ಎಸ್.ಕೆ ಫೌಂಡೇಶನ್ ಅಂಧರ ಬಾಳಿನ ಬೆಳಕು: ಆಜೂರೆ

ರಾಯಬಾಗ: ಪಟ್ಟಣದ ಡಾ.ಸದಾನಂದ ನಾಯಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ

ರಾಯಬಾಗ 28: ಮನುಷ್ಯನಿಗೆ ಕಣ್ಣು ಬಹಳ ಮುಖ್ಯ. ಕಣ್ಣು ಇದ್ದರೆ ಜಗತ್ತನ್ನೇ ನೋಡಬಹುದು. ರಾಯಬಾಗದ ಎಸ್.ಕೆ ಫೌಂಡೇಶನವು ಅಂಧರ ಬಾಳಿಗೆ ನೆರವಾಗಲು ಉಚಿತ ಶಸ್ತ್ರ ಚಿಕಿತ್ಸೆ ಏರ್ಪಡಿಸಿ ಹಲವಾರು ಜನ ಅಂಧರ ಬಾಳಿಗೆ ಬೆಳಕಾಗಿದೆ ಎಂದು ಹಾರೂಗೇರಿಯ ನಿವೃತ್ತ ಪಾಚಾರ್ಯ ಬಿ.ಆರ್.ಆಜೂರೆ ಹೇಳಿದರು. 

ಮಂಗಳವಾರ ಪಟ್ಟಣದ ಡಾ.ಸದಾನಂದ ನಾಯಿಕ ಆಸ್ಪತ್ರೆಯಲ್ಲಿ ಲಾಯನ್ಸ ಆಯ್ ಕೇಯರ ಆಸ್ಪತ್ರೆ ಮಿರಜ ಸಹಯೋಗದಲ್ಲಿ ರಾಯಬಾಗದ ಎಸ್.ಕೆ.ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. 

ಶಿಕ್ಷಕ ಬಿ.ಎಲ್.ಘಂಟಿ, ಎಸ್.ಕೆ.ಫೌಂಡೇಶನ ಅಧ್ಯಕ್ಷ ಲಖನ ಕಟ್ಟಿಕಾರ, ಡಾ.ಸದಾನಂದ ನಾಯಿಕ, ಡಾ.ಪ್ರೀತಲ್ ಜಗತಾಪ, ಡಾ.ಶ್ರೀಕಾಂತ ಕಾರವೇಕರ, ಸಂಜಯ ತಾಯಪ್ಪಗೋಳ, ಶಿವಪುತ್ರ ಹಾಡಕಾರ, ಮಹಾದೇವ ಶಿರಗೂರೆ, ಸಂಭಾಜಿ ತಪರಿ, ಶೇಖರ ಹಾರೂಗೇರಿ, ಅಪ್ಪು ಗಡ್ಡೆ, ಏಕನಾಥ ಮಾಚಕನೂರ, ಕಲ್ಲಪ್ಪ ಹಾರೂಗೇರಿ, ಅಶೋಕ ಅಂಗಡಿ, ಎಚ್.ಎಸ್.ಸಾನೆ, ವಾಸು ಮನ್ನಿಕೇರಿ, ಭರಮಾ ಮಾಚಕನೂರ, ಸಿದ್ದು ಪೂಜಾರಿ, ರವಿ ರಂಗೊಳಿ, ಪ್ರತಾಪ ತಾಯಪ್ಪಗೋಳ, ಕಲಾವತಿ ಅಪ್ಪುಗೋಳ, ಛಾಯಾ ಹಿತ್ತಲಮನಿ, ಸುನೀತಾ ತಪರಿ, ಆರತಿ ಕಟ್ಟಿಕಾರ ಸೇರಿದಂತೆ ಅನೇಕರು ಇದ್ದರು