ಶೈಕ್ಷಣಿಕ ಜೀವನದಲ್ಲಿ ಎಸ್.ಎಸ್.ಎಲ್.ಸಿ ಬಹುಮುಖ್ಯ ಘಟ್ಟ

ಲೋಕದರ್ಶನ ವರದಿ

ಹರಪನಹಳ್ಳಿ ಜ.30: ವಿದ್ಯಾಥರ್ಿಗಳ ಜೀವನದಲ್ಲಿ 10ನೇತರಗತಿ ಪರೀಕ್ಷೆಗಳು ಅತ್ಯಂತ ಬಹುಮುಖ್ಯ ಘಟವಾಗಿದ್ದು, ಮುಂದಿನ ಶೈಕ್ಷಣಿಕ ಜೀವನದಲ್ಲಿ ನಿರ್ಧರಿಸುವಂತಾಗಿದೆ ಎಂದು ತಹಶೀಲ್ದಾರ ಕೆ.ರಾಘವೇಂದ್ರರಾವ್ ಹೇಳಿದರು. 

ಕನರ್ಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ತಾಲೂಕು ಘಟಕ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ.ವಿದ್ಯಾಥರ್ಿಗಳಿಗೆ ಮಾರ್ಗದರ್ಶಕ ತರಗತಿಗಳನ್ನು ಜಿ.ಎಸ್.ಶಿವರುದ್ರಪ್ಪನವರ ಸಂಕಲ್ಪಗೀತೆ ಪಧ್ಯವಾಚನ ಮಾಡುವುದುದರೊಂದಿಗೆ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಎಸ್.ಎಸ್.ಎಲ್.ಸಿ.ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ ಅನೇಕ ಕಾರ್ಯಕ್ರಮಗಳನ್ನು ರೂಪಸಿಲಾಗಿದ್ದು, ಅನುಷ್ಠಾನಗೊಳಿಸಬೇಕು ಎಂದರು.

ತಾ.ಪಂ.ಇಒ ಯು.ಎಚ್.ಸೋಮಶೇಖರ ಮಾತನಾಡಿ ಶೈಕ್ಷಣಿಕ ಕಾರ್ಯಕ್ರಮಕ್ಕೆ ತಾಲೂಕು ಆಡಳಿತ ಸಂಪೂರ್ಣ ಬೆಂಬಲವಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗರಾಜ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ.ಚಂದ್ರಪ್ಪ, ಸಮಾಜ ಕಲ್ಯಾಣಾಧಿಕಾರಿ ಡಾ. ಈ.ಮಲ್ಲಿಕಾಜರ್ುನ,ಬಿಸಿಎಂ ಇಲಾಖೆ ಎಂ.ಪಿ.ಎಂ.ಅಶೋಕ, ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ, ವಸತಿ ನಿಲಯದ ಮೇಲ್ವಿಚಾರಕ ಬಿ.ಸಿ.ಎಂ.ಸಂಗಮೇಶ ಇದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ತಾಲೂಕ ಅಧ್ಯಕ್ಷ ಟಿ.ಪಿ.ವೀರೇಂದ್ರ ವಹಿಸಿದ್ದರು. ಆರಂಭದಲ್ಲಿ ಎಸ್.ಚಂದ್ರಪ್ಪ ಪ್ರಾರ್ಥನ ಗೀತೆ ಹಾಡಿದರು.ಎಲ್.ಧರ್ಮನಾಯ್ಕ ಸ್ವಾಗತಿಸಿದರು. ಭಿಮಾನಾಯ್ಕ ವಂದಿಸಿದರು.