ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ಸಾಕ್ಷಿ ನೇರ್ಲಿ ಉತ್ತಮ ಸಾಧನೆ
ಬೆಳಗಾವಿ, 08 : ದ್ವೀತಿಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ನಗರದ ಆರ್ ಎಲ್ ಎಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾಕ್ಷಿ ಸುರೇಶ್ ನೇರ್ಲಿ ಶೇ. 95 ರಷ್ಟು ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.ಭೌತಶಾಸ್ತ್ರ ವಿಷಯದಲ್ಲಿ -96, ರಸಾಯನಶಾಸ್ತ್ರ - 98, ಗಣಿತ - 92, ಕಂಪ್ಯೂಟರ್ ಸೈನ್ಸ್- 96,ಇಂಗ್ಲಿಷ್- 94 ಹಾಗೂ ಹಿಂದಿ- 94 ಅಂಕಗಳನ್ನು ಪಡೆಯುವ ಮೂಲಕ ಶೇ. 95 ರಷ್ಟು ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜು ಬೋಧಕ ವರ್ಗ, ಆಡಳಿತ ಮಂಡಳಿ, ಪೋಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಾಧನೆಗೈದ ಸಾಕ್ಷಿ, ಪತ್ರಕರ್ತ ಸುರೇಶ್ ನೇರ್ಲಿ ಅವರ ಪುತ್ರಿಯಾಗಿದ್ದಾಳೆ.