ಲೋಕದರ್ಶನ ವರದಿ
ಬೈಲಹೊಂಗಲ 12: ಸಂಗೊಳ್ಳಿ ಗ್ರಾಮದ ಸಕರ್ಾರಿ ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಗೊಳ್ಳಿ ರಾಯಣ್ಣ ಉತ್ಸವ 2020 ಅಂಗವಾಗಿ ಭಾನುವಾರ ಆಕರ್ಷಕ ವಸ್ತು ಪ್ರದರ್ಶನ ನಡೆಯಿತು.
ಒಂದೇ ಸೂರಿನಡಿ ಹಲವಾರು ಬಗೆ, ಬಗೆಯ ಅಲಂಕಾರಿಕ ವಸ್ತುಗಳು, ಸೀರೆಗಳು, ತಿಂಡಿ ತಿನಿಸುಗಳು, ಯುವತಿಯರಿಗಾಗಿ ಕಿವಿಯೋಲೆ, ಆರೋಗ್ಯದ ರಕ್ಷಣೆಗೂ ಒಂದಿಷ್ಟು ಔಷಧಿಗಳು ಮಾರಾಟ ಮಳಿಗೆಯಲ್ಲಿ ಪ್ರದರ್ಶನಗೊಂಡವು.
ವಾತರ್ಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಸ್ತು ಪ್ರದರ್ಶನ ಮಾರಾಟ ಮಳಿಗೆ, ರಾಷ್ಟ್ರೀಯ ಪಲ್ಸ್ ಪೊಲಿಯೋ, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ಕನರ್ಾಟಕ ಕೃಷಿ ವಾಣಿಜ್ಯ ಮಂಡಳ, ದಾನೇಶ್ವರಿ ಸ್ತ್ರೀ ಶಕ್ತಿ ಸಂಘ ದೊಡವಾಡ, ವಿವಿಧ ಇಲಾಖೆಯಿಂದ ದೊರೆಯುವ ಸಕರ್ಾರದ ಮಾಹಿತಿ ಒದಗಿಸುವ ಮಳಿಗೆ, ಸಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ರಾಷ್ಟ್ರೀಯ ಫಲ್ಸ್ ಫೋಲಿಯೋ ಲಸಿಕಾ ಕಾರ್ಯಕ್ರಮ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳು ಜನರನ್ನು ಸೆಳೆಯಿತು. ಗ್ರಾಮೀಣ ಸಂಸ್ಕೃತಿ ಅನಾವರಣಗೊಂಡಿತಲ್ಲದೆ ರಿಯಾಯತಿ ದರದಲ್ಲಿ ಹಲವು ವಸ್ತುಗಳು ಮಾರಾಟಗೊಂಡವು.
ಶಾಸಕ ಮಹಾಂತೇಶ ಕೌಜಲಗಿ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ ವಿದ್ಯಾವತಿ ಭಜಂತ್ರಿ ಮಳಿಗೆ ಉದ್ಘಾಟಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಶ್ವೇತಾ ಹೊಸಮನಿ, ತಾಪಂ.ಇಓ ಸಮೀರ ಮುಲ್ಲಾ, ಸಿಡಿಪಿಓ ಮಹಾಂತೇಶ ಭಜಂತ್ರಿ, ಸಮಾಜ ಕಲ್ಯಾಣಾಧಿಕಾರಿ ಮಹೇಶ ಉಣ್ಣಿ, ವೈದ್ಯಾಧಿಕಾರಿ ಡಾ. ಎಸ್.ಎಸ್. ಸಿದ್ದನ್ನವರ, ಡಾ.ಭಾರತಿ ಹುಡೇದ, ಸುಷ್ಮಾ ಬಾಳಿಮಟ್ಟಿ, ತಾಪಂ.ಅಧ್ಯಕ್ಷೆ ನೀಲವ್ವ ಫಕೀರನ್ನವರ, ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವಾ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ, ಪಿಡಿಒ ಮಮತಾಜ ಛಬ್ಬಿ, ಬಸವರಾಜ ಕಮತ, ಮಲ್ಲಿಕಾಜರ್ುನ ಕೊಡೊಳ್ಳಿ, ಉಮೇಶ ಲಾಳ, ಅರುಣ ಯಲಿಗಾರ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಮಹಿಳಾ ಸ್ತ್ರೀ ಶಕ್ತಿ ಸಂಘಗಳು ಇದ್ದರು.