ಹುತಾತ್ಮ ಯೋಧರಿಗೆ ನುಡಿ ನಮನ
ತಾಳಿಕೋಟಿ 14: ಪಾಕಿಸ್ತಾನ ಮಾರುವೇಶದಲ್ಲಿ ಭಾರತಕ್ಕೆ ನುಸುಳಿದಾಗ ಸುಮಾರು 40 ಯೋಧರು ತಮ್ಮ ಪ್ರಾಣವನ್ನು ಈ ದೇಶಕ್ಕೆ ತ್ಯಾಗ ಮಾಡಿದ ಈ ದಿನವನ್ನು ಹುತಾತ್ಮರಿಗೆ ಅರ್ಿಸೋಣ ಎಂದು ಮಾಜಿ ಯೋಧ ಮಲ್ಲಿಕಾರ್ಜುನ ಬಡಿಗೇರ ಹೇಳಿದರು.
ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸ್ಸಿ ಘಟಕದ ಅಡಿಯಲ್ಲಿ ಹುತಾತ್ಮರ ಸವಿ ನೆನಪಿಗಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ದೇಶಾಭಿಮಾನ. ತ್ಯಾಗ ಬಲಿದಾನ ಗುಣ ಬೆಳೆಸಿದಾಗ ಮಾತ್ರ ವಿದ್ಯಾರ್ಥಿಗಳು ನಮ್ಮ ದೇಶಕ್ಕಾಗಿ ತಮ್ಮ ಪ್ರಾಣ ಅರ್ಿಸಲು ಸಿದ್ದರಾಗುತ್ತಾರೆಂದು ಹೇಳಿದರು. ವೀರಶೈವ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ಹಾಗೂ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಚೇರ್ಮನ್ ಕಾಶಿನಾಥ ಎಸ್. ಮುರಾಳ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಧರ ಕುರಿತು ಮಾತನಾಡಿದರು.
ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ. ಬಂಟನೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಯೋಧರ ಬೆವರಿನ ಹನಿಯಿಂದ ನಾವು ನೆಮ್ಮದಿಯಿಂದ ಭಾರತ ದೇಶದಲ್ಲಿ ಬದುಕು ಸಾಗಿಸುತ್ತಿದೇವಿ. ನಮ್ಮ ಮಕ್ಕಳಿಗೆ ದೇಶಾಭಿಮಾನ ರಾಷ್ಟ್ರಾಭಿಮಾನ ತ್ಯಾಗ ಬಲಿದಾನದ ಗುಣ ಬೆಳೆಸಿ. ನಮ್ಮನ್ನು ರಕ್ಷಿಸುವ ಯೋಧರಿಗೂ ಮತ್ತು ಪೊಲೀಸ ಸಿಬ್ಬಂದಿಗಳಿಗೆ ಗೌರವ ಸಲ್ಲಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಅಂದಾಗ ಮಾತ್ರ ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಮುಗಿಲೆತ್ತರಿಕೆ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದರು. ಪ್ರಶಿಕ್ಷಣಾರ್ಥಿ ಶ್ವೇತಾ ಸಂಗಡಿಗರಿಂದ ದೇಶಭಕ್ತಿ ಗೀತೆ ಮೊಳಗಿತು. ಭಾಗ್ಯಶ್ರೀ ಬಿರಾದಾರ ಸ್ವಾಗತಿಸಿದರು. ತಯ್ಯಬ ಮೋಮಿನ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರು ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.