣೆ ವಂದಿಸಿದರು.