ಗೋಕಾಕ 02: ಖಚಿತ ಮಾಹಿತಿ ಮೇರೆಗೆ ನಗರದ ವಡ್ಡರಗಲ್ಲಿಯಲ್ಲಿ ನಗರ ಠಾಣೆ ಪೋಲಿಸರು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಒರ್ವ ವ್ಯಕ್ತಿಯನ್ನು ಬಂಧಿಸಿ. ಸುಮಾರು 700ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ನಗರದ ವಿವಿಧ ಪ್ರದೇಶಗಳಲ್ಲಿ ಯುವಕರು ಗಾಂಜಾ ಚಟಕ್ಕೆ ಬಲಿಯಾಗುತ್ತಿರುವ ಮಾಹಿತಿಯನ್ನಾಧರಿಸಿ ಗಾಂಜಾ ವಾಹನ ಸಹಿತ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ವಡ್ಡರಗಲ್ಲಿಯ ಇಸ್ಮಾಯಿಲ್ ಶಭಾಶಖಾನ ತಿಳಿದು ಬಂದಿದ್ದು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ. ಡಿವೈಎಸ್ಪಿ ಡಿ ಟಿ ಪ್ರಭು ಅವರ ಮಾರ್ಗದರ್ಶನದಲ್ಲಿ ಶಹರಠಾಣೆ ಪಿಎಸೈ ಶ್ರೀಶೈಲ ಬ್ಯಾಕೂಡ ಹಾಗೂ ಸಿಬ್ಬಂಧಿ ಕಾಯರ್ಾಚರಣೆ ನಡೆಸಿದರು. ಈ ಕುರಿತು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.