ಧಾರವಾಡ 08: ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯದಿಂದ ಈಮೊದಲೇ ತಿಳಿಸಿದಂತೆ ಧಾರವಾಡ ಶಹರ ವ್ಯಾಪ್ತಿಯಲ್ಲಿನ ಎಲ್ಲ ಮಾಧ್ಯಮದ ಪ್ರೌಢಶಾಲಾ ಮಕ್ಕಳಿಗೆ ಎಲ್ಲ ವಿಷಯಗಳಲ್ಲಿ ಪ್ರಥಮ ಸೆಮಿಸ್ಟರ್ ಸಾಮಥ್ರ್ಯದ ಮೇಲೆ ಇಲಾಖೆಯಿಂದ ಪರೀಕ್ಷೆ ತೆಗೆದುಕೊಳ್ಳುವ ಕಾರ್ಯವನ್ನು ಈಗಾಗಲೇ ಹಲವು ಶಾಲೆಗಳಲ್ಲಿ ತೆಗೆದುಕೊಳ್ಳಲಾಗಿದ್ದು, ಇಂದು ಕೂಡ ಆರ್. ಎಲ್.ಎಸ್. ಪ್ರೌಢಶಾಲೆಯಲ್ಲಿ ನಡೆಸಲಾಯಿತು.
ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವದು, ಕಲಿಕೆಯನ್ನು ಗಟ್ಟಿಗೊಳಿಸುವದು, ಕಲಿಕಾ ಗುಣಮಟ್ಟ ಸುಧಾರಿಸುವದರೊಂದಿಗೆ ಶಾಲಾ ಗುಣಮಟ್ಟ ಎತ್ತರಿಸುವದು ಹಾಗೂ ಶಾಲೆಗೆ ದಾಖಲಾದ ಪ್ರತಿ ಮಗು ಅತೀಅವಶ್ಯ ಸಾಮಥ್ರ್ಯ ಗಳಿಸುವ ಸಜ್ಜುಗೊಳಿಸುವ ಉದ್ದೇಶದಿಂದ ಪರೀಕ್ಷೆ ನಡೆಸಲಾಯಿತು. ಮಕ್ಕಳು ಉತ್ಸಾಹ ತೋರಿಸಿದರು. ಈ ಕಾರ್ಯದಲ್ಲಿ ಶಹರವಲಯದ ಕ್ಷೇತ್ರಶಿಕ್ಷಣಾಧಿಕಾರಿ ಎ.ಎ.ಖಾಜಿ, ಸ್ವತಃ ಉಪಸ್ಥಿತರಿದ್ದರು. ಉಪ ಪ್ರಾಚಾರ್ಯ ವ್ಹಿ.ಪಿ.ಹಿರೇಮಠ ಮತ್ತು ಆರ್. ಎಲ್.ಎಸ್. ಪ್ರೌಢಶಾಲೆಯ ಎಲ್ಲ ಶಿಕ್ಷಕ/ಕಿಯರು ಹಾಜರಿದ್ದರು. ಎಲ್ಲ ವಿಷಯಗಳ ರಸ ಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ತನ್ಮೂಲಕ ಧಾರವಾಡ ಶಹರದ ವಾಷರ್ಿಕ ಪರಿಣಾಮ ಸುಧಾರಣೆ ಹಾಗೂ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗೆ ಪ್ರಯತ್ನಿಸುವದು. ಈ ನಿಟ್ಟಿನಲ್ಲಿ ಎಲ್ಲ ಪ್ರೌಢಶಾಲಾ ಪ್ರಧಾನ ಗುರುಗಳು ಮತ್ತು ಎಲ್ಲ ವಿಷಯ & ಭಾಷಾ ಶಿಕ್ಷಕರು ಕಟ್ಟು ನಿಟ್ಟಾಗಿ ಕಾರ್ಯಪ್ರವೃತ್ತರಾಗಬೇಕೆಂದು ಎ.ಎ.ಖಾಜಿ ಅಭಿಪ್ರಾಯ ವ್ಯಕ್ತಪಡಿಸಿದರು.