ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣಾ ಕಾರ್ಯಕ್ರಮದ
ಧಾರವಾಡ 04: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಕೇವಲ ಕಾಟಾಚಾರಕ್ಕಾಗಿ ಆಗಬಾರದು. ಶಿಕ್ಷಕರು ಹೇಳುತ್ತಿರುವ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡು ಮನದಟ್ಟು ಮಾಡಿಕೊಳ್ಳಬೇಕು. ಕೇವಲ ತರಗತಿಗಳಲ್ಲಿ ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಸಾಧ್ಯವಿಲ್ಲ. ಶಾಲಾ ಸಮಯವನ್ನು ಹೊರತು ಪಡಿಸಿ ಮನೆಯಲ್ಲು ಸಹ ಅಭ್ಯಾಸಕ್ಕಾಗಿ ಸಮಯವನ್ನು ನಿಗದಿ ಮಾಡಿಕೊಳ್ಳಬೇಕು ಎಂದು ಜನತಾ ಶಿಕ್ಷಣ ಸಮಿತಿಯ ವಿದ್ಯಾಗಿರಿ, ಧಾರವಾಡ ಶಾಲಾ ಶಿಕ್ಷಣ ಇಲಾಖೆ (ಉಪನಿರ್ದೇಶಕರ ಕಛೇರಿ) ಧಾರವಾಡ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣಾ ಕಾರ್ಯಕ್ರಮವನ್ನು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಿರಂತರ ಹಾಗೂ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಶಿಕ್ಷಕರು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಉತ್ಕೃಷ್ಟದ ಶಿಕ್ಷಣ ನೀಡಬೇಕು. ಕ್ಲೀಷ್ಟಕರವಾದ ಸಂಗತಿಗಳಿದ್ದಲ್ಲಿ ಹೆಚ್ಚಿನ ತರಗತಿಗಳನ್ನು ಆಯೋಜಿಸುವ ಮೂಲಕ ಮಕ್ಕಳು ವಿದ್ಯಾಭ್ಯಾಸದಲ್ಲಿ ಎದುರಿಸುವ ಸಮಸ್ಯೆಗಳನ್ನು ಬಗೆ ಹರಿಸಬೇಕು. ಗೈರು ಹಾಜರಾಗದಂತೆ ವಿದ್ಯಾರ್ಥಿಗಳು ತರಗತಿಗಳಿಗೆ ಬಂದರೆ ಶಾಲೆಯಲ್ಲಿ ಮಾಡಿದ ಪಾಠಗಳು ಅರ್ಥವಾಗುತ್ತವೆ. ಪ್ರತಿಯೊಂದು ವಿಷಯಗಳ ಮೇಲೆ ಆಗಾಗ ಪರೀಕ್ಷೆಗಳ ಆಯೋಜನೆ, ಪಾಲಕರ ಸಭೆ ಏರಿ್ಡಸಿ ಅವರ ಕ್ಷಮತೆ ಬಗ್ಗೆ ಪರೀಶೀಲಿಸುತ್ತಿರಬೇಕು. ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಮಟ್ಟ ಸುಧಾರಿಸಲು ರಸಪ್ರಶ್ನೆ, ಅತಿಥಿ ಉಪನ್ಯಾಸಗಳು ಸಹಕಾರಿಯಾಗುತ್ತವೆ ಹಾಗಾಗಿ ಇಂತಹ ಫಲಿತಾಂಶ ಸುಧಾರಣಾ ಕಾರ್ಯಕ್ರಮಗಳ ಆಯೋಜನೆ ಕೂಡ ಪರಿಣಾಮಕಾರಿಯಾದದ್ದು. ನಮ್ಮ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಎಲ್ಲ ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು, ಈ ಫಲಿತಾಂಶ ಸುಧಾರಣೆ ಕಾರ್ಯಾಗಾರವನ್ನು ಕೇವಲ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗಷ್ಟೇ ಮಾಡದೇ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳಿಗೂ ಸಹಾಯಕವಾಗಲೆಂದು ಆಯೋಜಿಸಲಾಗಿದೆ. ಈ ಕಾರ್ಯಾಗಾರದ ಲಾಭವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಂಡು ಉತ್ತಮ ಫಲಿತಾಂಶ ಪಡೆಯಲಿ ಎಂದು ಹಾರೈಸಿದರು.
ಧಾರವಾಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್ ಎಸ್ ಕೆಳದಿಮಠರವರು ಮಾತನಾಡಿ "ಬದಲಾವಣೆ ಪ್ರಕೃತಿ ನಿಯಮ. ಮಕ್ಕಳ ಮನಸ್ಸು ಮೃದುವಾಗಿರುತ್ತದೆ. ಅದಕ್ಕೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ. ಆ ಕಾರಣದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
ಈ ಕಾಯಕ್ರಮಕ್ಕೆ ಧಾರವಾಡ ಸುತ್ತಮುತ್ತಲಿನ ಶಾಲೆಯ ಒಟ್ಟು 3000 ವಿದ್ಯಾರ್ಥಿಗಳು ಹಾಜರಾಗಿದ್ದರು.
ಮನೋಹರ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಮಹಾವೀರ ಉಪಾಧ್ಯೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್ ಕೆ ನಡುವಿನಕೇರಿ ಸ್ವಾಗತಿಸಿದರು. ಡಾ. ಸೂರಜ್ ಜೈನ, ಪ್ರದೀಪ್ ಆಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಸಿಂದಗಿ, ಉಮೇಶ ಬೊಮ್ಮಕ್ಕನವರ ಉಪಸ್ಥಿತರಿದ್ದರು.