ಮಾದರಿ ಗ್ರಾ.ಪಂ. ಮಾಡಲು ಎಲ್ಲರೂ ಅಗತ್ಯ ಸಹಕಾರ ನೀಡಿ: ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶರಣಯ್ಯ

ಕೊಪ್ಪಳ 12: ಕೊಪ್ಪಳ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತ್ಗಳನ್ನು ಮಾದರಿ ಗ್ರಾಮ ಪಂಚಾಯತ್ಗಳನ್ನಾಗಿ ಮಾಡಲು ಎಲ್ಲರೂ ಅಗತ್ಯ ಸಹಕಾರ ನೀಡಬೇಕಾಗಿದೆ ಎಂದು ಕೊಪ್ಪಳ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶರಣಯ್ಯ ಶಸಿಮಠ ಹೇಳಿದರು.

ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆ ಹಾಗೂ ಯುನಿಸೇಪ್ ಕೊಪ್ಪಳ ತಾಲೂಕಿನ ಆಯ್ದ ಗ್ರಾಮ ಪಂಚಾಯತ್ಗಳನ್ನು ಮಾದರಿ ಗ್ರಾಮ ಪಂಚಾಯತ್ಗಳನ್ನಾಗಿ ಮಾಡಬೇಕಾಗಿದ್ದು, ಉದ್ದೇಶದಿಂದ ಬುಧುವಾರದಂದು ರಂದು ಕೊಪ್ಪಳ ತಾಲೂಕು ಪಂಚಾಯತ್ನ ಸಭಾಂಗಣದಲ್ಲಿ  ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರು, ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು, ಸ್ವಚ್ಛಾಗ್ರಹಿಗಳು ಹಾಗೂ ಎಸ್.ಹೆಚ್.ಜಿ ಪ್ರತಿನಿಧಿಗಳು ಹಾಗೂ ಆಶಾ, ಅಂಗನವಾಡಿ ಕಾರ್ಯಕತರ್ೆಯರಿಗೆ  ಮಾದರಿ ಗ್ರಾಮ ಪಂಚಾಯತ್ಗಳ ತಳಮಟ್ಟದ ಕಾರ್ಯಕರ್ತರಿಗೆ ಮತ್ತು ಸಮಿತಿಗಳ ಸಾಮಥ್ರ್ಯ ಅಭಿವೃದ್ಧಿ ಕುರಿತು ತಾಲೂಕು ಮಟ್ಟದ ಒಂದು ದಿನದ ತರಬೇತಿ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿದರು.

ಮಾದರಿ ಗ್ರಾಮ ಪಂಚಾಯತಿಯ ಅನುಷ್ಠಾನ ಮಾಡುವಲ್ಲಿ ಪ್ರಮುಖ ಅಂಶಗಳಾದ ಎಲ್ಲರೂ ಕಡ್ಡಾಯವಾಗಿ ಶೌಚಾಲಯಗಳನ್ನು ಹೊಂದಿರಬೇಕು ಹಾಗೂ ಅವುಗಳನ್ನು ಬಳಕೆ ಮತ್ತು ನಿರ್ವಹಣೆ ಮಾಡಬೇಕು ಮತ್ತು ಬಯಲು ಬಹಿದರ್ೆಸೆಗೆ ಹೋಗದಂತೆ ಮಾಡುವುದು, ಪ್ಲಾಸ್ಟಿಕ್  ಮುಕ್ತ, ಸುಸ್ಥಿರತೆಯನ್ನು ಕಾಪಾಡಿಕೊಳ್ಳುವಂತೆ ತಿಳಿಸಿ ಗ್ರಾಮ ಪಂಚಾಯತಿಯ ಉಪಸಮಿತಿಯ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ಹಾಗೂ ಮಾದರಿ ಗ್ರಾಮ ಪಂಚಾಯತ್ಗಳನ್ನಾಗಿ ಮಾಡಲು ಎಲ್ಲರೂ ಅಗತ್ಯ ಸಹಕಾರ ನೀಡುವಂತೆ ಎಂದು ಕೊಪ್ಪಳ ತಾಲೂಕು ಪಂಚಾಯತ್ ಸಹಾಯಕ ನಿದರ್ೇಶಕ ಶರಣಯ್ಯ ಶಸಿಮಠ ಹೇಳಿದರು.  

ಯುನಿಸೇಫ್ ನ ತಾಲೂಕು ಸಂಯೋಜಕರಾದ ಬಸವರಾಜ ಸೂಡಿ ಮಾತನಾಡಿ ಮಾದರಿ ಗ್ರಾಮ ಪಂಚಾಯತ್ಗಳ ಪರಿಕಲ್ಪನೆಯಡಿಲ್ಲಿ ನಮ್ಮ ಕೊಪ್ಪಳ ತಾಲೂಕಿಗೆ 5 ಗ್ರಾಮ ಪಂಚಾಯತ್ಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸಂಬಂಧಿಸಿದ ಗ್ರಾಮ ಪಂಚಾಯತ್ಗಳ ಅಡಿಯಲ್ಲಿ ಬರುವ ಗ್ರಾಮಗಳಲ್ಲಿ ಮಾದರಿ ಗ್ರಾಮಗಳನ್ನಾಗಿ ಮಾಡಲು ಪರಿಣಾಮಾಕಾರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಶಿಭಿರಾಥರ್ಿಗಳಿಗೆ ಹೇಳಿದರು. ಹಾಗೂ ಶಿಕ್ಷಣ ಸಂಸ್ಥೆಗಳಾದ ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಸಕರ್ಾರಿ ಆಸ್ಪತರ್ೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೌಚಾಲಯಗಳ ಬಳಕೆ ಮತ್ತು ನಿರ್ವಹಣೆ ಹೊಂದಿರಬೇಕು ಹಾಗೂ ಶಾಲೆಗಳಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಋತುಚಕ್ರ ನಿರ್ವಹಣೆಗೆ ಪ್ರತ್ಯೇಕ ಕೊಠಡಿ ಮತ್ತು ಸಾಮಗ್ರಿಗಳನ್ನು ಹೊಂದಿರುವಂತೆ ನೋಡಿಕೊಳ್ಳಬೇಕು ಎಂದರು.  

ಮುಖ್ಯ ಅಥಿತಿಗಳಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕರಾದ ರಾಮಣ್ಣ ಬಂಡಿಹಾಳ, ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಆರೋಗ್ಯ ಇಲಾಖೆ ಗಂಗಮ್ಮ, ಕಾಯರ್ಾಗಾರದಲ್ಲಿ ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಹನುಮಂತಪ್ಪ ಹೆಚ್ ಹಾಗೂ ಸಹಾಯಕ ನಿದರ್ೇಶಕರು ಎನ್.ಆರ್.ಇ.ಜಿ.ಎ, ಮಾನವ ಸಂಪನ್ಮೂಲ  ಸಮಾಲೋಚಕರು, ಯುನಿಸೆಫ್ ಸಂಯೋಜಕರು ಉಪಸ್ಥಿತರಿದ್ದರು.