ವಸತಿ ನಿಲಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಎಸ್‌ಎಫ್‌ಐ ಮನವಿ
ಹಾವೇರಿ 06: ದೇವಗಿರಿ ಗ್ರಾಮದ ಜಿಲ್ಲಾಧಿಕಾರಿ ಎದುರು ವಸತಿ ನಿಲಯ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳ ಪರಿಹಾರಕ್ಕಾಗಿ ಹಾಗೂ ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯಿಸಿ, ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರಜಿಲ್ಲಾಅಧಿಕಾರಿ ವಿ.ಎಸ್.ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಇಂಜಿನಿಯರಿಂಗ್ ಕಾಲೇಜ್‌ಆವರಣದಲ್ಲಿರುವ ಬಿಸಿಎಮ್ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆಆಹಾರದ ವ್ಯವಸ್ಥೆ ಮಾಡುವುದಿಲ್ಲ, ಅಗತ್ಯ ಮೂಲಭೂತ ಸೌಕರ್ಯಗಳಿಂದ ವಂಚನೆ ಮಾಡುತ್ತಿರುವುದು ಸರಿಯಲ್ಲಖಂಡನೀಯ ವಿಚಾರವಾಗಿದೆ. ಅನೇಕ ವಿದ್ಯಾರ್ಥಿಗಳಿಗೆ ಆಶ್ರಯವಾಗಿರುವ ಈ ವಸತಿ ನಿಲಯದಲ್ಲಿ ಸರ್ಕಾರ ನೀಡುವ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಮೇನ್‌ಚಾರ್ಟ್ ಪ್ರಕಾರವಾಗಿ ಊಟ, ಉಪಚಾರ, ಸೌಲಭ್ಯಗಳು ಸಿಗುತ್ತಿಲ್ಲವೆಂದು ವಿದ್ಯಾರ್ಥಿಗಳು ಅಳಲು ಹೇಳಿಕೊಂಡರು. ಸರಿಯಾದ ಸಮಯಕ್ಕೆ ಸರಿಯಾದಊಟದ ವ್ಯವಸ್ಥೆ ಮಾಡುತ್ತಿಲ್ಲಗುಣಮಟ್ಟದಆಹಾರ ನೀಡುವಂತೆ ಅನೇಕ ಬಾರಿ ಹೇಳಿದ್ದರೂ ಹಾಗೂ ಕಳೆದ ಕೆಲವು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆಎದುರಾಗಿದೆ.ಸರ್ಕಾರದಆಯುಕ್ತರಆದೇಶದ ಪ್ರಕಾರ ನೀಡಬೇಕೆಂದು ವಾರ್ಡನ್ ಹೇಳಿದ್ದಾರೆ.ಆದರೆ ಸರ್ಕಾರಿಅಡುಗೆ ಸಿಬ್ಬಂದಿಗಳು ಜಿಲ್ಲೆಯಊಟದ ಮೆನ್ ಬದಲಾವಣೆಇದೆರೊಟ್ಟಿ, ಚಪಾತಿ, ಪೂರಿ, ಇಡ್ಲಿ ಸೇರಿದಂತೆಇತರೆ ನಾವು ಅಡುಗೆ ಮಾಡುವುದಿಲ್ಲ ಎಂದು ವಾಗ್ದಾನ ಮಾಡುತ್ತಾರೆಎಂದು ವಿದ್ಯಾರ್ಥಿಗಳು ಆರೋಪಿಸಿದರು.ಅನೇಕ ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಹಾಸ್ಟೆಲ್ ಗಳಿಗೆ ಕರೆಂಟ್‌ಇಲ್ಲದ ಸಮಯದಲ್ಲಿಯುಪಿಎಸ್ ಅಳವಡಿಕೆ, ಉಚಿತ ವೈಫೈ, ಹೊಸ ಕಾಟ್ ಬೇಡ್, ತಟ್ಟೆ, ಉಪಕರಣಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆಎಂದು ಕೇವಲ ಭರವಸೆ ನೀಡುತ್ತಾರೆ.ಆಶ್ವಾಸನೆ ಬೇಡ ಸೌಲಭ್ಯ ಬೇಕು.ಸರ್ಕಾರಿಅಡುಗೆ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಬೇಕುಎಂದು ವಿದ್ಯಾರ್ಥಿಗಳು ಆರೋಪಿಸಿದರು.ಎಸ್‌ಎಫ್‌ಐಜಿಲ್ಲಾಧ್ಯಕ್ಷ ಬಸವರಾಜಎಸ್ ಮಾತನಾಡಿ, ಕೂಡಲೆ ಹಾಸ್ಟೆಲ್ ನಲ್ಲಿರುವಅವ್ಯವಸ್ಥೆಯನ್ನು ಸರಿಪಡಿಸಬೇಕು.ವಸತಿ ನಿಲಯದಲ್ಲಿನ ಕೆಲ ಸಮಸ್ಯೆಗಳ ಜೊತೆಗೆ ಸೂಕ್ತ ಆಹಾರದ ವ್ಯವಸ್ಥೆಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆತೊಂದರೆಯಾಗಿದೆ.
ಈ ಕೂಡಲೇಊಟದ ವ್ಯವಸ್ಥೆ ಸರಿಪಡಿಸಿ, ಉತ್ತಮಗುಣಮಟ್ಟದಆಹಾರ ನೀಡಬೇಕು ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ವಿದ್ಯಾರ್ಥಿ ವಿರೋಧಿ ನೀತಿ ಸರಿಯಲ್ಲ. ಜಿಲ್ಲೆಯಎಲ್ಲಾ ವಸತಿ ನಿಲಯಗಳಲ್ಲಿ ಆಹಾರದ ಮೆನ್‌ಚಾರ್ಟ್ ಬದಲಾವಣೆ ಮಾಡಿ ಬಾರಿದೊಡ್ಡ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಪ್ರತಿ ವಸತಿ ನಿಲಯಗಳಲ್ಲೂ ಆಯುಕ್ತರಆದೇಶದ ಪ್ರಕಾರಊಟದ ಮೆನ್ ಅಳವಡಿಸಬೇಕು.ಉಲ್ಲಂಘನೆ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕಾಗಿದೂರ ನೀಡಲಾಗುವುದುಎಂದು ಆಗ್ರಹಿಸಿದರು.ಉತ್ತಮ ಗುಣಮಟ್ಟದಆಹಾರ ಸೇರಿದಂತೆ ವಿದ್ಯಾರ್ಥಿನಿಯರ ನ್ಯಾಯಯುತಎಲ್ಲಾ ಬೇಡಿಕೆಗಳನ್ನು ಒಂದು ವಾರದ ಒಳಗೆ ಈಡೇರಿಸಲು ಅಧಿಕಾರಿಗಳು ಮುಂದಾಗಬೇಕುಒಂದು ವೇಳೆ ನಿರ್ಲಕ್ಷಿಸಿದರೆ ಹಾಸ್ಟೆಲ್‌ಎದುರು ಬೃಹತ್ ಹೋರಾಟ ನಡೆಸಲಾಗುವುದುಎಂದುಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುನಿಲ್ ಕುಮಾರ್‌ಎಲ್, ಪ್ರಶಾಂತ್‌ಎಚ್, ಗುಡ್ಡಪ್ಪಎನ್ ಜಿ, ಪ್ರವೀಣ ಕೆ, ಕೃಷ್ಣ ಎಸ್, ಬಸವನಗೌಡ ಕೆ, ಮಧುಸೂದನ್‌ಎಮ್ ಸಿದ್ದಲಿಂಗೇಶ ಆರ್, ಕಲ್ಲನಗೌಡ ಡಿ, ವಿನಯ್ ಹೆಚ್,ರವಿ ಆರ್ ಡಿ, ಸಚಿನ್‌ಎಲ್ ಸಿ, ಅಭಿಷೇಕ್‌ಎಸ್ ಡಿ, ಸಂದೀಪ್ ಎ ಕೆ, ಸುನೀಲಗೌಡ್ರು ಸೇರಿದಂತೆಅನೇಕರು ಪಾಲ್ಗೊಂಡಿದ್ದರು.