ಎಸ್.ಡಿ.ಎಂ.ತಾಂತ್ರಿಕ, ಅಭಿಯಾಂತ್ರಿಕ ಮಹಾವಿದ್ಯಾಲಯ ಸಂಸ್ಥಾಪನಾ ದಿನಾಚರಣೆ

ಧಾರವಾಡ 15: ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ.14ರಂದು ಧ್ವಜಾರೋಹಣ ಮಾಡುವ ಮೂಲಕ 40 ನೇ ಸಂಸ್ಥಾಪನಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವ ಚಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಎಸ್.ಡಿ.ಎಂ ಮಹಾವಿದ್ಯಾಲಯವು ತಾಂತ್ರಿಕ ಶಿಕ್ಷಣ ಸೇವೆಯಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಒದಗಿಸುತ್ತಿದೆ ಎಂದು ಪ್ರಶಂಶಿಸಿದರು. ಯಾವುದೇ ಒಂದು ಸಂಸ್ಥೆಯು ಉತ್ತುಂಗಕ್ಕೆ ಏರಬೇಕಾದರೆ ಅಲ್ಲಿಯ ಮಾನವ ಸಂಪನ್ಮೂಲ, ಗ್ರಂಥಾಲಯ, ಉತ್ತಮವಾದ ಪ್ರಯೋಗಾಲಯಗಳು ಮತ್ತು ಉತ್ತಮ ಆಡಳಿತ ವರ್ಗ ಅತೀ ಮುಖ್ಯವಾಗಿದೆ. ಎಸ್.ಡಿ.ಎಂ ಮಹಾವಿದ್ಯಾಲಯವು ಈ ಎಲ್ಲ ಅಂಶಗಳನ್ನು ಒಳಗೊಂಡಿದ್ದು ಭಾರತದಲ್ಲಿಯೇ ಅತ್ಯುತ್ತಮ ತಾಂತ್ರಿಕ ಮಹಾವಿದ್ಯಾಲಯವಾಗಿದೆ ಎಂದು ಶ್ಲಾಘಿಸಿದರು.  ಸಂಸ್ಥೆಯ 11 ಜನ ಹಿರಿಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದಶರ್ಿ ಜೀವಂಧರ್ಕುಮಾರ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲ ಡಾ.ಎಸ್.ಬಿ.ವಣಕುದುರೆಯವರು ಸ್ವಾಗತಿಸಿದರು. ಡೀನ್ [ವಿದ್ಯಾಥರ್ಿಕಲ್ಯಾಣ] ಡಾ.ಕೆ. ಗೋಪಿನಾಥ ವಂದಿಸಿದರು.