ನ್ಯಾಸರ್ಗಿ ಗ್ರಾಮದಲ್ಲಿ ರಾತ್ರೋರಾತ್ರಿ ಶ್ರೀಗಂಧ ಮರ ಕಳ್ಳತನ
ಮುಂಡಗೋಡ 26: ತಾಲೂಕಿನಲ್ಲಿ ಶ್ರೀಗಂಧ ಮರಗಳ್ಳರು ಹಾವಳಿ ಹೆಚ್ಚಾಗಿದೆ. ನ್ಯಾಸರ್ಗಿ ಗ್ರಾಮದಲ್ಲಿ ಶುಕ್ರವಾರ ರಾತ್ರೋರಾತ್ರಿ ಲಕ್ಷಾಂತರ ಬೆಲೆಬಾಳುವ ಶ್ರೀಗಂಧದ ಮರವನ್ನು ಕಡಿದುಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದ ಪಿ.ಎಸ್.ಸದಾನಂದ ಪಕ್ಕದ ಮನೆಯಹಿಂದೆ ಇದ್ದ ಶ್ರೀಗಂಧದ ಮರವನ್ನು ಶುಕ್ರವಾರ ರಾತ್ರೋರಾತ್ರಿ ಯಂತ್ರದಿಂದ ಕತ್ತರಿಸಿಕೊಂಡು ಹೋಗಿದ್ದಾರೆ. ಆದರೆ ಮಧ್ಯ ಭಾಗದ ಗಂಧದ ತುಂಡು ಮಾತ್ರ ಸಾಗಿಸಲಾಗಿದ್ದು ಟೊಂಗೆಗಳನ್ನು ಸ್ಥಳದಲ್ಲಿಯೇ ಬಿಸಾಡಲಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿ ಕಾರಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮರಗಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ತಾಲೂಕಿನಲ್ಲಿ ಪದೇ ಪದೆ ಶ್ರೀಗಂಧ ಮರಕಳ್ಳರ ಹಾವಳಿ ಹೆಚ್ಚಿದ್ದು ಸಾರ್ವಜನಿರಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.