ತಾಳಿಕೋಟಿ ಸಹಕಾರಿ ಬ್ಯಾಂಕ ಆಡಳಿತ ಮಂಡಳಿಗೆ ಸತ್ಕಾರ

Salute to Talikoti Co-operative Bank Management Board

ತಾಳಿಕೋಟಿ ಸಹಕಾರಿ ಬ್ಯಾಂಕ ಆಡಳಿತ ಮಂಡಳಿಗೆ ಸತ್ಕಾರ 

ತಾಳಿಕೋಟಿ 15: ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದಿ.11ರಂದು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ  ಡಾ. ಎಸ್ ಎಮ್ ಸಜ್ಜನ ಸರ್ ಅವರು ತಾಳಿಕೋಟಿ ಪಟ್ಟಣ ಸಹಕಾರಿ ಬ್ಯಾಂಕ ನಿಯಮಿತ ತಾಳಿಕೋಟಿ ಚುನಾಯಿತ ನೂತನ ಅಧ್ಯಕ್ಷ, ಉಪಾದ್ಯಕ್ಷ ಹಾಗೂ ನಿರ್ದೇಶಕರ ಮಂಡಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದರು. 

 ಅದ್ಯಕ್ಷ ಕೆ. ಸಿ. ಸಜ್ಜನ, ಉಪಾಧ್ಯಕ್ಷ ಸಿ.ಎಸ್‌. ಯಾಳಗಿ, ನಿರ್ದೇಶಕರುಗಳಾದ ಆಯ್‌. ಬಿ. ಬಿಳೇಬಾವಿ, ಎಮ್‌.ಎಸ್‌.ಸರಶೆಟ್ಟಿ, ಡಿ ಎಸ್ ಹೆಬಸೂರ, ಎಸ್ ಸಿ ಪಾಟೀಲ್, ಎ.ಬಿ ಹಜೇರಿ, ಡಿ.ಕೆ ಪಾಟೀಲ್, ಪಿ ವ್ಹಿ ಹಜೇರಿ, ಜಿ.ಬಿ ಕೊಡಗಾನೂರ, ಎಸ್ ವ್ಹಿ ಬಡವಳ್ಳಿ, ಆರ್ ಬಿ ಕಟ್ಟಮನಿ, ಎಸ್ ವಾಯ್ ಬರದೆನಾಳ ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳು ಸನ್ಮಾನಿಸಲಾಯಿತು.  

 ಡಾ. ಎಸ್ ಎಮ್ ಸಜ್ಜನಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಮುಖ್ಯ ಕಾರ್ಯದರ್ಶಿ ವಿವೇಕಾನಂದ ಎಸ್ ಸಜ್ಜನಸ್ವಾಗತಿಸಿದರು. ಬ್ಯಾಂಕಿನ ಅಧ್ಯಕ್ಷ ಕೆ.ಸಿ ಸಜ್ಜನ ರವರು ಹಾಗೂ ಎಮ್‌. ಎಸ್‌.ಸರಶೆಟ್ಟಿ ಮಾತನಾಡಿ ಕೃತಜ್ಞತೆಯನ್ನು ಸಲ್ಲಿಸಿದರು  

ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಬಿ.ಎಸ್‌.ಮಾಲಿಪಾಟೀಲ್ ಸರ್ ಆರ್‌.ಎಸ್‌.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯು ಕಾಲೇಜ್ ಪ್ರಾಚಾರ್ಯ ಕಿಶೋರಗೌಡ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಜಿ.ಎನ್‌.ಪಾಟೀಲ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಕಲ್ಮೇಶ ನಿರೂಪಿಸಿದರು.